Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇತ್ತೀಚಿನ ದಿನಗಳಲ್ಲಿ ಪುರುಷರ ಫಲವತ್ತತೆ ದರಗಳು ಗಣನೀಯವಾಗಿ ಕುಸಿಯುತ್ತಿದ್ದು, ಈ ಕುಸಿತಕ್ಕೆ ಸಂಬಂಧಿಸಿದ ಹೊಸ ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.
ಕೃಷಿಯಲ್ಲಿ ವ್ಯಾಪಕವಾಗಿ ಬಳಸುವ ಸಾಮಾನ್ಯ ನಿಯೋನಿಕೋಟಿನಾಯ್ಡ್ಸ್ ಎಂಬ ಕೀಟನಾಶಕಗಳು ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ. ವೀರ್ಯಾಣುಗಳ ಸಂಖ್ಯೆಯನ್ನು ನಿರಂತರವಾಗಿ ಕಡಿಮೆ ಮಾಡುತ್ತಿವೆ ಎಂದು ಅಧ್ಯಯನಗಳು ಹೇಳಿವೆ.
ಈ ಕೀಟನಾಶಕಗಳು ಪ್ರಯೋಗಾಲಯದಲ್ಲಿ ಬೆಳೆಸಿದ ಗಂಡು ಪ್ರಾಣಿಗಳ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಅವುಗಳ ಸಂತಾನೋತ್ಪತ್ತಿ ವ್ಯವಸ್ಥೆಗೆ ಹಾನಿ ಮಾಡುತ್ತವೆ ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ.
ಈ ರಾಸಾಯನಿಕಗಳ ವ್ಯಾಪಕ ಬಳಕೆಯಿಂದಾಗಿ, ಅವು ಮನುಷ್ಯರ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನಡೆದ ಅಧ್ಯಯನಗಳ ಸಾರಾಂಶವನ್ನು ಒಳಗೊಂಡಿರುವ ಹೊಸ ವಿಮರ್ಶೆಯು ‘ಎನ್ವಿರಾನ್ಮೆಂಟಲ್ ರಿಸರ್ಚ್ ಜರ್ನಲ್’ನಲ್ಲಿ ಪ್ರಕಟಗೊಂಡಿದೆ. ಈ ವಿಮರ್ಶೆ 2005 ಮತ್ತು 2025 ರ ನಡುವೆ ನಡೆಸಲಾದ 21 ಪ್ರಯೋಗಗಳನ್ನು ವಿಶ್ಲೇಷಿಸಿದ್ದು, ನಿಯೋನಿಕೋಟಿನಾಯ್ಡ್ ರಾಸಾಯನಿಕಗಳಿಗೆ ಒಡ್ಡಿಕೊಂಡ ಗಂಡು ಇಲಿಗಳ ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ರಚನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಿವೆ. ಅಷ್ಟೇ ಅಲ್ಲ, ಅವುಗಳಲ್ಲಿ ವೃಷಣ ಅಂಗಾಂಶಕ್ಕೆ ಹಾನಿಯಾಗಿರುವುದು ಸಹ ದೃಢಪಟ್ಟಿದೆ.
ಆಹಾರದಲ್ಲಿನ ಕೀಟನಾಶಕಗಳ ಉಳಿಯುವಿಕೆ ಕ್ರಮೇಣ ಫಲವತ್ತತೆಯ ಮೇಲೆ ಪರಿಣಾಮ ಬೀರುವುದರಿಂದ ಈ ಅಧ್ಯಯನವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಶೋಧನೆ ಹೇಳಿದೆ.
ಈ ಸಂಶೋಧನೆಯು ಪ್ರಾಣಿಗಳ ಮೇಲೆ ನಡೆಸಿದ್ದರೂ, ಎಲ್ಲಾ ಸಸ್ತನಿಗಳಲ್ಲಿ ವೀರ್ಯ ಉತ್ಪಾದನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಆದ್ದರಿಂದ ಪ್ರಾಣಿಗಳಲ್ಲಿ ಕಂಡುಬರುವ ಪರಿಣಾಮಗಳು ಮನುಷ್ಯರ ಆರೋಗ್ಯಕ್ಕೂ ಕಳವಳಕಾರಿ ವಿಷಯವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಮೂರು ವರ್ಷಕ್ಕಿಂತ ಮೇಲ್ಪಟ್ಟ ಅರ್ಧದಷ್ಟು ಜನರ ದೇಹದಲ್ಲಿ ಈ ನಿಯೋನಿಕೋಟಿನಾಯ್ಡ್ಗಳ ರಾಸಾಯನಿಕ ಕುರುಹುಗಳು ಕಂಡುಬಂದಿವೆ. ಮಕ್ಕಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ಕೀಟನಾಶಕಗಳು ಸಸ್ಯಗಳಲ್ಲಿ ಸಂಪೂರ್ಣವಾಗಿ ಹೀರಲ್ಪಡುವುದರಿಂದ, ಹಣ್ಣುಗಳು ಮತ್ತು ತರಕಾರಿಗಳನ್ನು ನೀರಿನಲ್ಲಿ ತೊಳೆದರೂ ಸಹ ಅವುಗಳ ಕುರುಹುಗಳು ಉಳಿದಿರುತ್ತವೆ.
ಸಂಶೋಧನೆಯ ಪ್ರಕಾರ, ಈ ರಾಸಾಯನಿಕಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತವೆ. ಇದು ವೀರ್ಯ ಕೋಶಗಳು ಮತ್ತು ಡಿಎನ್ಎಗೆ ಹಾನಿಯನ್ನುಂಟುಮಾಡಿ, ಹಾರ್ಮೋನ್ ಸಿಗ್ನಲಿಂಗ್ ಮೇಲೆ ಪರಿಣಾಮ ಬೀರುವುದರಿಂದ ವೀರ್ಯ ಉತ್ಪಾದನೆಯನ್ನು ಅಡ್ಡಿಪಡಿಸುತ್ತವೆ. ಇದು ವೀರ್ಯ ಚಲನಶೀಲತೆ ಮತ್ತು ಪುರುಷರ ಫಲವತ್ತತೆ ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಸಂಶೋಧನೆ ಸ್ಪಷ್ಟಪಡಿಸಿದೆ.
ಲೈಂಗಿಕ ಸಮಸ್ಯೆ ಪರಿಹರಿಸುವುದಾಗಿ 48 ಲಕ್ಷ ರೂ. ವಂಚನೆ : ಔಷಧಿಯಿಂದ ಕಿಡ್ನಿ ಕಳೆದುಕೊಂಡ ಟೆಕ್ಕಿ