Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣದಲ್ಲಿ ಹಣ್ಣುಗಳನ್ನು ಮಾರಾಟ ಮಾಡಿ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
durugesh raichuru follow me ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ದಲ್ಲಿ 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ಲಿಂಗಸುಗೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ತಾಯಿಗೆ ನೆರವಾಗುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ಇದಾಗಿದೆ.
ಈ ವಿಡಿಯೋದ ಶೀರ್ಷಿಕೆಯಲ್ಲಿ ಲಿಂಗಸುಗೂರು ತಾಲ್ಲೂಕಿನ ಹುಡುಗ ತಾನು ಶಾಲೆ ಮುಗಿಸಿ ಸಾಯಂಕಾಲ ವ್ಯಾಪಾರ ಮಾಡಿ ಬಾಡಿಗೆ ಕಟ್ಟುವ ಸಲುವಾಗಿ ತನ್ನ ತಾಯಿಗೆ ಸಹಾಯ ಮಾಡುತ್ತಾ ಇದ್ದಾನೆ. ನಿಜಕ್ಕೂ ಇತಂಹ ಮಕ್ಕಳನ್ನು ನೋಡಿದರೆ ಹೆಮ್ಮೆ ಅನಿಸುತ್ತದೆ ಒಳ್ಳೆಯದು ಆಗಲಿ ಕಂದ ನಿನಗೆ ಎಂದು ಬರೆದುಕೊಳ್ಳಲಾಗಿದೆ.
ವ್ಯಕ್ತಿಯೊಬ್ಬರು ಆಕಾಶ ಎಂಬ ಹುಡುಗನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಪುಟ್ಟ ಹುಡುಗನ ತಾಯಿಯು ಅದೇ ಬಸ್ ನಿಲ್ದಾಣದಲ್ಲಿ ಬೇರೊಂದು ಸ್ಥಳದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದಾರೆ ಎಂದು ಹೇಳುವುದನ್ನು ಕಾಣಬಹುದು. ಬಾಲಕನ ಬಳಿ ಇದರಲ್ಲಿ ನಿಂಗೆಷ್ಟು ಲಾಭ ಕೇಳಿದರೆ, ಲಾಭ ಏನಿಲ್ಲ ಎಲ್ಲಾ ದುಡ್ಡನ್ನು ಅಮ್ಮನಿಗೆ ಕೊಡ್ತೇನೆ, ಅವರು ಪುಸ್ತಕ ಪೆನ್ನು ಪೆನ್ಸಿಲ್ ತೆಗ್ಸಿಕೊಡ್ತಾರೆ ಎಂದು ಹೇಳಿದ್ದಾನೆ.
https://www.instagram.com/reel/DOKkAwwEjQc/?igsh=MXc0czVhcGpsdDhtYQ==