Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Singer Maithili Thakur ಮೊದಲ ಯತ್ನದಲ್ಲೇ ಗೆದ್ದು ಬೀಗಿದ ಗಾಯಕಿ ಮೈಥಿಲಿ ಠಾಕೂರ್ ಅತಿ ಕಿರಿಯ ಶಾಸಕಿ!
ದೇಶಪ್ರಮುಖಮನರಂಜನೆ

Singer Maithili Thakur ಮೊದಲ ಯತ್ನದಲ್ಲೇ ಗೆದ್ದು ಬೀಗಿದ ಗಾಯಕಿ ಮೈಥಿಲಿ ಠಾಕೂರ್ ಅತಿ ಕಿರಿಯ ಶಾಸಕಿ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪಾಟ್ನಾ, ಬಿಹಾರ: ಇಲ್ಲಿನ ದರ್ಭಾಂಗಾ ಜಿಲ್ಲೆಯ ಅಲಿನಗರ ಕ್ಷೇತ್ರದಲ್ಲಿ ಗಾಯಕಿ ಮತ್ತು ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಅವರು ಗೆಲುವು ಸಾಧಿಸಿದ್ದಾರೆ.

ಒಟ್ಟು 84,915 ಮತಗಳನ್ನು ಪಡೆದಿರುವ ಅವರು, ತಮ್ಮ ಪ್ರತಿಸ್ಪರ್ಧಿಗಿಂತ 11730 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

ಆರ್‌ಜೆಡಿಯ ವಿನೋದ್ ಮಿಶ್ರಾ ಅವರು 73185 ಮತಗಳನ್ನು ಗಳಿಸುವ ಮೂಲಕ ಅಲಿನಗರ ಕ್ಷೇತ್ರದಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೈಥಿಲಿ ಠಾಕೂರ್, ಗೆಲುವಿನ ಬಳಿಕ ಮಾತನಾಡಿ ಸಂತಸ ಹಂಚಿಕೊಂಡರು. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಈ ಗೆಲುವು ನನ್ನದಲ್ಲ ಎಲ್ಲರ ಗೆಲುವು, ಮತದಾರರು ಇಟ್ಟಿರುವ ನಂಬಿಕೆ ಎಂದರು.
ಜನರು ತಮ್ಮಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಾನು ನನ್ನ ಕ್ಷೇತ್ರಕ್ಕೆ ನನ್ನ ಕೈಲಾದಷ್ಟು ಜನರ ಸೇವೆ ಮಾಡುತ್ತೇನೆ. ಮಗಳಂತೆ ಜನರಿಗೆ ಸೇವೆ ಸಲ್ಲಿಸುತ್ತೇನೆ ಎಂದು ಇದೇ ವೇಳೆ ಕ್ಷೇತ್ರದ ಜನರಿಗೆ ಭರವಸೆ ನೀಡಿದರು.
ಉತ್ತರ ಮತ್ತು ಮಧ್ಯ ಭಾರತ ಠಾಕೂರ್ ತಮ್ಮ ಪ್ರದರ್ಶನಗಳಿಂದಾಗಿ ಮನೆ ಮಾತಾಗಿದ್ದಾರೆ. ಅವರು ಮುಖ್ಯವಾಗಿ ಮೈಥಿಲಿ, ಭೋಜ್‌ಪುರಿ, ಹಿಂದಿ ಮತ್ತು ಸೂಫಿ ಸಂಪ್ರದಾಯಗಳ ಮಿಶ್ರಿತವಾಗಿರುವ ಗಾಯಕಿ ಆಗಿದ್ದಾರೆ.

ಸಾಂಪ್ರದಾಯಿಕ ಸೋಹರ್, ಭೋಜ್‌ಪುರಿ ನಿರ್ಗುಣ್ ಗೀತ್, ರಾಮ-ಸೀತಾ ವಿವಾಹ ಗೀತ್, ಭಜನೆಗಳು, ಛಠ್ ಗೀತ್, ಅರೆ-ಶಾಸ್ತ್ರೀಯ ಕಜ್ರಿ, ಹೋರಿ, ಚೈತಿ, ಗಜಲ್ ಮತ್ತು ಸೂಫಿ ಹಾಡುಗಳನ್ನು ಹಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರಿಗೆ ಅವರ ಸಹೋದರರಾದ ರಿಷವ್ ಮತ್ತು ಅಯಾಚಿ ಸಾಥ್ ನೀಡುತ್ತಾರೆ.

2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿಶ್ರಿ ಲಾಲ್ ಯಾದವ್ ಅವರು ವಿನೋದ್ ಮಿಶ್ರಾ ಅವರನ್ನು ಸೋಲಿಸುವ ಮೂಲಕ ಅಲಿನಗರ ಸ್ಥಾನವನ್ನು ಗೆದ್ದಿದ್ದರು. ಅದಾಗ್ಯೂ, ಈ ಬಾರಿ ಮಿಶ್ರಿ ಲಾಲ್ ಯಾದವ್ ಅವರನ್ನು ಸೋಲಿಸಿ ಮೈಥಿಲಿ ಠಾಕೂರ್ ಅವರನ್ನು ಮತದಾರರು ಆಯ್ಕೆ ಮಾಡಿದ್ದಾರೆ. 2015 ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿಯ ಅಬ್ದುಲ್ ಬಾರಿ ಸಿದ್ದಿಕಿ ಅಲಿನಗರ ಸ್ಥಾನವನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿದ್ದರು

TAGGED:Singer Maithili Thakur becomes youngest MLA in Bihar
Share This Article
Facebook Twitter Copy Link Print
Previous Article ಅಲಿನಗರ ಕ್ಷೇತ್ರದಲ್ಲಿ BJP ಅಭ್ಯರ್ಥಿ ಮೈಥಿಲಿ ಠಾಕೂರ್ ಅತಿ ಕಿರಿಯ ವಯಸ್ಸಿನ ಶಾಸಕಿ – ಯಾರು ಈಕೆ?
Next Article Arecanut shells ಅಡಕೆ ಸಿಪ್ಪೆಯಿಂದ ತಯಾರಾಯ್ತು ಶರ್ಟ್, ಕುರ್ತಾ, ಸ್ಯಾನಿಟರಿ ಪ್ಯಾಡ್!

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?