Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Expensive watch ಚರ್ಚೆಗೆ ಗ್ರಾಸವಾಯ್ತು ಉಪಾಹಾರ ಸಭೆ: ದುಬಾರಿ ವಾಚ್ ಕಟ್ಟಿದ್ದ ಸಿಎಂ- ಡಿಸಿಎಂ, ಯಾರು ಯಾಕೆ ಕೊಟ್ಟರೆಂದು ಪ್ರಶ್ನಿಸಿದ ಬಿಜೆಪಿ
ಕರ್ನಾಟಕದೇಶಪ್ರಮುಖ

Expensive watch ಚರ್ಚೆಗೆ ಗ್ರಾಸವಾಯ್ತು ಉಪಾಹಾರ ಸಭೆ: ದುಬಾರಿ ವಾಚ್ ಕಟ್ಟಿದ್ದ ಸಿಎಂ- ಡಿಸಿಎಂ, ಯಾರು ಯಾಕೆ ಕೊಟ್ಟರೆಂದು ಪ್ರಶ್ನಿಸಿದ ಬಿಜೆಪಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಸಿಎಂ-ಡಿಸಿಎಂ ಅವರ ಉಪಾಹಾರ ಸಭೆ ಮುಂದುವರಿದಿದೆ. ಸಿದ್ದರಾಮಯ್ಯನವರು ಮೊನ್ನೆ ಅಷ್ಟೇ ತಮ್ಮ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಉಪಾಹಾರ ಆಯೋಜಿಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ (ಡಿ.2) ಡಿ.ಕೆ. ಶಿವಕುಮಾರ್ ತಮ್ಮ ಸದಾಶಿವನಗರದ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್ ಆಯೋಜಿಸಿದ್ದು, ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು, ಇಡ್ಲಿ ಉಣಬಡಿಸಿದ್ದಾರೆ.

ಈ ವೇಳೆ ಎಲ್ಲರ ಗಮನಸೆಳೆದದ್ದು ನಾಟಿ ಕೋಳಿ ಅಲ್ಲ. ಬದಲಿಗೆ ಉಭಯ ನಾಯಕರು ಧರಿಸಿದ್ದ ಒಂದೇ ಕಂಪನಿಯ ವಾಚ್.

ಇಂದಿನ ಬ್ರೇಕ್ ಫಾಸ್ಟ್ ವೇಳೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರ್ಟಿಯರ್ (Cartier) ಎನ್ನುವ ಕಂಪನಿಯ ವಾಚ್ ಧರಿಸಿರುವುದು ಎಲ್ಲರ ಗಮನಸೆಳೆದಿದ್ದು, ಇನ್ನು ಈ ಕಾರ್ಟಿಯರ್ ವಾಚ್‌ನ ಮಾರುಕಟ್ಟೆ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ. ಆಗಿದೆ.

ಸೇಮ್ ವಾಚ್ ಕಟ್ಟಿದ ಸಿಎಂ-ಡಿಸಿಎಂ
ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಮಾಧ್ಯಮ ಮುಂದೆ ಬಂದಾಗ ಒಂದೇ ರೀತಿ ವಾಚ್ ಕಟ್ಟಿದ್ದು, ಫೋಟೋದಲ್ಲಿ ಇಬ್ಬರ ವಾಚ್ ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್ ಎನ್ನುವುದು ಗೊತ್ತಾಗಿದೆ.

ಒಟ್ಟಿಗೆ ಬ್ರೇಕ್ ಫಾಸ್ಟ್ ಮಾತ್ರವಲ್ಲದೇ ಒಂದೇ ಕಂಪನಿಯ ವಾಚ್ ಕಟ್ಟುವ ಮೂಲಕ ನಾವಿಬ್ಬರೂ ಒಂದೇ ಎನ್ನುವ ಸಂದೇಶ ರವಾನಿಸಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ಪ್ರಶ್ನೆ ಇದಲ್ಲ, ಇದರ ಬೆಲೆ, ಈ ವಾಚ್ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ.

ಉಭಯ ನಾಯಕರು ಬೇಕಂತಲೇ ಸೇಮ್ ವಾಚ್ ಕಟ್ಟಿದ್ರಾ ಅಥವಾ ಕಾಕತಾಳೀಯ ಎಂಬಂತೆ ಅವರವರ ಪಾಡಿಗೆ ಅವರು ಧರಿಸಿಕೊಂಡು ಬಂದಿದ್ರಾ ಎನ್ನುವುದೇ ಪ್ರಶ್ನೆಯಾಗಿದೆ.

