Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕೆಲವೇ ದಿನಗಳ ಹಿಂದೆ ಶುರುವಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು, ಸ್ಟುಡಿಯೋಗೆ ಬೀಗ ಹಾಕಲಾಗಿದೆ. ರಾಮನಗರ ತಹಸೀಲ್ದಾರ್ ತೇಜಸ್ವಿನಿ ಅವರ ಜತೆ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ (Bidadi) ಬಳಿಯಿರುವ ವೆಲ್ಸ್ ಸ್ಟುಡಿಯೋಸ್ & ಎಂಟರ್‌ಟೈನ್ಮೆಂಟ್ ಪ್ರೈ.ಲಿ. ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು.
ಬಿಗ್ ಬಾಸ್ ಮನೆಯನ್ನು ಕೆಡವಿ ಪುನರ್ನಿರ್ಮಿಸಲು ಸುಮಾರು 3 ಕೋಟಿಯಿಂದ 3.5 ಕೋಟಿ ರೂ. ವೆಚ್ಚ ಆಗುತ್ತದೆ. ಇದರಲ್ಲಿ ಮನೆಯ ವಿನ್ಯಾಸ, ಸೆಟ್‌ನಲ್ಲಿನ ಬದಲಾವಣೆಗಳು, ಭದ್ರತೆ ಮತ್ತು ಕಾರ್ಯಕ್ರಮಕ್ಕೆ ಅಗತ್ಯವಿರುವ ಸಹಾಯಕ ಸಿಬ್ಬಂದಿ ಕೂಡ ಸೇರಿಸಲಾಗಿರುತ್ತದೆ. ಮನೆ ಕಟ್ಟಲು ಸುಮಾರು 500 ರಿಂದ 600 ಕಾರ್ಮಿಕರು ಆರು ತಿಂಗಳ ಕಾಲ ಕೆಲಸ ಮಾಡಿರುತ್ತಾರೆ.
ಒಟ್ಟಾರೆ ಬಿಗ್ ಬಾಸ್ ಶೋನ ಒಟ್ಟು ಖರ್ಚು ಪ್ರತಿ ಸೀಸನ್‌ಗೆ ₹5 ಕೋಟಿಯಿಂದ ₹10 ಕೋಟಿ ಅಥವಾ ಅದಕ್ಕಿಂತ ಹೆಚ್ಚಾಗಿರಬಹುದು, ಇದರಲ್ಲಿ ಮನೆ ನಿರ್ಮಾಣ, ಲೇಔಟ್, ವಿನ್ಯಾಸ, ಪ್ರಮುಖ ತಂತ್ರಜ್ಞಾನ, ಭದ್ರತೆ, ಸಿಬ್ಬಂದಿ ಮತ್ತು ನಿರೂಪಕರ ಸಂಭಾವನೆ ಸೇರಿರುತ್ತದೆ. ಅಂದರೆ ಕನ್ನಡದಲ್ಲಿ ಕಳೆದ 12 ವರ್ಷಗಳಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ₹1 ಕೋಟಿಯ ಆಸುಪಾಸು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ
‘ಬಿಗ್ ಬಾಸ್ ಕನ್ನಡ 12 ಶೋ ಅರ್ಧಕ್ಕೆ ನಿಂತು ಹೋಗುತ್ತಾ ಅಥವಾ ಪುನಾರಂಭಗೊಳ್ಳುತ್ತಾ ಎಂದು ಕಾದು ನೋಡಬೇಕಾಗಿದೆ.