newsics.com
ಚೀನಾ: ಚೀನಾದಲ್ಲಿ ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್ ಜೋರಾಗುತ್ತಿದ್ದು, ರಸ್ತೆಗಳಲ್ಲಿ ಸ್ಟಾಲ್ ಹಾಕಿ ಕುಳಿತು ಯುವತಿಯರು ಪ್ರೀತಿಯನ್ನು ಮಾರಾಟ ಮಾಡುತ್ತಿದ್ದಾರೆ.
ಸಿಂಗಲ್ಸ್ ಯುವಕರಿಗೆ ನನಗೂ ಒಂದು ಗೆಳತಿ ಬೇಕು, ಆಕೆಯನ್ನು ತಬ್ಬಿಕೊಳ್ಳಬೇಕು, ಆಕೆಗೆ ಸಿಹಿ ಮುತ್ತನ್ನು ನೀಡ್ಬೇಕು ಅಂದ್ರೆ ಈ ಸ್ಟ್ರೀಟ್ ಗರ್ಲ್‌ಫ್ರೆಂಡ್ ಮೊರೆ ಹೋಗಬಹುದು. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್ ಚೀನಾದಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಒಬ್ಬಂಟಿ ಯುವಕರು ಇದಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಿಂಗಲ್ಸ್ ಯುವಕರಿಗೆ ನನಗೂ ಒಂದು ಗೆಳತಿ ಬೇಕು, ಆಕೆಯನ್ನು ತಬ್ಬಿಕೊಳ್ಳಬೇಕು, ಆಕೆಗೆ ಸಿಹಿ ಮುತ್ತನ್ನು ನೀಡ್ಬೇಕು ಅಂದ್ರೆ ಈ ಸ್ಟ್ರೀಟ್ ಗರ್ಲ್‌ಫ್ರೆಂಡ್ ಮೊರೆ ಹೋಗಬಹುದು. ಚೀನಾದ ಶೆನ್ಜೆನ್ ನಗರದ ಬೀದಿ ಬೀದಿಯಲ್ಲೂ ಸ್ಟಾಲ್ ಹಾಕಿ ಕೂರುವ ಸ್ಟ್ರೀಲ್ ಗರ್ಲ್‌ಫ್ರೆಂಡ್‌ಗಳು ಪ್ರೀತಿಯನ್ನೇ ಮಾರಾಟಕ್ಕೆ ಇಟ್ಟಿದ್ದು, ಒಂಟಿತನವನ್ನು ಹೋಗಲಾಡಿಸಲು ಬಯಸುವ ಪುರುಷರು ಅವರ ಬಳಿ ಹೋಗುತ್ತಾರೆ.
ಅಪ್ಪುಗೆಗೆ 11 ರೂಪಾಯಿ (1 ಯುವಾನ್), ಕಿಸ್‌ಗೆ 110 ರೂ. (10 ಯುವಾನ್), ಜೊತೆಯಾಗಿ ಫಿಲ್ಮ್ ನೋಡಲು 150 ರೂ. (15 ಯುವಾನ್) ಪಾವತಿಸಬೇಕಾಗುತ್ತದೆ. ಯಾರಾದರೂ ಮನೆಕೆಲಸಗಳನ್ನು ಸ್ಟ್ರೀಟ್ ಗರ್ಲ್‌ಫ್ರೆಂಡ್ ಜೊತೆಯಾಗಿ ಮಾಡಲು ಬಯಸಿದೆ ಅವರು 2000 ರೂ. (20 ಯುವಾನ್) ಪಾವತಿ ಮಾಡಬೇಕಾಗುತ್ತದೆ.