newsics.com | ನ್ಯೂಸಿಕ್ಸ್
ಬೆಂಗಳೂರು: ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ (ಪೀಣ್ಯ ಎಲಿವೇಟೆಡ್ ಫ್ಲೈಓವರ್) ಮೇಲೆ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಜುಲೈ 27, 2026 ರಿಂದ ಆಗಸ್ಟ್ 05, 2026 ರವರೆಗೆ ರಾತ್ರಿ ವೇಳೆಯಲ್ಲಿ ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಸಮಯ ಹಾಗೂ ದಿನಗಳು
- ಸಾಮಾನ್ಯ ದಿನಗಳಲ್ಲಿ: ಜುಲೈ 27 ರಿಂದ ಆಗಸ್ಟ್ 05ರವರೆಗೆ ಪ್ರತಿದಿನ ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 05:00 ಗಂಟೆಯವರೆಗೆ.
- ವಾರಾಂತ್ಯ (ಶನಿವಾರ ಮತ್ತು ಭಾನುವಾರ): ರಾತ್ರಿ 12:00 ಗಂಟೆಯಿಂದ ಬೆಳಿಗ್ಗೆ 05:00 ಗಂಟೆಯವರೆಗೆ ಫ್ಲೈಓವರ್ ಮೇಲೆ ಬೆಂಗಳೂರು ಕಡೆಗೆ ಬರುವ ವಾಹನಗಳಿಗೆ ಸಂಪೂರ್ಣ ತಡೆ ಇರುತ್ತದೆ.
ಎನ್‌ಎಚ್-4 ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲಿನ ಕೈನೆಮೆಟಲ್ ವಿಡಿಯೋ ಅಪ್ಪರ್ ರಾಂಪ್‌ನಿಂದ ಎಸ್.ಆರ್.ಎಸ್ ಡೌನ್ ರಾಂಪ್‌ವರೆಗೆ ಈ ನಿರ್ಬಂಧ ಅನ್ವಯಿಸಲಿದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗ: ನೆಲಮಂಗಲ ಕಡೆಯಿಂದ ಬೆಂಗಳೂರು ನಗರದತ್ತ ಬರುವ ವಾಹನಗಳು ಕೈನೆಮೆಟಲ್ ಫ್ಯಾಕ್ಟರಿ ಹತ್ತಿರ ಫ್ಲೈಓವರ್ ಕೆಳಗಿನ ಎನ್‌ಹೆಚ್-4 ಹಾಗೂ ಸರ್ವೀಸ್ ರಸ್ತೆ ಮೂಲಕ ಸಾಗಿ, 8ನೇ ಮೈಲಿ – ದಾಸರಹಳ್ಳಿ – ಜಾಲಹಳ್ಳಿ ಕ್ರಾಸ್ – ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ – ಎಸ್.ಆರ್.ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಿ ನಗರ ಪ್ರವೇಶಿಸಬೇಕು.
ಅಭಿವೃದ್ಧಿ ಕಾಮಗಾರಿ ನಡೆಯುವ ಈ ಅವಧಿಯಲ್ಲಿ ಸವಾರರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
Rapido Ride Cancellation Fine ಸರ್ಕಾರದ ಹೊಸ ನಿಯಮ; ಕ್ಯಾಬ್ ರೈಡ್ ರದ್ದುಗೊಳಿಸಿದರೆ ಚಾಲಕರಿಗೆ ಭಾರಿ ದಂಡದ ಬಿಸಿ