newsics. com
ಬೆಂಗಳೂರು: ಮಹಿಳೆಯೊಬ್ಬರು ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ!
ಮದುವೆಯಾದ ಬಳಿಕ 6 ತಿಂಗಳು ಸಂಸಾರ. ಮುಂದಿನ 6 ತಿಂಗಳಲ್ಲಿ ಪತಿ ವಿರುದ್ದ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಇನ್ನಿತರ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ.
ಕರ್ನಾಟಕ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ ನ್ಯಾಯಾಧೀಶರನ್ನೇ ಚಕಿತಗೊಳಿಸಿದೆ. ಎಲ್ಲಾ ಪತಿಯರ ವಿರುದ್ದ ಈಕೆ ಸಕ್ಷನ್ 498ಎ ಪ್ರಕರಣ ದಾಖಲಿಸಿದ್ದಾಳೆ.
ಕಳೆದ 6 ಪ್ರಕರಣಗಳಲ್ಲಿ ಗಂಡಂದಿರು ಕೋರ್ಟ್ ಪ್ರಕರಣಕ್ಕೆ ಬೆಚ್ಚಿ ಬಿದ್ದು ಸೆಟ್ಲ್ ಮಾಡಿಕೊಂಡಿದ್ದಾರೆ. ದುಬಾರಿ ಮೊತ್ತವನ್ನು ಈಕೆ ಪಡೆದಿದ್ದಾಳೆ.
ಆದರೆ ಏಳನೇ ಪ್ರಕರಣದಲ್ಲಿ ಹೊಸ ಗಂಡ ಈ ಮಹಿಳೆಯ ಕಪಟವನ್ನು ಬಯಲಿಗೆಳೆಯಲು ಮುಂದಾಗಿದ್ದಾನೆ. ಹೀಗಾಗಿ ಪತ್ನಿಯ 498ಎ ವಿರುದ್ಧ ಈತ ಕೂಡ ಪ್ರಕರಣ ದಾಖಲಿಸಿದ್ದಾನೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ವಿಚಾರಣೆ ಆರಂಭಿಸಿದ್ದಾರೆ.
ಎಲ್ಲಾ ಪತಿಗಳ ವಿರುದ್ಧವೂ 498ಎ ಪ್ರಕರಣವೇ ಇದೆಯಾ ಎನ್ನುವ ಜಡ್ಜ್ ಪ್ರಶ್ನೆಗೆ ಉತ್ತರಿಸಿದ ವಕೀಲರು, ಹೌದು, ಎಲ್ಲವೂ 498ಎ ಪ್ರಕರಣ, ಎಲ್ಲಾ ಪತಿಗಳಿಂದ ಸೆಟ್ಲ್‌ಮೆಂಟ್ ಹಣ ಪಡೆದಿದ್ದಾರೆ. ಕ್ರಿಮಿನಲ್ ಕೇಸ್ ಹಾಕಿ ಬಳಿಕ ಸೆಟ್ಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಪ್ರತಿ ಮದುವೆಯಾದ ಬಳಿಕ 6 ತಿಂಗಳು ಆಗುತ್ತಿದ್ದಂತೆ ಪ್ರಕರಣ ದಾಖಲಿಸಲಾಗುತ್ತೆ. ಬಳಿಕ ಪತಿಯರು ಸೆಟ್ಲ್‌ಮೆಂಡ್ ಮಾಡಿದ್ದಾರೆ. ಇದು ಕಾನೂನಿನ ದುರ್ಬಳಕೆ. ಇಲ್ಲಿ ಕಾನೂನು ಜೊತೆ ಆಟವಾಡುತ್ತಿದ್ದೀರಿ ಎಂದು ಜಡ್ಜ್ ಹೇಳಿದ್ದಾರೆ.
ಹಿಂದಿನ 6 ಪತಿಗಳು ಇದ್ದಾರೆ. ಅವರ ಫೋಟೋಗಳು ಇವೆ. ಎಲ್ಲಾ ಪತಿಗಳ ವಿವರ ಕಲೆ ಹಾಕಿ ತನ್ನಿ. ಎಲ್ಲಾ ಪ್ರಕರಣದಲ್ಲೂ ಸೆಟ್ಲ್‌ಮೆಂಟ್ ಆಗಿದೆ. ನೀವು ಯಾಕೆ ಸೆಟ್ಲ್‌ಮೆಂಟ್ ಮಾಡಿಕೊಂಡಿಲ್ಲ ಎಂದು ಜಡ್ಜ್ ತಮಾಷೆ ಮಾಡಿದ್ದಾರೆ.
https://twitter.com/DeepikaBhardwaj/status/1816837074646929459.