Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube
newsics.com
ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರದ ತಿರುಪತಿಯಲ್ಲಿ ದರೋಡೆಗೆ ಬಳಸಿದ್ದ ಕಾರು ಪತ್ತೆಯಾಗಿದ್ದು. ಈ ಬೆನ್ನಲ್ಲೇ ಬಾಣಸವಾಡಿಯ ಕಲ್ಯಾಣಗರದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆದರೆ ಪ್ರಮುಖ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ದರೋಡೆಕೋರರ ಗ್ಯಾಂಗ್ ತಿರುಪತಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತಿರುಪತಿ ಪೊಲೀಸರ ಜತೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಎಟಿಎಂಗೆ ಹಣ ಹಾಕುವ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಬರೋಬ್ಬರಿ 7.11 ಕೋಟಿ ಹಣ ದೋಚಿ ಪರಾರಿಯಾಗಿದ್ದಾರೆ.
ಬೆಂಗಳೂರಿನ ಜಯದೇವ ಡೇರಿ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದ 7-8 ದುಷ್ಕರ್ಮಿಗಳು ನಾವು ಆರ್‌ಬಿಐ ಅಧಿಕಾರಿಗಳು ಎಂದು ವಾಹನವನ್ನು ಅಟ್ಟಗಟ್ಟಿದ್ದಾರೆ. ನಿಮ್ಮ ವಾಹನವನ್ನು ನಾವು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ ಗ್ಯಾಂಗ್ ಗನ್ ಮ್ಯಾನ್ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಹಣ ಶಿಫ್ಟ್ ಮಾಡುತ್ತಿದ್ದಾಗ ಗ್ಯಾಂಗ್ ದರೋಡೆ ಮಾಡಿದೆ.
ಇನ್ಮುಂದೆ ಬರಲಿದೆ ಹೆಸರು, ನಂಬರ್, ವಿಳಾಸ ಮರೆಮಾಚಿರುವ ಹೊಸ ಆಧಾರ್ ಕಾರ್ಡ್
ಮಸೂದೆಗಳ ಅನುಮೋದನೆ: ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಇಲ್ಲ- ಸುಪ್ರೀಂ ಕೋರ್ಟ್