Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 4.5 ಕೆ.ಜಿ. ಯಷ್ಟು ಚಿನ್ನ ನಾಪತ್ತೆಯಾದ ಕೇಸ್ ಬಗ್ಗೆ ಎಸ್‌ಐಟಿ ಯಿಂದ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ದೇವಾಲಯಕ್ಕೆ ದಾನ ನೀಡಿದ್ದ ಚಿನ್ನದ ಪೈಕಿ 4.5 ಕೆಜಿ ಯಷ್ಟು ಚಿನ್ನ ಹೇಗೆ ಕಾಣೆಯಾಯಿತು ಎಂಬ ಬಗ್ಗೆ ಈಗ ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ದೇವಾಲಯದ ಬಾಗಿಲುಗಳಿಗೆ ಚಿನ್ನದ ಪ್ಲೇಟ್ ಗಳನ್ನು ಹಾಕಲಾಗಿತ್ತು. ಹೊಸ ಚಿನ್ನದ ಲೇಪನಕ್ಕಾಗಿ ಚಿನ್ನದ ಪ್ಲೇಟ್ ಗಳನ್ನು ತೆಗೆಯಲಾಗಿತ್ತು. ಬಳಿಕ ಮತ್ತೆ ತಂದಾಗ 4.5 ಕೆ.ಜಿ. ಯಷ್ಟು ತೂಕ ಕಡಿಮೆ ಇತ್ತು.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ಕದ್ದವರಾರು? ಎಂಬ ಪ್ರಶ್ನೆ ಉದ್ಭವವಾಗಿದೆ. ಇದರ ಬಗ್ಗೆ ತನಿಖೆ ನಡೆಸಲು ಕೇರಳ ಹೈಕೋರ್ಟ್ ಎಡಿಜಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ.