Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನೀರಿನ ಪೈಪ್‌ಲೈನ್ ಪರಿಶೀಲಿಸುತ್ತಿದ್ದ ವೇಳೆ ನಂದ್ ಸಿಂಗ್ ಎಂಬುವವರ ಮೇಲೆ ಹೆಬ್ಬಾವು ದಾಳಿ ಮಾಡಿ ಕಾಲಿಗೆ ಸುತ್ತಿಕೊಂಡಿದ್ದು, 10 ನಿಮಿಷಗಳ ಕಾಲ ಒದ್ದಾಡಿರುವ ಘಟನೆ ರಾಜಸ್ಥಾನದ ಕೋಟಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ @kotacityraj ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕೋಟಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಸ್ಥಾವರದ ಬಿಳಿ ನೀರಿನ ಪೈಪ್‌ಲೈನ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಅದನ್ನು ರಿಪೇರಿ ಮಾಡಲು ಹೋದಾಗ, ಅಲ್ಲೇ ಇದ್ದ ಹೆಬ್ಬಾವು ನನ್ನ ಮೇಲೆ ದಾಳಿ ಮಾಡಿದೆ. ಕಾಲನ್ನು ಬಿಗಿಯಾಗಿ ಹಿಡಿದು ಸುಮಾರು 10 ನಿಮಿಷಗಳ ಕಾಲ ಉಸಿರುಗಟ್ಟಿಸಿದೆ. ನಂತರ ನನ್ನ ಸಹೋದ್ಯೋಗಿಗಳು ಬಂದು ಬಿಡಿಸಿದ್ದಾರೆ ಎಂದು ನಂದ್ ಸಿಂಗ್ ಹೇಳಿದ್ದಾರೆ.
ಇನ್ನು ಅಧಿಕಾರಿಗಳು ಈ ಬಗ್ಗೆ ವರದಿಯೊಂದನ್ನು ನೀಡಿದ್ದಾರೆ. ನಂದ್ ಸಿಂಗ್ ಅವರ ಮೇಲೆ ಹೆಬ್ಬಾವು ದಾಳಿ ಮಾಡಿದೆ, ಆದರೆ ಯಾವುದೇ ಅಪಾಯ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಇದೀಗ ಅವರು ಎಂಬಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.
https://www.instagram.com/reel/DRb_IR3ge66/?igsh=cGszcXFyczRwOGFw