Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರಿನ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ದರೋಡೆ ನಡೆಸಲಾಗಿದೆ. ಎಂಟಿಎಂಗಳಿಗೆ ಹಣ ತುಂಬುವ ವಾಹನದಿಂದ 7.11 ಕೋಟಿ ರೂ.ಗಳನ್ನು ದೋಚಲಾಗಿದೆ. ದರೋಡೆಗೆ ಬಳಸಿದ್ದ ಕಾರು ಆಂಧ್ರದ ತಿರುಪತಿಯಲ್ಲಿ ಪತ್ತೆಯಾಗಿದೆ.ಇನ್ನೋವಾ ಕಾರನ್ನು ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರದ ತಿರುಪತಿಯಲ್ಲಿ ದರೋಡೆಗೆ ಬಳಸಿದ್ದ ಕಾರು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ಕೂಡ ಸದ್ಯದಲ್ಲೇ ಪೊಲೀಸರ ಬಲೆಗೆ ಬೀಳಲಿದ್ದಾರೆ.ದರೋಡೆಕೋರರ ಗ್ಯಾಂಗ್ ತಿರುಪತಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತಿರುಪತಿ ಪೊಲೀಸರ ಜೊತೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ತಿರುಪತಿಯ ಪ್ರತಿಯೊಂದು ಹೋಟೆಲ್, ಲಾಡ್ಜ್ ಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಹಣ ಬೇರೆ ಕಡೆ ಇಟ್ಟು ಆರೋಪಿಗಳು ತಿರುಪತಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.