Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಸಿಟ್ರಸ್ ಹಣ್ಣುಗಳಲ್ಲಿ ನಿಂಬೆ ಹಣ್ಣು ಕೂಡ ಒಂದಾಗಿದೆ. ಹುಳಿ ರುಚಿಯನ್ನು ಹೊಂದಿರುವ ಈ ನಿಂಬೆ ರಸದ ಪಾನೀಯ ಕುಡಿಯಲು ತುಂಬಾ ಟೇಸ್ಟಿ ಆಗಿರುತ್ತದೆ. ಜೊತೆಗೆ ಆರೋಗ್ಯಕ್ಕೆ ಕೂಡ ಒಳ್ಳೆಯದು. ಅನೇಕ ಅದ್ಭುತ ಔಷಧೀಯ ಗುಣಗಳಿಂದ ಕೂಡಿರುವ ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಹಾಗಾದ್ರೆ ಇದು ನಮ್ಮ ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಹೇಗೆ ಒದಗಿಸುತ್ತದೆ.
ಅನೇಕ ಮಂದಿ ಹೊರಗೆ ಬಿಸಿಲಿನಲ್ಲಿ ಸುತ್ತಾಡಿ ಮನೆಗೆ ಹಿಂದಿರುಗಿದ ನಂತರ ನಿಂಬೆಯಿಂದ ಶರಬತ್ತು ತಯಾರಿಸಿ ಕುಡಿಯುತ್ತಾರೆ. ಇನ್ನೂ ಕೆಲ ಮಂದಿ ಆಹಾರಕ್ಕೆ ನಿಂಬೆದ ರಸ ಹಿಂಡಿ ಸೇವಿಸುತ್ತಾರೆ. ಆದರೆ ರಸ ತೆಗೆದುಕೊಂಡ ನಂತರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ನಿಂಬೆ ಸಿಪ್ಪೆಯಿಂದಲೂ ಅನೇಕ ಪ್ರಯೋಜನಗಳಿದೆ ಎಂದು ನಿಮಗೆ ತಿಳಿದಿದ್ಯಾ?
ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ನಾವು ದೀರ್ಘ ಕಾಲ ಬಳಸುವುದರಿಂದ, ಕೆಲ ಮೊಂಡು ಕಲೆಗಳು ಪಾತ್ರೆಗಳ ಮೇಲೆ ಹಾಗೆಯೇ ಅಂಟಿಕೊಂಡಿರುತ್ತವೆ. ಅದರಲ್ಲೂ ವಿಶೇಷವಾಗಿ ಎಣ್ಣೆ ಕಲೆಗಳು. ಅವುಗಳನ್ನು ತೆಗೆದುಹಾಕಲು ನಿಂಬೆ ಸಿಪ್ಪೆಯಿಂದ ಪಾತ್ರೆಗಳನ್ನು ಉಜ್ಜಿ, ಅದು ಕೇವಲ ಪಾತ್ರೆಗಳಿಂದ ಈ ಕಳೆಗಳನ್ನು ಮಾತ್ರ ತೆಗೆದುಹಾಕದೆ ಪಾತ್ರೆಗಳಿಗೆ ನೈಸರ್ಗಿಕ ಪರಿಮಳವನ್ನು ನೀಡುತ್ತದೆ.
ನೆಲ ಸ್ವಚ್ಛಗೊಳಿಸಲು ಈ ರೀತಿ ಬಳಸಿ
ಮನೆಯಲ್ಲಿ ನೆಲವನ್ನು ಸ್ವಚ್ಛಗೊಳಿಸಲು ಕೂಡ ಜನರು ರಾಸಾಯನಿಕ ಹೊಂದಿದ ಕ್ಲೀನರ್ ಬಳಸುತ್ತಾರೆ. ಆದರೆ ದೀರ್ಘಕಾಲದವರೆಗೆ ಇಂತಹ ಕ್ಲೀನರ್ ಗಳನ್ನು ಬಳಸುವುದರಿಂದ ನೆಲಕ್ಕೆ ಹಾನಿಯುಂಟು ಮಾಡುತ್ತವೆ. ಹೀಗಿರುವಾಗ ನಿಂಬೆ ಸಿಪ್ಪೆಯ ಪೇಸ್ಟ್ ಅನ್ನು ತಯಾರಿಸಿ ಅದರಿಂದ ನೆಲ ಸ್ವಚ್ಛಗೊಳಿಸಿದರೆ, ಅದು ಮಾರ್ಬಲ್, ಗ್ರಾನೈಟ್ ಅನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅವುಗಳ ನೈಸರ್ಗಿಕ ಹೊಳಪನ್ನು ಕಾಪಾಡುತ್ತದೆ.
