Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಮಗಳು ಪ್ರಿಯತಮನ ಜೊತೆ ಓಡಿ ಹೋದಳು ಅಂತ ತಂದೆಯೋರ್ವ ಮಗಳು ಸತ್ತಿದ್ದಾಳೆ ಎಂದು ಊರಿಗೆಲ್ಲಾ ತಿಥಿ ಊಟ ಹಾಕಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ 19 ವರ್ಷದ ಸುಶ್ಮಿತಾ ಶಿವಗೌಡ ಪಾಟೀಲ ತಾನು ಪ್ರೀತಿಸಿದ ಯುವಕ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಈಕೆ ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ವಿಠ್ಠಲ ಬಸ್ತವಾಡ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡ್ತಿದ್ದ ಎನ್ನಲಾಗ್ತಿದೆ. ಇಬ್ಬರ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆ ಇಬ್ಬರು ಓಡಿ ಹೋಗಿದ್ದಾರಂತೆ. ಮಗಳ ಮಾಡಿದ ಕೆಲಸಕ್ಕೆ ಕೋಪಗೊಂಡ ತಂದೆ ಆಕೆ ನನ್ನ ಪಾಲಿಗೆ ಇಲ್ಲ ಎಂದು ಆಕೆಯ ಫೋಟೋ ಬ್ಯಾನರ್ ಮಾಡಿಸಿ ಊರಿಗೆ ಹಾಕಿದ್ದಾನೆ. ಅಲ್ಲದೆ ಸಂಬಂಧಿಕರನ್ನ ಕರೆದು ತಿಥಿಯೂಟ ಹಾಕಿಸಿದ್ದಾನೆ.
ಸುಶ್ಮಿತಾ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಅವರಲ್ಲಿ ಸುಶ್ಮಿತಾ ಕೊನೆಯವರಾಗಿದ್ದಾರೆ. ಈಕೆ ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರೋ ಶಿವಗೌಡ ಪಾಟೀಲ .ಮೊದಲಿಗೆ ರಾಯಬಾಗ ಪೊಲೀಸ್ ಸ್ಟೇಷನ್‌ನಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದರು.