Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಕಾಲೇಜ್ ಹುಡುಗಿಯರು ಯಾಕೆ ಅಂಕಲ್‌ಗಳಿಗೆ ಕ್ಲೀನ್ ಬೋಲ್ಡ್ ಆಗ್ತಾರೆ; ಇದರ ಸೀಕ್ರೆಟ್ ಏನು?
ರಿಲೇಷನ್‌ಶಿಪ್

ಕಾಲೇಜ್ ಹುಡುಗಿಯರು ಯಾಕೆ ಅಂಕಲ್‌ಗಳಿಗೆ ಕ್ಲೀನ್ ಬೋಲ್ಡ್ ಆಗ್ತಾರೆ; ಇದರ ಸೀಕ್ರೆಟ್ ಏನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸಾಕಷ್ಟು ಹರೆಯದ ಹುಡುಗಿಯರು ಈಗಾಗಲೆ ಮದುವೆಯಾಗಿ ಮಕ್ಕಳಿರುವ ಸಂಸಾರಸ್ಥ ಪರಪುರುಷರನ್ನು ಇಷ್ಟಪಟ್ಟು, ಅವರ ಸಂಸಾರವನ್ನು ಹಳಿತಪ್ಪಿಸಿ, ತಮ್ಮ ಜೀವನವನ್ನೂ ಹಾಳುಮಾಡಿಕೊಂಡಿರುವ ಉದಾಹರಣೆಗಳು ಬೇಕಾದಷ್ಟಿವೆ.

ಇನ್ನು, ಪರಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಅವರೊಂದಿಗೆ ಮದುವೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದಾರೆ. ಇಂತಹ ಸಂಬಂಧಗಳು ಈಗ ಹೆಚ್ಚುತ್ತಿರಬಹುದು. ಆದರೆ, ಮೊದಲಿನಿಂದಲೂ ಇತ್ತು, ಈಗಲೂ ಇದೆ. ಆದರೆ, ಇತ್ತೀಚೆಗೆ ಅವು ಮೀಡಿಯಾಗಳ ಮೂಲಕ ಹೆಚ್ಚು ಪ್ರಚಾರ ಪಡೆಯುತ್ತಿವೆ ಅಷ್ಟೇ.

ಹಾಗಿದ್ದರೆ ಯಾಕೆ ಹೀಗೆ? ಈ ಪ್ರಶ್ನೆಗೆ ಉತ್ತರ ಕೂಡ ಎರಡು ದಾರಿಯಲ್ಲಿ ಇದೆ. ಒಂದು ಮನಶಾಸ್ತ್ರಜ್ಞರು ಹೇಳೋದು, ಇನ್ನೊಂದು ಸಮೀಕ್ಷೆಗಳ ವರದಿ. ಸಮೀಕ್ಷೆಗಳು ಹೇಳುವ ಪ್ರಕಾರ, ಇತ್ತೀಚೆಗೆ ಸಮಾಜ ಅವಿಭಕ್ತ ಕುಟುಂಬಗಳಿಂದ ದೂರ ಸರಿಯುತ್ತಿದ್ದು, ಜನರು ಸ್ವತಂತ್ರ ಬದುಕನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ನನಗೆ ಬೇಕಾದಂತೆ ಇರುತ್ತೇನೆ, ನನಗೆ ಇಷ್ಟವಾದವರೊಂದಿಗೆ ಇರುತ್ತೇನೆ ಎಂಬ ಭಾವನೆ ಹೆಚ್ಚುತ್ತಿರುವುದು. ಜತೆಗೆ, ವಿದೇಶಿ ಸಂಸ್ಕೃತಿಯ ವ್ಯಾಮೋಹ ಹಾಗೂ ಸ್ವದೇಶಿ ಸಂಸ್ಕೃತಿಯ ಬಗೆಗಿನ ತಾತ್ಸಾರ ಇದಕ್ಕೆ ಕಾರಣ ಎನ್ನುತ್ತಿವೆ. ಈ ಮೊದಲು ಕೂಡ ಇಂತಹ ಸಂಬಂಧಗಳು ಇದ್ದವಲ್ಲ ಎಂದರೆ, ಅದಕ್ಕೆ ಕಾರಣ, ಕೆಲವರಿಗೆ ಹುಟ್ಟಿನಿಂದಲೇ ಬಂದ ಇನ್‌ಸ್ಟಿಂಕ್ಟ್, ಹಾಗೂ ಕೆಲವರಿಗೆ ಕುಟುಂಬ ಹಾಗೂ ಸಮಾಜದ ಮಾರ್ಗದರ್ಶನದ ಕೊರತೆ ಕಾರಣ ಎನ್ನುತ್ತಿವೆ ಸಮೀಕ್ಷೆಗಳು. ಆದರೆ, ಮನಃಶಾಸ್ತ್ರಜ್ಞರು ಹೇಳೋದೇ ಬೇರೆ.

ಮನಃಶಾಸ್ತ್ರಜ್ಞರ ಪ್ರಕಾರ- ‘ಸಾಕಷ್ಟು ಟೀನ್ ಏಜ್ ಹುಡುಗಿಯರು, ಮದುವೆ ವಯಸ್ಸಿಗೆ ಬಂದಿರುವ ಹುಡುಗಿಯರು ಅಂಕಲ್‌ಗಳ ಪ್ರೇಮಪಾಶಕ್ಕೆ ಸಿಲುಕಲು ಮುಖ್ಯ ಕಾರಣ ಅವರಲ್ಲಿರುವ ಅದೊಂದು ಭಾವನೆ ಅಂತಾರೆ. ಅದು- ಈಗಾಗಲೇ ಮದುವೆಯಾಗಿ ಯಶಸ್ವಿಯಾಗಿ ಸಂಸಾರ ಮಾಡುತ್ತಿರೋ ಅಂಕಲ್‌ಗಳು ಅಂದರೆ ಅವರು ನಿಜವಾದ ಗಂಡಸರು ಎಂಬ ಎಡಬಿಡಂಗಿ ಹೇಳಿಕೆಗಳು ಇಂತಹ ಸಂಬಂಧ ಸಮಾಜದಲ್ಲಿ ಮೂಡಲು ಮುಖ್ಯ ಕಾರಣ’ ಎನ್ನುತ್ತಾರೆ.

