Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > US VISA ಶುಗರ್, ಹಾರ್ಟ್ ಸಮಸ್ಯೆ, ಬೊಜ್ಜಿದ್ದರೆ ಅಮೆರಿಕ ವೀಸಾ ಸಿಗದು!
ದೇಶಪ್ರಮುಖವಿದೇಶ

US VISA ಶುಗರ್, ಹಾರ್ಟ್ ಸಮಸ್ಯೆ, ಬೊಜ್ಜಿದ್ದರೆ ಅಮೆರಿಕ ವೀಸಾ ಸಿಗದು!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಾಷಿಂಗ್ಟನ್: ಈ‌ ಮೊದಲು ವಲಸಿಗರ ಸ್ವರ್ಗ ಎನಿಸಿದ್ದ ಅಮೆರಿಕ ಈಗ ವಿದೇಶಿಗರಿಗೆ ಸಾಲು ಸಾಲು ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಹೀಗಾಗಿ ಈಗ ಅಮೆರಿಕ ಎಂದರೆ ಹೊರದೇಶದವರು ಬೆಚ್ಚಿ ಬೀಳುವಂತಾಗಿದೆ.

ಎಚ್1ಬಿ ವೀಸಾ ಮೇಲೆ ನಿರ್ಬಂಧ ಹಾಕಿದ ಅಮೆರಿಕ ಈಗ ಇತರ ವೀಸಾಗಳಲ್ಲೂ ವಿವಿಧ ನಿರ್ಬಂಧಗಳನ್ನು ಹೊರಡಿಸಿದೆ.

ಡಯಾಬಿಟಿಸ್, ಬೊಜ್ಜು, ಹೃದಯ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ವಿದೇಶೀ ನಾಗರಿಕರಿಗೆ ವೀಸಾ ನೀಡದಿರಲು ನಿರ್ಧರಿಸಿದೆ.

ಅಮೆರಿಕ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ಈ ಅಂಶ ಇದೆ. ಬೇರೆ ಬೇರೆ ದೇಶಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ಈ ಹೊಸ ಮಾರ್ಗಸೂಚಿಗಳನ್ನು ಕಳುಹಿಸಿಕೊಡಲಾಗಿದೆ.

ಅಮೆರಿಕದ ವೀಸಾ ಪಡೆಯಲು ಅಭ್ಯರ್ಥಿಗಳ ಆರೋಗ್ಯ ಪರೀಕ್ಷೆ ನಡೆಸುವುದು ಈ ಮುಂಚಿನಿಂದಲೂ ಇರುವ ನಿಯಮವೇ. ಆದರೆ, ವೀಸಾ ಗೈಡೆನ್ಸ್ನಲ್ಲಿ ಅದನ್ನು ಎಲ್ಲಿಯೂ ನಮೂದಿಸಿರಲಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದಾಗ ಅದನ್ನು ನಿರ್ಲಕ್ಷಿಸಿ ವೀಸಾ ನೀಡಲಾಗುತ್ತಿತ್ತು. ಆದರೆ ಈಗ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಿರುವುದರಿಂದ ರಾಯಭಾರ ಅಧಿಕಾರಿಗಳು ಅರ್ಜಿದಾರರ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವೀಸಾ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಅಮೆರಿಕ ಸರ್ಕಾರ ತನ್ನ ನಿವಾಸಿಗಳ ಆರೋಗ್ಯ ಪಾಲನೆಗೆ ಸಾಕಷ್ಟು ಹಣ ವ್ಯಯಿಸುತ್ತದೆ. ಅಲ್ಲಿ ಇನ್ಷೂರೆನ್ಸ್ ಪ್ಲಾನ್ಗಳಿದ್ದು ಸರ್ಕಾರದಿಂದ ಸಬ್ಸಿಡಿಯೂ ಇದೆ. ಹೀಗಾಗಿ, ಜನರ ಆರೋಗ್ಯ ಸಮಸ್ಯೆ ಹೆಚ್ಚಾದರೆ ಸರ್ಕಾರಕ್ಕೆ ವೆಚ್ಚದ ಹೊರೆ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಅನಾರೋಗ್ಯವಂತ ವಲಸಿಗರನ್ನು ಒಳಗೆ ಸೇರಿಸಿಕೊಳ್ಳದಿರಲು ಅಮೆರಿಕ ನಿರ್ಧರಿಸಿರಬಹುದು.

