Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚೀನಾದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಮಂತ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್ ಹಾಗೂ ಅವರ ಪತ್ನಿ ನಡುವಿನ 15 ವರ್ಷಗಳ ವಿಚ್ಛೇದನ ಪ್ರಕರಣದಲ್ಲಿ ನ್ಯಾಯಾಲಯವೂ ಮಹತ್ವದ ತೀರ್ಪು ನೀಡಿದ್ದು, ಪತ್ನಿಗೆ 664 ಕೋಟಿ ರೂಗಳ ಪರಿಹಾರ ನೀಡುವಂತೆ ಆದೇಶಿಸಿದೆ.
ಜೊತೆಗೆ ಇವರು ಜೊತೆಗಿದ್ದಾಗ ಜೊತೆಯಾಗಿ ಸ್ಥಾಪಿಸಿದ ಬೀಜಿಂಗ್ ಝೊಂಗ್‌ಜೆಂಗ್ ವಾನ್ರಾಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್‌ನಲ್ಲಿರುವ ಷೇರುಗಳನ್ನು ಸಾಮಾನವಾಗಿ ಹಂಚಿಕೊಳ್ಳುವಂತೆ ಆದೇಶಿಸಿದೆ.
1986ರಲ್ಲಿ ಭೇಟಿಯಾದ ಈ ಜೋಡಿ ಎರಡು ವರ್ಷಗಳ ಒಡನಾಟದ ನಂತರ ಮದುವೆಯಾಗಿದ್ದರು. ಆದರೆ 2010ರಲ್ಲಿ ಲೂ ಜುವಾನ್ ಅವರು ಕೌಂಟುಂಬಿಕ ಹಿಂಸಾಚಾರದ ಆರೋಪ ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇಬ್ಬರ ನಡುವಿನ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಆಗ್ರಹಿಸಿದ್ದರು. ಭಾರಿ ಮೊತ್ತದ ಪರಿಹಾರದ ಕಾರಣಕ್ಕೆ ಇವರ ಈ ಹೈ ಪ್ರೊಫೈಲ್ ವಿಚ್ಚೇದನ ಪ್ರಕರಣವೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.
https://www.newsics.com/2025/11/14/assault-one-dead-another-seriously-injured/