newsics.com
ಶೀರ್ಷಿಕೆಯ ಕಾರಣದಿಂದ ‘ಮೆಜೆಸ್ಟಿಕ್ 2’ ಸಿನಿಮಾ ಗಮನ ಸೆಳೆಯುತ್ತಿದೆ. ನಟ ದರ್ಶನ್ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟ ಸಿನಿಮಾ ‘ಮೆಜೆಸ್ಟಿಕ್’. ಆದರೆ ಈಗ ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಅವರು ನಟಿಸುತ್ತಿಲ್ಲ. ಬದಲಿಗೆ, ಹೊಸ ನಟ ಭರತ್ ಅವರು ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾದ ಐಟಂ ಸಾಂಗ್ ಚಿತ್ರೀಕರಣ ಮಾಡಲಾಯಿತು. ವಿಶೇಷ ಏನೆಂದರೆ, ಈ ಸಿನಿಮಾದ ಕಥಾನಾಯಕ ದರ್ಶನ್ ಫ್ಯಾನ್ ಆಗಿರುತ್ತಾನೆ. ಈಗಿನ ಟ್ರೆಂಡ್ಗೆ ತಕ್ಕಂತೆ ಹಾಡುಗಳು ಇರಲಿವೆ ಎಂದು ಚಿತ್ರತಂಡ ತಿಳಿಸಿದೆ.
ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ‘ಅಮ್ಮಾ ಎಂಟರ್ಪ್ರೈಸಸ್’ ಬ್ಯಾನರ್ ಮೂಲಕ ಚಿತ್ರದುರ್ಗದ ಹೆಚ್. ಹನುಮಂತಪ್ಪ ಅವರು ‘ಮೆಜೆಸ್ಟಿಕ್ 2’ ನಿರ್ಮಿಸುತ್ತಿದ್ದಾರೆ. 2002ರಲ್ಲಿ ತೆರೆಕಂಡ ‘ಮೆಜೆಸ್ಟಿಕ್’ ಚಿತ್ರದಲ್ಲಿ 90ರ ದಶಕದಲ್ಲಿ ರೌಡಿಸಂ ಕಹಾನಿ ಇತ್ತು. ಆದರೆ ಈಗ ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಮೆಜೆಸ್ಟಿಕ್ನ ರೌಡಿಸಂ, ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳನ್ನು ತೋರಿಸಲಾಗುವುದು. ನಿರ್ದೇಶಕ ರಾಮು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಮಗ ಭರತ್ ಅವರು ‘ಮೆಜೆಸ್ಟಿಕ್ 2’ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಕಂಠೀರವ ಸ್ಟುಡಿಯೋ’ದಲ್ಲಿ ಕಲರ್ಫುಲ್ ಸೆಟ್ ನಿರ್ಮಿಸಿ ಹಾಡಿನ ಶೂಟಿಂಗ್ ಮಾಡಲಾಗಿದೆ. ಈ ಹಾಡಿಗೆ ನಿರ್ದೇಶಕ ರಾಮು ಅವರೇ ಸಾಹಿತ್ಯ ಬರೆದಿದ್ದಾರೆ. ಸದ್ಯಕ್ಕೆ ಟ್ರೆಂಡ್ ಅನುಸಾರ ಅವರು ಲಿರಿಕ್ಸ್ ಬರೆದಿದ್ದಾರೆ. ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ’ ಎಂಬ ಈ ಹಾಡನ್ನು ಮೇಘನಾ ಹಳ್ಳಿಹಾಳ ಅವರು ಹಾಡಿದ್ದಾರೆ. ಕಳೆದ 3 ದಿನಗಳಿಂದ ನಡೆಯುತ್ತಿರುವ ಈ ಸಾಂಗ್ ಶೂಟಿಂಗ್ನಲ್ಲಿ ಐಟಂ ಡ್ಯಾನ್ಸರ್ ಮತ್ತು ನಾಯಕನ ಜತೆಗೆ ಸಹ ಕಲಾವಿದರು ಪಾಲ್ಗೊಂಡಿದ್ದಾರೆ.