‘ನೀವು ಅರ್ಜಿದಾರರ ಆರೋಗ್ಯವನ್ನು ಪರಿಗಣಿಸಲೇಬೇಕು. ಹೃದಯ ಕಾಯಿಲೆ, ಶ್ವಾಸಕೋಶ ಕಾಯಿಲೆ, ಕ್ಯಾನ್ಸರ್, ಡಯಾಬಿಟಿಸ್, ನರರೋಗ, ಮಾನಸಿಕ ಆರೋಗ್ಯ ಮೊದಲಾದ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವವರನ್ನು ನೋಡಿಕೊಳ್ಳಲು ಸಾವಿರಾರು ಡಾಲರ್‌ಗಳು ವ್ಯಯವಾಗುತ್ತವೆ. ಬೊಜ್ಜು ಆಸ್ತಮಾ, ಬಿಪಿ ಇತ್ಯಾದಿ ಕಾಯಿಲೆಗೆ ಎಡೆ ಮಾಡಿಕೊಡುತ್ತದಾದ್ದರಿಂದ ಅದನ್ನೂ ಪರಿಶೀಲಿಸಿ’ ಎಂದು ಅಮೆರಿಕದ ಹೊಸ ವೀಸಾ ಮಾರ್ಗಸೂಚಿ ಹೇಳಿದೆ.

ಒಂದು ವೇಳೆ ಅರ್ಜಿದಾರರಿಗೆ ಆರೋಗ್ಯ ಸಮಸ್ಯೆಗಳಿದ್ದು, ಆ ಕಾರಣಕ್ಕೆ ವೀಸಾ ಅರ್ಜಿ ತಿರಸ್ಕೃತಗೊಳ್ಳುವಂತಿದ್ದರೆ, ಅಂಥ ಅರ್ಜಿದಾರರ ಬಳಿ ಹಣ ಬಲ ಇದೆಯಾ ಎನ್ನುವುದನ್ನೂ ಪರಿಗಣಿಸಲಾಗುತ್ತದೆ. ಅಮೆರಿಕದಲ್ಲಿ ಸರ್ಕಾರದ ನೆರವಿಲ್ಲದೆ ಚಿಕಿತ್ಸೆಯನ್ನು ತಾವೇ ಭರಿಸುವಷ್ಟು ಹಣ ಇದ್ದರೆ ಅಂಥವರಿಗೆ ವೀಸಾ ಕೊಡಲು ಅವಕಾಶ ಇರುತ್ತದೆ. ಅಮೆರಿಕದಲ್ಲಿ ಖಾಸಗಿಯಾಗಿ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಹಳ ಖರ್ಚು ಮಾಡಬೇಕಾಗುತ್ತದೆ.

Lifestyle ಈಗ ಅರಳು‌ ಮರುಳು ಅರವತ್ತಕ್ಕಲ್ಲ, 40ಕ್ಕೇ ನೆನಪಿನ ಶಕ್ತಿ ಕ್ಷೀಣ! ಯುವಜನರಲ್ಲೇ ಹೆಚ್ಚುತ್ತಿದೆ ಮರೆವು!

ಈ ಸಿಂಪಲ್‌ ಟಿಪ್ಸ್‌ ಪಾಲಿಸಿದ್ರೆ ಸೊಳ್ಳೆಗಳು ಮನೆಯೊಳಗೆ ಬರೋದೇ ಇಲ್ಲ

TAGGED:heart problemIf you have sugarobesityyou will not get US visa!
Share This Article
Facebook Twitter Copy Link Print
Previous Article Weather forecast ರಾಜ್ಯದಲ್ಲಿ ಚಳಿ ವಾತಾವರಣ, ಎಲ್ಲೆಡೆ ಇಬ್ಬನಿ ಜೋರು, ಅಲ್ಲಲ್ಲಿ ಮಳೆ
Next Article Special class ದಸರಾ ರಜೆ ವಿಸ್ತರಣೆ: ತರಗತಿ ಕೊರತೆ ಸರಿದೂಗಿಸಲು ಸ್ಪೆಷಲ್ ಕ್ಲಾಸ್‌ಗೆ ಸೂಚನೆ

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ವಿದೇಶ

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?