ಅಚ್ಚರಿ ಎಂದರೆ, ಮದುವೆಯಾಗಿ ಸಂಸಾರ ಮಾಡುತ್ತಿರುವ ಪುರುಷರು ಗ್ಯಾರಂಟಿ ಗಂಡಸರು ಎಂಬುದು ಅವರ ನಂಬಿಕೆಯಾದರೆ, ಮದುವೆ ಆಗದವರು ಗಂಡಸರಲ್ಲ ಎಂದು ಅವರು ನಿರ್ಧರಿಸುವುದು ಎಷ್ಟು ಸರಿ? ಹಾಗಂತ ಅವರಿಗೆ ಹೇಳಿದ್ದು ಯಾರು? ಇವೆಲ್ಲಾ ಕೇವಲ ಊಹಾಪೋಹಗಳು ಹಾಗೂ ತಪ್ಪು ತಿಳಿವಳಿಕೆಗಳು ಅಷ್ಟೇ. ಇಂತಹ ತಪ್ಪು ತಿಳಿವಳಿಕೆಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದು ಅಷ್ಟೇ ಅಲ್ಲ, ಸಾಕಷ್ಟು ಸಂಸಾರಗಳನ್ನು ಹಾಳು ಮಾಡುತ್ತಾರೆ ಇಂತಹ ಹುಡುಗಿಯರು ಎನ್ನುತ್ತದೆ ಸಮೀಕ್ಷೆ. ಜತೆಗೆ, ಬಾಲ್ಯದಿಂದಲೇ ಸರಿಯಾದ ಜೀವನಪಾಠ ಇಂತಹ ಹುಡುಗಿಯರಿಗೆ ಸಿಕ್ಕಿರುವುದಿಲ್ಲ ಎನ್ನುತ್ತವೆ ಹಲವು ಸಮೀಕ್ಷೆಗಳ ವರದಿ.

ಅಂಕಲ್‌ಗಳಿಗೆ ಬೀಳುವ, ಮಧ್ಯವಯಸ್ಕರು ಹಾಗೂ ಆ ಏಜನ್ನೂ ದಾಟಿದ ಪರಪುರುಷರ ಮೇಲೆ ಕಣ್ಣುಹಾಕಿ ತಮ್ಮವರನ್ನಾಗಿ ಮಾಡಿಕೊಳ್ಳುವ ಕೆಲವು ಹುಡುಗಿಯರ ಕೆಲಸ ಅನೈತಿಕ ಹಾಗೂ ಸಮಾಜದ ಸ್ವಾಸ್ಥ ಕೆಡಿಸುವ ಕಾಯಕ ಅನ್ನೋದು ಸಮಾಜದ ನಂಬಿಕೆ. ಆದರೆ, ಇದಕ್ಕೆ ಸದ್ಯಕ್ಕೆ ಯಾವುದೇ ಕಡಿವಾಣ ಇಲ್ಲ. ಸಮೀಕ್ಷೆಗಳು ಹಾಗೂ ಮನಃಶಾಸ್ತ್ರಜ್ಞರು ಕಾರಣವನ್ನು ಹುಡುಕಿ ಹುಡುಕಿ ಹೇಳುತ್ತಿದ್ದಾರೆಯೇ ವಿನಃ ಅದನ್ನು ತಪ್ಪಿಸುವ ಅವರ ಗುರಿಯಿನ್ನೂ ಕೆಲಸ ಶುರುಮಾಡಿಲ್ಲ. ಹೀಗಾಗಿ ಸಮಾಜದಲ್ಲಿ ಅಂತಹ ಸಂಬಂಧಗಳು ನಡೆಯುತ್ತಲೇ ಇವೆ, ಅದರ ಪರಿಣಾಮಗಳೂ ಕೂಡ ಸಮಾಜದವನ್ನು ಬಾಧಿಸುತ್ತಲೇ ಇವೆ.

Trump orders nuclear missile test ರಷ್ಯಾ ಟೆಸ್ಟ್ ಬೆನ್ನಲ್ಲೇ ಪರಮಾಣು ಕ್ಷಿಪಣಿ ಪರೀಕ್ಷೆಗೆ ಟ್ರಂಪ್ ಸೂಚನೆ

TAGGED:Why do college girls get clean baldness from their uncles; what's the secret?
Share This Article
Facebook Twitter Copy Link Print
Previous Article Trump orders nuclear missile test ರಷ್ಯಾ ಟೆಸ್ಟ್ ಬೆನ್ನಲ್ಲೇ ಪರಮಾಣು ಕ್ಷಿಪಣಿ ಪರೀಕ್ಷೆಗೆ ಟ್ರಂಪ್ ಸೂಚನೆ
Next Article ಚಿತ್ತಾಪುರ ಪಥಸಂಚಲನ ವಿಚಾರ; ನ.5ಕ್ಕೆ ಮತ್ತೊಂದು ಸಭೆ,ನ.7ಕ್ಕೆ ವಿಚಾರಣೆ: ಕಲಬುರಗಿ ಹೈಕೋರ್ಟ್

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?