newsics.com
ರೇವಾ(ಮಧ್ಯಪ್ರದೇಶ): ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ 13 ವರ್ಷದ ಸಹೋದರ ತನ್ನ ತಂಗಿ ಮೇಲೆಯೇ ಅತ್ಯಾಚಾರವೆಸಗಿ ಕೊಂದು ಹಾಕಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
ಏಪ್ರಿಲ್ 24 ರಂದು ನಡೆದಿದ್ದ ಒಂಬತ್ತು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಈ ಘೋರ ಕೃತ್ಯವನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣ ಮುಚ್ಚಿಡಲು ಹಿರಿಯ ಸಹೋದರಿಯರು ಸಹಾಯ ಮಾಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
50 ಜನರ ವಿಚಾರಣೆ, ಆರೋಪಿಗಳ ತೀವ್ರ ವಿಚಾರಣೆ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಭೇದಿಸಿ ಸಂತ್ರಸ್ತೆಯ 13 ವರ್ಷದ ಸಹೋದರ, ಅವರ ತಾಯಿ ಮತ್ತು 17 ಮತ್ತು 18 ವರ್ಷದ ಸಹೋದರಿಯನ್ನು ಬಂಧಿಸಿದ್ದಾರೆ ಎಂದು ಅವರು ಶನಿವಾರ ಹೇಳಿದರು.
ಏಪ್ರಿಲ್ 24 ರಂದು ಜಾವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು.
ಮದುವೆಯಾಗಿ ವರ್ಷವಾದ್ರೂ ತನ್ನನ್ನು ಮುಟ್ಟದ ಐಆರ್‌ಎಸ್ ಅಧಿಕಾರಿ ಗಂಡನ ವಿರುದ್ಧ ಮಹಿಳೆ ದೂರು!