Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಬೆಂಗಳೂರು: ತೃತೀಯ ಲಿಂಗಿಯೊಬ್ಬರನ್ನು ತಲೆ ಬೋಳಿಸಿರುವಂತ ತೃತೀಯ ಲಿಂಗಿಯರ ತಂಡವೇ, ಮನಸೋ ಇಚ್ಛೆ ಥಳಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ವಿರಾಟ ನಗರದಲ್ಲಿ ನಡೆದಿದೆ.
ತೃತೀಯ ಲಿಂಗಿಯಾಗಿದ್ದಂತ ಸುಕನ್ಯಾರನ್ನು ಆಟೋದಲ್ಲಿ ಅಪಹರಿಸಿ ಹಲ್ಲೆ ಮಾಡಲಾಗಿದೆ. ಬೇರೊಂದು ತಂಡದ ಜೊತೆಗೆ ಹೋಗಿದ್ದಕ್ಕೆ ತೃತೀಯ ಲಿಂಗಿಗಳಾದಂತ ಪ್ರೀತಿ, ಚಿನ್ನಿ ಮತ್ತು ತಂಡವರು ಈ ಕೃತ್ಯವೆಸಗಿದ್ದಾರೆ.
ಕೆ ಆರ್ ಪುರಂನಿಂದ ಅಪಹರಣ ಮಾಡಿದಂತ ತೃತೀಯ ಲಿಂಗಿಯರ ಮತ್ತೊಂದು ಗುಂಪು, ಬೊಮ್ಮನಹಳ್ಳಿಯವರೆಗೆ ಕರೆದು ತಂದು ಕೈಮುಗಿದು ಬೇಡಿಕೊಂಡರೂ ದೊಣ್ಣೆ, ಸೌಟ್, ಕೈಗೆ ಸಿಕ್ಕಂತ ವಸ್ತುಗಳು, ಕಾಲಿನಿಂದ ಒದ್ದು ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.