Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಾಂಪತ್ಯ ಜೀವನದಲ್ಲಿ ಬಿರುಕು ಸಹ ಮೂಡುತ್ತದೆ. ಆದ್ದರಿಂದ ಸಣ್ಣಪುಟ್ಟ ಜಗಳಗಳು ನಡೆದರೂ ಸಹ ದಾಂಪತ್ಯ ಜೀವನವು ಸುಖಮಯವಾಗಿರಲು ಆಚಾರ್ಯ ಚಾಣಕ್ಯರು ತಿಳಿಸಿರುವ ಈ ಒಂದಷ್ಟು ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಪ್ರೀತಿ ಮತ್ತು ಪ್ರಾಮಾಣಿಕತೆ: ಆಚಾರ್ಯ ಚಾಣಕ್ಯರ ಪ್ರಕಾರ, ಪ್ರಾಮಾಣಿಕತೆ ಮತ್ತು ನಿಜವಾದ ಪ್ರೀತಿಯ ಮೇಲೆ ಸಂಬಂಧವು ನಿಂತಿರುತ್ತವೆ. ಈ ಎರಡು ಅಂಶವೇ ಸಂಸಾರದ ಮೂಲ ಅಡಿಪಾಯ ಅಂತಾನೇ ಹೆಳಬಹುದು. ಸಂಗಾತಿಗಳು ಪರಸ್ಪರ ಪ್ರೀತಿ ಮತ್ತು ಸಂಪೂರ್ಣ ಪ್ರಾಮಾಣಿಕತೆಯನ್ನು ತೋರಿಸಿದರೆ, ಅವರ ಸಂಬಂಧವು ಎಂದಿಗೂ ಹದಗೆಡುವುದಿಲ್ಲ. ಬದಲಿಗೆ ಇದು ಸಂಬಂಧದಲ್ಲಿನ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಸಂಗಾತಿಗಳ ನಡುವೆ ಆಳವಾದ ಬಂಧವನ್ನು ರೂಪಿಸುತ್ತದೆ.
ಅಹಂಕಾರ ಬೇಡ: ನಿಮ್ಮ ಅಹಂಕಾರ, ಅಹಂ ಭಾವನೆಯೇ ಸಂಬಂಧಕ್ಕೆ ಮುಳ್ಳಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಹಂಕಾರವು ಪ್ರೀತಿ ಮತ್ತು ಗೌರವವನ್ನು ದುರ್ಬಲಗೊಳಿಸುತ್ತದೆ. ಸಂಬಂಧವನ್ನೇ ಹಾಳು ಮಾಡಿಬಿಡುತ್ತವೆ. ಆದ್ದರಿಂದ, ಸಂಗಾತಿಗಳ ನಡುವೆ ಯಾವುದೇ ಅಹಂ ಇರಬಾರದು. ಪರಸ್ಪರ ಪ್ರೀತಿಯಿಂದಲೇ ವರ್ತಿಸಬೇಕು, ಜಗಳಗಳನ್ನು ಸಹ ಪ್ರೀತಿಯಿಂದಲೇ ಬಗೆಹರಿಸಬೇಕು.
ಪರಸ್ಪರ ಬೆಂಬಲ: ಸಂಗಾತಿಗಳಿಬ್ಬರು ಕಷ್ಟದ ಸಮಯದಲ್ಲಿ ಪರಸ್ಪರ ಬೆಂಬಲವಾಗಿ ನಿಂತರೆ ಮಾತ್ರ ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಬಲವಾದ ದಾಂಪತ್ಯವನ್ನು ಕಾಪಾಡಿಕೊಳ್ಳಲು ಪ್ರಮುಖ ವಿಷಯವೆಂದರೆ ಪರಸ್ಪರ ತ್ಯಾಗ ಮತ್ತು ಬೆಂಬಲದ ಮನೋಭಾವ. ಈ ಅಂಶ ದಾಂಪತ್ಯ ಜೀವನವನ್ನು ಸುಖಮಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಪರಸ್ಪರ ಗೌರವ: ಸಂಬಂಧಗಳಲ್ಲಿ ಗೌರವವು ಅತ್ಯಂತ ಪ್ರಮುಖವಾದುದು. ಸಂಗಾತಿಗಳು ಪರಸ್ಪರ ಗೌರವ ತೋರಿದರೆ ಸಂಬಂಧದಲ್ಲಿ ಯಾವುದೇ ಉದ್ವಿಗ್ನತೆ, ಕಹಿ ಭಾವನೆ ಉಂಟಾಗುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ. ಮುಖ್ಯವಾಗಿ ಎಲ್ಲರ ಎದುರಲ್ಲಿ ನಿಮ್ಮ ಸಂಗಾತಿಯನ್ನು ಅವಮಾನಿಸುವುದನ್ನು ತಪ್ಪಿಸಿ, ಏಕೆಂದರೆ ಇದು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.
ಪರಸ್ಪರ ಸಂವಹನ: ಯಾವುದೇ ಸಂಬಂಧದ ಯಶಸ್ಸಿಗೆ ಸಂವಹನ ಅತ್ಯಗತ್ಯ. ಗಂಡ ಮತ್ತು ಹೆಂಡತಿ ತಮ್ಮ ಆಲೋಚನೆಗಳು, ಭಾವನೆಗಳು ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಸರಿಯಾದ ಸಂವಹನವು ತಪ್ಪುಗ್ರಹಿಕೆಯನ್ನು ನಿವಾರಿಸುತ್ತದೆ ಮತ್ತು ಸಂಬಂಧವನ್ನು ಬಲಪಡಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಕೋಪವನ್ನು ನಿಯಂತ್ರಣದಲ್ಲಿಡಿ: ಕೋಪವು ಒಂದು ಸುಂದರ ಸಂಬಂಧವನ್ನು ಹಾಳುಮಾಡುತ್ತದೆ. ಗಂಡ ಮತ್ತು ಹೆಂಡತಿ ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ಅವರ ವೈವಾಹಿಕ ಜೀವನದ ಶಾಂತಿಯನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಸಂಗಾತಿಗಳು ಪ್ರತಿ ಸಂದರ್ಭದಲ್ಲೂ ಸಂಯಮದಿಂದಿದ್ದರೆ, ಅದು ಸಂಬಂಧವನ್ನು ಬಲಪಡಿಸುತ್ತದೆ.