Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಒಂದೇ ವಾರದಲ್ಲಿ ಟೊಮ್ಯಾಟೋ ದರ ದಿಢೀರ್ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರಿಗೆ ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ ವಾರ ಟೊಮ್ಯಾಟೋ ಕೆಜಿಗೆ 30-40 ರೂಪಾಯಿಗೆ ಮಾರಾಟವಾಗುತ್ತಿತ್ತು.
ಕಳೆದ 8-10 ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದ್ದು,ಪ್ರಸ್ತುತ ಕೆಜಿಗೆ 70 ರಿಂದ 80 ರೂಪಾಯಿಗೆ ಮಾರಾಟವಾಗ್ತಿದೆ. ಬೇಡಿಕೆಗೆ ತಕ್ಕಂತೆ ಟೊಮ್ಯಾಟೋ ಪೂರೈಕೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಟೊಮ್ಯಾಟೋ ದರ ಕೆಜಿಗೆ 150 ಏರಿಕೆಯಾಗುವ ಸಾಧ್ಯತೆಯಿದೆ.
ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಟೊಮೆಟೊ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ನಾಸಿಕ್ ನಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ.
ಟೊಮೆಟೋ ಬೆಲೆ ಏರಿಕೆಗೆ ಇತರ ಕಾರಣವೇನು?
– ಬೇಡಿಕೆಗೆ ತಕ್ಕಂತೆ ಟೊಮೆಟೊ ಪೂರೈಕೆಯಾಗದೆ ಇರುವುದು.
– ಅಕಾಲಿಕ ಮಳೆಯಿಂದಾಗಿ ಟೊಮೆಟೊ ಬೆಳೆಯಲ್ಲಿ ಏರುಪೇರು, ಪೂರೈಕೆಯಲ್ಲಿ ಕುಠಿತ
– ಹಲವೆಡೆ ಬೆಳೆ ರೋಗದಿಂದ ಕಡಿಮೆಯಾದ ಇಳುವರಿ
– ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇಲ್ಲದಿರುವುದು