Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube
newsics.com
ಸೆಕ್ಸ್ ಮಾಡದ ಪತಿಗೆ ಪತ್ನಿಯೇ ವಿಷವಿಕ್ಕಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ.
ಅನುಜ್ ಶರ್ಮಾ ಮತ್ತು ಪಿಂಕಿ ಶರ್ಮಾ ದಂಪತಿ 2023 ರಲ್ಲಿ ಮದುವೆಯಾಗಿದ್ದರು. ಆದರೆ ಅನುಜ್ಗೆ ಪತ್ನಿಯೊಂದಿಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಇರಲಿಲ್ಲ. ದಾಂಪತ್ಯ ಜೀವನದ ಎರಡು ವರ್ಷದಲ್ಲಿ ಇಬ್ಬರು ಕೇವಲ ಎರಡು ಬಾರಿ ಮಾತ್ರ ಸೇರಿದ್ದರು ಎಂದು ದೂರಲಾಗಿದೆ. ಆದರೂ ಮಹಿಳೆ ಪಿಂಕಿ ದೈಹಿಕ ಸಂಪರ್ಕಕ್ಕಾಗಿ ಅನುಜ್ನನ್ನು ಪದೇ ಪದೇ ಪೀಡಿಸುತ್ತಿದ್ದರು. ಆದರೆ ಇದಾವುದಕ್ಕೂ ಅನುಜ್ ಆಸಕ್ತಿ ತೋರುತ್ತಿರಲಿಲ್ಲ.
ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಆತನಿಗೆ ವಿಷವಿಕ್ಕಿ ಕೊಲ್ಲಲು ಯತ್ನಿಸಿದ್ದಾಳೆ. ಅದೃಷ್ಟವಶಾತ್ ಅನುಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅನ್ಮೋಲ್ ಬಿಷ್ಣೋಯ್ ನ್ಯಾಯಾಲಯಕ್ಕೆ ಹಾಜರು: 11 ದಿನ NIA ಕಸ್ಟಡಿಗೆ ನೀಡಿ ಆದೇಶ