newsics.com
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಸದ್ಯ ತಮಿಳು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚೈತ್ರಾ ಆಚಾರ್ ಕೇಸರಿ ಬಣ್ಣದ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಚೈತ್ರಾ ಆಚಾರ್ ತಮ್ಮ ನಟನೆಯ ಜೊತೆಗೆ ತುಸು ಹೆಚ್ಚೇ ಬೋಲ್ಡ್ ಎನಿಸುವಂತಹ ಫೋಟೋ ಶೂಟ್ ಮೂಲಕ ಸದಾ ಸುದ್ದಿಯಲ್ಲಿರುವ ನಟಿ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟೂ ಪೀಸ್ ಡ್ರೆಸ್, ಸೀರೆಯಲ್ಲೇ ಕಾಣಿಸಿಕೊಳ್ಳುವ ಚೈತ್ರಾ, ಈ ಬಾರಿಯೂ ಕೇಸರಿ ಬಣ್ಣದ ಸಿಂಪಲ್ ಸೀರೆ ಧರಿಸಿ, ಅದಕ್ಕೆ ಮಲ್ಟಿ ಕಲರ್ ಸ್ಲೀವ್ ಲೆಸ್ ಬ್ಲೌಸ್ ಧರಿಸಿ, ಅಷ್ಟೇನೂ ಬೋಲ್ಡ್ ಅಲ್ಲದೇ, ಆದ್ರೆ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರೋದಂತೂ ನಿಜ.
ಸಿಂಪಲ್ ಲುಕ್ ಜೊತೆಗೆ ಹೈ ಪೋನಿಟೇಲ್ ಮತ್ತು ಕುತ್ತಿಗೆಗೊಂದು ನೆಕ್ ಪೀಸ್ ಧರಿಸಿ As vibrant as it may be ಎಂದು ಬರೆದು ಕೊಂಡಿದ್ದಾರೆ. ಸಿಂಪಲ್ ಲುಕ್ಕಲ್ಲಿ ತುಂಬಾ ಸುಂದರವಾಗಿ ಕಾಣಿಸ್ತಿದ್ದಾರೆ.