ಡಸ್ಟ್‌ಬಿನ್‌ನಿಂದ ಕೂಡ ವಾಸನೆ ಬರುವುದಿಲ್ಲ
ಸಾಮಾನ್ಯವಾಗಿ ಅಡುಗೆ ಮಾಡುವಾಗ ಉಳಿಯುವ ತ್ಯಾಜ್ಯ ಪದಾರ್ಥಗಳನ್ನು ನಾವು ಅಡುಗೆ ಮನೆಯಲ್ಲಿಟ್ಟಿರುವ ಕಸದ ತೊಟ್ಟಿಗೆ ಎಸೆಯುತ್ತೇವೆ. ಇದರಿಂದ ಅಡುಗೆ ಮನೆಯಲ್ಲಿ ಗಬ್ಬು ವಾಸನೆ ಪಸರಿಸಲು ಪ್ರಾರಂಭಿತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ಒಣಗಿದ ನಿಂಬೆ ಸಿಪ್ಪೆಗಳನ್ನು ನೀವು ಕಸದ ತೊಟ್ಟಿಯಲ್ಲಿರಿಸಬಹುದು. ಬೇಕಾದರೆ ನೀವು ನಿಮ್ಮ ಕಸದ ತೊಟ್ಟಿಗೆ ನಿಂಬೆ ರಸವನ್ನು ಕೂಡ ಸಿಂಪಡಿಸಬಹುದು.
ಮೈಕ್ರೋವೇವ್ ಓವೆನ್ ಹೊಳೆಯುವಂತೆ ಮಾಡುತ್ತದೆ
ಸಾಮಾನ್ಯವಾಗಿ ಪಿಜ್ಜಾ, ಬರ್ಗರ್, ಗ್ರೀಲ್ ಮಾಡಲಾಗುವ ಆಹಾರಗಳಿಗಾಗಿ ಜನ ಮೈಕ್ರೋವೇವ್ ಓವೆನ್ ಬಳಸುತ್ತಾರೆ. ಅದರಲ್ಲಿ ಸ್ವಚ್ಛತೆ ಮಾಡಲು ಸ್ಥಳಾವಕಾಶ ಕಮ್ಮಿ ಉರುವುದರಿಂದ ಮೂಲೆ ಮೂಲೆಯಲ್ಲಿ ಜಿಡ್ಡು ಹಾಗೆಯೇ ಉಳಿದು ಹೋಗುತ್ತದೆ. ಹೀಗಾಗಿ ಅದನ್ನು ಸ್ವಚ್ಛಗೊಳಿಸಲು ಒಂದು ಪಾತ್ರೆಯಲ್ಲಿ ಕೆಲ ನಿಂಬೆ ತುಂಡುಗಳನ್ನು ಹಾಕಿ, ಅದನ್ನು ಬಿಸಿ ಮಾಡಲು ಓವೆನ್ ನಲ್ಲಿ ಇರಿಸಿ. ಸ್ವಲ್ಪ ಸಮಯದ ಬಳಿಕ ಈ ನೀರಿನಿಂದ ಆವಿ ಹೊರಬರಲಾರಂಬಿಸುತ್ತದೆ. ಈ ಆವಿ ಓವೆನ್ ಒಳಗೋಡೆಗಳ ಮೇಲೆ ಸಂಗ್ರಹವಾಗುತ್ತದೆ. ಸಂಗ್ರಹವಾದ ಮೊಂಡು ಜಿಡ್ಡನ್ನು ಸಡಿಲಗೊಳಿಸುತ್ತದೆ, ಈಗ ಒಂದು ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ.