Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ನಟಿ ನಿವೇದಿತಾ ಗೌಡ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಈಗ ಒಂದು ವಿಡಿಯೋ ಶೇರ್ ಮಾಡಿಕೊಂಡು, ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿದ್ದಾರೆ!.
ಮುದ್ದು ರಾಕ್ಷಸಿ ಚಿತ್ರದ ಪ್ರಮೋಷನ್ ಎಂಬಂತೆ, ಅದರ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ. ಇದರಲ್ಲಿ ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿರುವ ದೃಶ್ಯದ ಡಬ್ಬಿಂಗ್ ಮಾಡುವುದನ್ನು ತೋರಿಸಿದ್ದಾರೆ ನಿವೇದಿತಾ. ಈ ಮೂಲಕ ತಮಗೂ ಕನ್ನಡ ಬರುತ್ತದೆ ಎನ್ನುವುದನ್ನು ನೆಟ್ಟಿಗರಿಗೆ ತಿಳಿಸಿದ್ದಾರೆ.
ಅಂಗಡಿಗೆ ಬರುವ ಹಿಂದಿವಾಲ ಕನ್ನಡದ ಬಗ್ಗೆ ಅಸಡ್ಡೆ ಮಾಡಿದಾಗ, ನಿವೇದಿತಾ ಆತನಿಗೆ ಬುದ್ಧಿ ಹೇಳುವ ದೃಶ್ಯವಿದೆ. ಕರ್ನಾಟಕ ಎನ್ನಲು ಬರಲ್ಲ, ಕರ್ನಾಟಕ್ ಎನ್ನುತ್ತೀರಿ, ಕನ್ನಡ್ ಎನ್ನುತ್ತೀರಿ ಎಂದೆಲ್ಲಾ ಬೈದು, ಆತನಿಂದ ಸರಿಯಾಗಿ ಹೇಳಿಸಿದ್ದಾರೆ ನಿವೇದಿತಾ.
ಇದೇ ಡೈಲಾಗ್ನಲ್ಲಿ ಹೇಳ್ತೀರಾ, ಹೇಳ್ತೀರಾ ಎನ್ನುವ ಶಬ್ದ ಹೇಲ್ತೀರಾ, ಹೇಲ್ತೀರಾ ಎನ್ನುವ ಹಾಗೆ ಕೇಳಿಸುತ್ತದೆ. ಇದು ಸ್ವಲ್ಪ ಸ್ಟೈಲ್ ಆಗಿ ಹೇಳಲು ಹೋದ ಕಾರಣ ಹೀಗೆ ಕೇಳಿಸುತ್ತಿದೆಯಷ್ಟೇ. ಆದರೆ ಇದನ್ನೇ ಟ್ರೋಲ್ ಮಾಡಿರೋ ನೆಟ್ಟಿಗರು ಮೊದಲು ಹೇಳು ಎನ್ನೋದನ್ನ ಸರಿಯಾಗಿ ಕಲಿಯಮ್ಮಾ ಎನ್ನುತ್ತಿದ್ದಾರೆ.