Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಪ್ರಚಂಡ ಜಯ ಸಾಧಿಸಿದೆ. ಇನ್ನು ಎನ್ಡಿಎ ಈ ಪ್ರಚಂಡ ವಿಜಯದ ನಂತರ ಬಿಜೆಪಿಯ ಮುಂದಿನ ಟಾರ್ಗೇಟ್ ಹೊರಬಿದಿದೆ.
ಲೊಕಸಭಾ ಚುನಾವಣೆಯ ನಂತ್ರ ಮಹಾರಾಷ್ಟ್ರ, ಹರಿಯಾಣ, ದೆಹಲಿ ಇದೀಗ ಬಿಹಾರದಲ್ಲಿಯೂ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ಟಾರ್ಗೆಟ್ ಪಶ್ಚಿಮ ಬಂಗಾಳವೆಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ.
ನವದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಲೋಕಸಭಾ ಚುನಾವಣೆಯ ನಂತರ, ದೇಶದ ಹಲವಾರು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ನಾವು ಬಹುಮತ ಗಳಿಸಿದ್ದೇವೆ. ‘ಜೈ ಜವಾನ್ – ಜೈ ಕಿಸಾನ್’ ಎಂಬ ಮನೋಭಾವವನ್ನು ಮುಂದಿಟ್ಟ ಹರಿಯಾಣದ ಮಣ್ಣು, ಸತತ ಮೂರನೇ ಬಾರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನಮಗೆ ನೀಡಿದೆ ಎಂದ ಹೇಳಿದ್ದಾರೆ.