Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health & Beauty | Menstrual masking ಇದೆಂಥ ವಿಚಿತ್ರ ಟ್ರೆಂಡ್? ಏನಿದು ಪಿರಿಯಡ್ ಫೇಸ್ ಮಾಸ್ಕ್!
ಆರೋಗ್ಯಪ್ರಮುಖಸೌಂದರ್ಯ

Health & Beauty | Menstrual masking ಇದೆಂಥ ವಿಚಿತ್ರ ಟ್ರೆಂಡ್? ಏನಿದು ಪಿರಿಯಡ್ ಫೇಸ್ ಮಾಸ್ಕ್!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube

newsics.com

Menstrual masking ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಶಿಷ್ಟ ಅಷ್ಟೆ ವಿಚಿತ್ರ ಟ್ರೆಂಡ್ ವೇಗವಾಗಿ ವೈರಲ್ ಆಗುತ್ತಿದೆ.

ಮಹಿಳೆಯರು ತಮ್ಮ ಪಿರಿಯಡ್ ಬ್ಲಡ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಯಂಗ್ ಆಗಿರುತ್ತದೆ ಎಂದು ನಂಬಲಾಗಿದೆ.

ಈ ಟ್ರೆಂಡ್‌‌ನ್ನು ಪಿರಿಯಡ್‌ ಫೇಸ್ ಮಾಸ್ಕ್ ಎಂದು ಕರೆಯಲಾಗುತ್ತದೆ. ಅನೇಕ ಮಹಿಳೆಯರು ಇದನ್ನು ನೈಸರ್ಗಿಕ ಫೇಶಿಯಲ್ ಎಂದು ಕರೆಯುತ್ತಾರೆ. ಇದು ವ್ಯಾಂಪೈರ್ ಫೇಶಿಯಲ್ ಅಥವಾ ಪಿಆರ್‌ಪಿಯಂತೆಯೇ ಪರಿಣಾಮ ಬೀರುತ್ತದೆ ಎಂದು ಹೇಳಿಕೊಳ್ಳುತ್ತಾರೆ.

ಆದರೆ ಇದು ನಿಜವೇ? ಪಿರಿಯಡ್ ಬ್ಲಡ್ ಮುಖಕ್ಕೆ ಹಚ್ಚುವುದರಿಂದ ನಿಜವಾಗಿಯೂ ಚರ್ಮ ಆರೋಗ್ಯಕರವಾಗಿರುತ್ತಾ ಮತ್ತು ಬೇಗನೆ ಹೊಳಪು ಬರುತ್ತಾ?
ಈ ಟ್ರೆಂಡ್ ಹಿಂದಿನ ತರ್ಕವೇನೆಂದರೆ, ಮುಟ್ಟಿನ ರಕ್ತವು ಕಾಂಡಕೋಶಗಳು ಮತ್ತು ಸೈಟೊಕಿನ್‌ಗಳನ್ನು ಹೊಂದಿರುತ್ತದೆ. ಇವು ಚರ್ಮವನ್ನು ಸರಿಪಡಿಸಬಹುದು ಮತ್ತು ಹೊಳಪನ್ನು ತರಬಹುದು ಎಂದು ನಂಬಲಾಗಿದೆ.

ಆದರೆ ಇದು ಕೇವಲ ಒಂದು ಥಿಯರಿ. ಸಂಶೋಧನೆ ಇನ್ನೂ ನಡೆಯುತ್ತಿದೆ ಎಂದು ಡಾ. ಮಾನ್ಸಿ ನರಲ್ಕರ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹೇಳಿಕೊಂಡಿದ್ದಾರೆ‌.

ಮುಟ್ಟಿನ ರಕ್ತವು ಕೇವಲ ಕಾಂಡಕೋಶಗಳಿಂದ ಮಾಡಲ್ಪಟ್ಟಿಲ್ಲ. ಇದು ಎಂಡೊಮೆಟ್ರಿಯಲ್ ಅಂಗಾಂಶ (ಗರ್ಭಾಶಯದ ಒಳಪದರ), ಯೋನಿ ಡಿಸ್ಚಾರ್ಜ್ ಮುಂತಾದ ಅನೇಕ ಹಲವು ಘಟಕಗಳನ್ನು ಒಳಗೊಂಡಿದೆ.