2016ರಲ್ಲಿ ಸಿದ್ದರಾಮಯ್ಯನವರ ಹ್ಯೂಬ್ಲೋಟ್ ವಾಚ್‌ನಂತೆ ಇದೀಗ ಕಾರ್ಟಿಯರ್ ವಾಚ್ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರೇ 43 ಲಕ್ಷ ರೂ. ಬೆಲೆಬಾಳುವ ಕಾರ್ಟಿಯರ್ ವಾಚ್ ಕಟ್ಟಿದ್ದೀರಿ. ರಾಜ್ಯಕ್ಕೆ ಯಾವ ಮಹತ್ತರ ಉಪಕಾರ ಮಾಡಿದಿರಿ ಎಂದು ನಿಮಗೆ ಈ ಲಕ್ಷ ಬೆಲೆಬಾಳುವ ಕಾರ್ಟಿಯರ್ ವಾಚ್ ಉಡುಗೊರೆಯಾಗಿ ಬಂದಿದೆ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವ ಕನ್ನಡಿಗರು ಎಂದು ಟೀಕಿಸಿದೆ.

ಕಾರ್ಟಿಯರ್ ಅತ್ಯಂತ ಲಕ್ಸುರಿ ವಾಚ್ ಬ್ರ್ಯಾಂಡ್ ಆಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕ್ರಿಸ್ಟಲ್ ಆ್ಯಂಟಿ ರಿಫ್ಲೆಕ್ಟಿವ್ ಗ್ಲಾಸ್ ಹೊಂದಿದ್ದು, ವಾಟರ್ ಪ್ರೂಫ್ ಆಗಿದೆ. ಇನ್ನು ಈ ವಾಚ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಳಕೆ ಮಾಡಲಾಗಿದೆ. 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ. ಈ ವಾಚ್‌ಗೆ 8 ವರ್ಷದ ವಾರೆಂಟಿ ಇದ್ದು, ವಾರೆಂಟಿ ಸಮಯದಲ್ಲಿ ವಾಚ್‌ಗೆ ಏನಾದರೂ ಆದರೆ ರಿಪ್ಲೇಸ್‌ಮೆಂಟ್ ಇರತ್ತೆ. ಹಾಗೇ ಸರ್ವೀಸ್ ಕೂಡ ಕಾಂಪ್ಲಿಮೆಂಟರಿ ಆಗಿರುತ್ತದೆ.

ಈ ಅತ್ಯಧುನಿಕ ವಾಚ್ ಅನ್ನು ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರೆಟಿಗಳು ಈ ಬ್ರ್ಯಾಂಡ್ ಬಳಕೆ ಮಾಡುತ್ತಾರೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ವಾಚ್ ಧರಿಸುತ್ತಾರೆ. ವಿಶೇಷವಾಗಿ ಬ್ರಿಟಿಷ್ ರಾಯಲ್ ಫ್ಯಾಮಿಲಿ ಹೆಚ್ಚಾಗಿ ಈ ವಾಚ್ ಬಳಕೆ ಮಾಡುತ್ತದೆ. ಈ ಪೈಕಿ ಪ್ರಿನ್ಸ್ ಡಯಾನ ಬಳಿ ಕಾರ್ಟಿಯರ್‌ ಬ್ರ್ಯಾಂಡ್ನ ಬಹುತೇಕ ಎಲ್ಲಾ ಮಾಡೆಲ್ ವಾಚ್‌ಗಳಿವೆ ಎನ್ನಲಾಗಿದೆ.

https://x.com/BJP4Karnataka/status/1995807685238030740?s=20

ಸಫಾರಿ ವೇಳೆ ಪ್ರತ್ಯಕ್ಷಗೊಂಡ ಹುಲಿಗಳ ದಂಡು;ವೈರಲ್ ವಿಡಿಯೋ ನೋಡಿ

ಮದುವೆ ಆಗಲು 2 ವರ್ಷ ಕಾಯಲ್ಲವೆಂದು 19 ವರ್ಷದ ಯುವಕ ಆತ್ಮಹತ್ಯೆ

TAGGED:BJP questions who gave it to them and whyLunch meeting sparks debate: CM and DCM wore the same expensive watch
Share This Article
Facebook Twitter Copy Link Print
Previous Article KSRTC ಬಸ್‌ ಟೈರ್‌ಗೆ ನಾಡಬಾಂಬ್ ಸಿಲುಕಿ ಸ್ಫೋಟ: ತಪ್ಪಿದ ದುರಂತ
Next Article ತೊಡೆ ಮುಟ್ತಾಳೆ, ಪಕ್ಕದಲ್ಲೇ ಕುಳಿತು‌ ಟೆಂಪ್ಟ್ ಮಾಡ್ತಾಳೆ… ಮಹಿಳಾ ಬಾಸ್ ವರ್ತನೆಯಿಂದ ನೊಂದ ಯುವ ಉದ್ಯೋಗಿ

Popular Posts

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?