newsics.com | ನ್ಯೂಸಿಕ್ಸ್
ಸೋಯಾ ಚಾಪ್ ಪ್ರಿಯರ ನಿದ್ದೆಗೆಡಿಸುವಂಥ ಬಹಳ ಅಸಹ್ಯಕರವಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ವೈರಲ್ (Soya Chaap Viral Video) ಆಗುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಸೋಯಾ ಚಾಪ್ ತಯಾರಿಸುವ ಫ್ಯಾಕ್ಟರಿಯೊಂದರ ಒಳನೋಟವನ್ನು ತೋರಿಸಲಾಗಿದೆ. ಸೋಯಾ ಚಾಪ್ ತಯಾರಿಕೆಯಲ್ಲಿ ಯಾವ ಮಟ್ಟದ ನೈರ್ಮಲ್ಯವಿಲ್ಲದ ವಾತಾವರಣವಿದೆ ಎಂಬುದನ್ನು ನೋಡಬಹುದಾಗಿದೆ.
ಯಾವುದೇ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ, ಧೂಳು ಮತ್ತು ಕೊಳಕು ತುಂಬಿದ ನೆಲದ ಮೇಲೆಯೇ ಇವುಗಳನ್ನು ತಯಾರಿಸುತ್ತಿರುವ ದೃಶ್ಯಗಳು ದೇಶದ ಎಲ್ಲ ಆಹಾರ ಪ್ರಿಯರನ್ನು ಬೆಚ್ಚಿಬೀಳಿಸಿದೆ. ಅಷ್ಟೇ ಅಲ್ಲದೆ, ಈ ವಿಡಿಯೋನಲ್ಲಿ ಹುಡುಗನೊಬ್ಬ ಅರೆ ಬೆತ್ತಲಾಗಿ ಕಲಿಸಿಟ್ಟ ಹಿಟ್ಟಿನ ಮೇಲೆ ಉರುಳುತ್ತಿರುವ ದೃಶ್ಯ ಜನರ ವಾಕರಿಕೆಗೆ ಕಾರಣವಾಗಿದೆ ಎಂದರೆ ಸುಳ್ಳಲ್ಲ. ಒಟ್ಟಾರೆ, ನಮ್ಮ ಆರೋಗ್ಯದ ಜತೆ ಯಾವ ಮಟ್ಟಿಗೆ ಆಟವಾಡುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ.
ಜನರಿಂದ ತೀವ್ರ ಆಕ್ರೋಶ!
ಈ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ವಿಡಿಯೋ ನೋಡಿದ ಮೇಲಂತೂ ನನ್ನ ಜೀವಮಾನದಲ್ಲಿ ಇನ್ನು ಮುಂದೆ ಎಂದಿಗೂ ಹೊರಗಡೆ ಸೋಯಾ ಚಾಪ್ ತಿನ್ನುವುದಿಲ್ಲ ಎಂದು ಅನೇಕರು ಶಾಪ ಹಾಕುತ್ತಿದ್ದಾರೆ.
ಕೆಲವರು ಆಹಾರ ಸುರಕ್ಷತಾ ಇಲಾಖೆ (FSSAI) ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಇಂಥಾ ಕೃತ್ಯ ಎಸಗುವ ನೈರ್ಮಲ್ಯರಹಿತ ಫ್ಯಾಕ್ಟರಿಗಳಿಗೆ ಕೂಡಲೇ ಬೀಗ ಜಡಿದು, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇಂಥಾ ಕಲುಷಿತ ಆಹಾರ ತಿಂದು ಕ್ಯಾನ್ಸರ್ ಅಥವಾ ಗಂಭೀರ ಕಾಯಿಲೆಗಳು ಬರುವುದು ಖಚಿತ ಎಂದು ಜನರು ತಮ್ಮ ಆತಂಕ ಹೊರಹಾಕುತ್ತಿದ್ದಾರೆ.
🚨 Warning for Noida Sector 27 soya chaap fans:
What you eat in the evening is made like this. a guy dragged across the floor through the batter.Hygiene check needed ASAP. pic.twitter.com/XwwiQNyzlR
— 𝗚𝗮𝗺𝗲 𝗢𝗳 𝗕𝗷𝗽 🪷 (@Game_Of_BJP) July 26, 2026