ಅಲ್ಲದೆ ಈ ರಕ್ತವು ಯೋನಿಯ ಮೂಲಕ ಹಾದುಹೋಗುವುದರಿಂದ ಇದು ವಿವಿಧ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಸಹ ಹೊಂದಿರುತ್ತದೆ. ಆದ್ದರಿಂದ ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸೋಂಕಿನ ಅಪಾಯ ಹೆಚ್ಚಿಸಬಹುದು.

ಪಿಆರ್‌ಪಿ ಅಥವಾ ವ್ಯಾಂಪೈರ್ ಫೇಶಿಯಲ್‌ನಂತೆಯೇ ಪಿರಿಯಡ್ ಬ್ಲಡ್ ಪರಿಣಾಮ ಬೀರುವುದಿಲ್ಲ. ಇದು ಕ್ರಿಮಿನಾಶಕವಾಗಿದೆ. ಆದರೆ ಪಿರಿಯಡ್ ಬ್ಲಡ್ ಹಾಗಲ್ಲ. ಇದು ಚರ್ಮಕ್ಕೆ ಪ್ರಯೋಜನಕಾರಿ ಎಂಬುದಕ್ಕೆ ಇನ್ನೂ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದಕ್ಕೆ ವಿರುದ್ಧವಾಗಿ ಇದು ಚರ್ಮಕ್ಕೆ ಹಾನಿಯನ್ನುಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ.

* ಇದು ನಿಮಗೆ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕನ್ನು ಉಂಟುಮಾಡಬಹುದು.
* ಚರ್ಮದ ಅಲರ್ಜಿ.
* ಮೊಡವೆಗಳು ಅಥವಾ ದದ್ದುಗಳು ಅಥವಾ ದೀರ್ಘಾವಧಿಯಲ್ಲಿ ಚರ್ಮಕ್ಕೆ ಹಾನಿಯಾಗುವ ಅಪಾಯವೂ ಹೆಚ್ಚಾಗಬಹುದು.
* ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನಿಮ್ಮ ಮುಖಕ್ಕೆ ಯಾವುದೇ ಕ್ರಿಮಿನಾಶಕವಲ್ಲದ ಉತ್ಪನ್ನವನ್ನು ಹಚ್ಚುವುದು ಹಾನಿಕಾರಕವಾಗಿದೆ.

ಆದ್ದರಿಂದ ಇಂತಹ ಟ್ರೆಂಡ್ ಅನುಸರಿಸುವುದನ್ನು ತಪ್ಪಿಸಿ

.
ನೀವು ನೈಸರ್ಗಿಕ ಹೊಳಪನ್ನು ಬಯಸಿದರೆ ಮೊದಲು ಸಾಕಷ್ಟು ನೀರು ಕುಡಿಯಿರಿ. ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಿ. ಆರೋಗ್ಯಕರ ಆಹಾರ ಸೇವಿಸಿ ಮತ್ತು ಪ್ರತಿದಿನ ವ್ಯಾಯಾಮ ಮಾಡಿ.

ಇದೆಲ್ಲವನ್ನೂ ಮೀರಿ ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ತಜ್ಞರು ಶಿಫಾರಸು ಮಾಡಿದ ಸೀರಮ್‌ಗಳು ಅಥವಾ ಇತರ ಚರ್ಮದ ಆರೈಕೆ ಉತ್ಪನ್ನಗಳನ್ನು ನೀವು ಬಳಸಬಹುದು.

Menstrual leave ಮುಟ್ಟಿನ ರಜೆ: ಸರ್ಕಾರದ ನಿರ್ಧಾರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್‌ಗಳ ಸಂಘ

TAGGED:Such a strange trend? What is a period face mask!
Share This Article
Facebook Twitter Copy Link Print
Previous Article Lauren Bell ದುಬಾರಿ ಮೊತ್ತಕ್ಕೆ RCB ಸೇರಿದ ಸುಂದರಿ ಲಾರೆನ್ ಬೆಲ್ ಈಗ ಇಂಟರ್ನೆಟ್ ಕ್ರಶ್!
Next Article Today’s Horoscope ಇಂದಿನ ರಾಶಿ ಭವಿಷ್ಯ 02-12-2025, ಮಂಗಳವಾರ, ನಿಮ್ಮ ಗ್ರಹಗತಿಗಳು ಹೇಗಿವೆ?

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?