Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದು ರೈಲಿನ ಚಾಲಕ ಗಾಯಗೊಂಡ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜ್ಬೆಹರ್‌ನಿಂದ ಅನಂತ್‌ನಾಗ್‌ನತ್ತ ತೆರಳುತ್ತಿದ್ದ, ಬಾರಾಮುಲ್ಲಾ ಬನಿಹಾಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಹದ್ದೊಂದು ರೈಲಿಗೆ ಡಿಕ್ಕಿ ಹೊಡೆದು ರೈಲಿನ ಒಳಭಾಗಕ್ಕೆ ಬಂದು ಬಿದ್ದಿದೆ. ಘಟನೆಯಲ್ಲಿ ಹಕ್ಕಿಗೂ ಗಾಯವಾದಂತೆ ಕಾಣುತ್ತಿತ್ತು. ಅದು ಕುಂಟುತ್ತಿರುವುದು ವೀಡಿಯೋದಲ್ಲಿ ಕಾಣಿಸಿದೆ. ಹಾಗೆಯೇ ರೈಲಿನ ಲೋಕೋಮೋಟಿವ್ ಪೈಲಟ್‌ಗೂ ಗಾಯವಾಗಿದ್ದು, ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ರೈಲಿನ ಮುಂಭಾಗದ ಗಾಜು ಕಲ್ಲೆಸೆದಂತೆ ಛಿದ್ರವಾಗಿದೆ.