Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿಗಾಲದಲ್ಲಿ ಚಳಿಯ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚುತ್ತದೆ. ಸೊಳ್ಳೆ ಕಡಿತದಿಂದ ಡೆಂಗ್ಯೂ ಮತ್ತು ಮಲೇರಿಯಾದಂತಹ ವಿವಿಧ ರೋಗಗಳನ್ನು ಹರಡುತ್ತವೆ. ಆದ್ದರಿಂದ, ಸೊಳ್ಳೆಗಳಿಂದ ರಕ್ಷಣೆ ಪಡೆಯುವುದು ಬಹಳ ಮುಖ್ಯ. ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ನಾವು ವಿವಿಧ ಉತ್ಪನ್ನಗಳನ್ನು ಬಳಸುತ್ತೇವೆ. ಚಳಿಗಾಲದಲ್ಲಿ ಚಳಿಯ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚುತ್ತದೆ.
ಸೊಳ್ಳೆ ಕಡಿತದಿಂದ ಡೆಂಗ್ಯೂ ಮತ್ತು ಮಲೇರಿಯಾದಂತಹ ವಿವಿಧ ರೋಗಗಳನ್ನು ಹರಡುತ್ತವೆ. ಈರುಳ್ಳಿಯಿಂದ ಸೊಳ್ಳೆಗಳನ್ನು ಆರಾಮವಾಗಿ ಓಡಿಸಬಹುದು. ಈರುಳ್ಳಿಯಲ್ಲಿ ಸಲ್ಫರ್ ಎಂಬ ಸಂಯುಕ್ತವಿದ್ದು, ಅದರ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಉಪ್ಪು ಈ ಸಲ್ಫರ್ ಸಂಯುಕ್ತಗಳ ವಾಸನೆಯನ್ನು ಹೆಚ್ಚಿಸಲು ಮತ್ತು ಗಾಳಿಯಲ್ಲಿ ಹರಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಸೊಳ್ಳೆಗಳು ಆ ಸ್ಥಳಕ್ಕೆ ಬರುವುದಿಲ್ಲ.
ದೀಪ ತಯಾರಿಸುವುದು ಹೇಗೆ?
ಈರುಳ್ಳಿಯ ಮೇಲಿನ ಭಾಗವನ್ನು ಕತ್ತರಿಸಿ.
ಒಳಗೆ ಸ್ವಲ್ಪ ಜಾಗ ಮಾಡಲು ಚಾಕುವನ್ನು ಬಳಸಿ, ಮಧ್ಯಭಾಗವನ್ನು ನಿಧಾನವಾಗಿ ಟೊಳ್ಳು ಮಾಡಿ.
ಕರ್ಪೂರ ಮತ್ತು ಕರಿಮೆಣಸಿನ ಬೀಜಗಳನ್ನು ಪುಡಿಮಾಡಿ, ನಂತರ ಅವುಗಳನ್ನು ಈರುಳ್ಳಿಯೊಳಗೆ ಇರಿಸಿ.
ಟೊಳ್ಳಾದ ಭಾಗಕ್ಕೆ ಸಾಸಿವೆ ಎಣ್ಣೆಯನ್ನು ಸುರಿಯಿರಿ ಮತ್ತು ಹತ್ತಿಯ ಬತ್ತಿಯನ್ನು ಸೇರಿಸಿ.
ನಿಮ್ಮ ಕೋಣೆಯ ಒಂದು ಮೂಲೆಯಲ್ಲಿ ಬತ್ತಿಯನ್ನು ಬೆಳಗಿಸಿ ಈರುಳ್ಳಿ ದೀಪವನ್ನು ಇರಿಸಿ.
ಒಂದು ಅಥವಾ ಎರಡು ನಿಮಿಷಗಳಲ್ಲಿಯೇ ನಿಮಗೆ ರಿಸಲ್ಟ್ ಗೊತ್ತಾಗುತ್ತೆ. ವಾಸನೆಯಿಂದ ಸೊಳ್ಳೆಗಳು ತಲೆ ತಿರುಗಿ ನೆಲಕ್ಕೆ ಬೀಳುತ್ತವೆ. ಕರ್ಪೂರ ಮತ್ತು ಕರಿಮೆಣಸು, ಈರುಳ್ಳಿಯನ್ನು ಸೊಳ್ಳೆಗಳು ಸಹಿಸುವುದಿಲ್ಲ ಮತ್ತು ಬೇಗನೆ ಹಾರಿಹೋಗುತ್ತವೆ ಅಥವಾ ಸಾಯುತ್ತವೆ.