Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುಧಾಬಿಗೆ ಬಂದಿಳಿದ ಆಫ್ರಿಕಾದ ರಾಜ!
ದೇಶಪ್ರಮುಖ

15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುಧಾಬಿಗೆ ಬಂದಿಳಿದ ಆಫ್ರಿಕಾದ ರಾಜ!

Share
2 Min Read
SHARE

Newsics_Kannada

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಅಬುಧಾಬಿ: ಹದಿನೈದು ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರಿಕಾದ ರಾಜನೊಬ್ಬ ಇಡೀ ವಿಮಾನ ನಿಲ್ದಾಣವನ್ನೇ ತಾತ್ಕಾಲಿಕವಾಗಿ ಸ್ತಬ್ಧಗೊಳಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜನ ಅದ್ಧೂರಿ ಜೀವನಶೈಲಿಯ ಬಗ್ಗೆ ಜಾಗತಿಕವಾಗಿ ಚರ್ಚೆ ಆರಂಭವಾಗಿದೆ.

ಅಲ್ಲದೇ, ಈ ಕಾಲದಲ್ಲೂ ಇದೆಲ್ಲಾ ಇದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ನಲ್ಲಿ ಬಂದು ಇಳಿದ ಈ ರಾಜ ಹಾಗೂ ಆತನ ಪರಿವಾರದ ದೃಶ್ಯಗಳು ಎಲ್ಲರಲ್ಲೂ ಕುತೂಹಲ ಮೂಡಿಸಿವೆ. ಅರ್ಧಂಬರ್ಧ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಈ ವ್ಯಕ್ತಿಗೆ ಸುತ್ತಲಿರುವವರು ತಲೆಬಾಗಿ ನಮಸ್ಕರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಯಾರು ಈ ರಾಜ?
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಬೇರಾರೂ ಅಲ್ಲ, ದಕ್ಷಿಣ ಆಫ್ರಿಕಾದಲ್ಲಿರುವ ಎಸ್ವಾಟಿನಿ (ಹಿಂದಿನ ಸ್ವಾಜಿಲ್ಯಾಂಡ್) ದೇಶದ ರಾಜ ಮೂರನೇ ಮ್ಸ್ವಾಟಿ. ಇವರು ಆಫ್ರಿಕಾದ ಕೊನೆಯ ಸಂಪೂರ್ಣ ರಾಜಪ್ರಭುತ್ವದ ಅರಸರಾಗಿದ್ದಾರೆ. ಜುಲೈ 10, 2025ರಂದು ಅವರ ಅಬುಧಾಬಿಗೆ ಭೇಟಿ ನೀಡಿದ್ದರು. ರಾಜ ಮೂರನೇ ಮ್ಸ್ವಾಟಿ ಅವರು ತಮ್ಮ 15 ಪತ್ನಿಯರು, 30 ಮಕ್ಕಳು ಮತ್ತು ಸುಮಾರು 100 ಸೇವಕರ ದಂಡಿನೊಂದಿಗೆ ಅಬುಧಾಬಿಗೆ ಬಂದಿಳಿದಿದ್ದರು. ಅವರ ಪರಿವಾರದ ಗಾತ್ರದಿಂದಾಗಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮೂರು ಟರ್ಮಿನಲ್‌ಗಳನ್ನು ಮುಚ್ಚಿ, ತಾತ್ಕಾಲಿಕ ಲಾಕ್‌ಡೌನ್ ಜಾರಿಗೊಳಿಸಬೇಕಾಯಿತು.

“ವಿಲಾಸಿ ಜೀವನ ಮತ್ತು ಟೀಕೆ”
ವರದಿಗಳ ಪ್ರಕಾರ, ರಾಜನ ಈ ಭೇಟಿಯ ಉದ್ದೇಶ ಯುಎಇಯೊಂದಿಗೆ ಆರ್ಥಿಕ ಒಪ್ಪಂದಗಳ ಕುರಿತು ಮಾತುಕತೆ ನಡೆಸುವುದು. ಆದರೆ, ಮಾತುಕತೆಗಿಂತ ಹೆಚ್ಚಾಗಿ ಅವರ ವೈಭೋಗದ ಜೀವನಶೈಲಿಯೇ ಜಾಗತಿಕ ಗಮನ ಸೆಳೆದಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ರಾಜ ಮ್ಸ್ವಾಟಿ ಚಿರತೆ ಚರ್ಮದ ಮಾದರಿಯ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರೆ, ಅವರ ಪತ್ನಿಯರು ವರ್ಣರಂಜಿತ ಆಫ್ರಿಕನ್ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದರು. ರಾಜ ಮೂರನೇ ಮ್ಸ್ವಾಟಿ ವಿಶ್ವದ ಅತ್ಯಂತ ಶ್ರೀಮಂತ ದೊರೆಗಳಲ್ಲಿ ಒಬ್ಬರಾಗಿದ್ದು, ಅವರ ನಿವ್ವಳ ಮೌಲ್ಯ ಒಂದು ಶತಕೋಟಿ ಡಾಲರ್ ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

“ವಿವಾದಾತ್ಮಕ ಸಂಪ್ರದಾಯಗಳು”
ರಾಜ ಮ್ಸ್ವಾಟಿ ಪ್ರತಿ ವರ್ಷ ‘ರೀಡ್ ಡ್ಯಾನ್ಸ್’ ಎಂಬ ಸಾಂಪ್ರದಾಯಿಕ ಸಮಾರಂಭದಲ್ಲಿ ತಮಗಾಗಿ ಹೊಸ ವಧುವನ್ನು ಆಯ್ಕೆ ಮಾಡುತ್ತಾರೆ. ಈ ಪದ್ಧತಿಯು ಆಕರ್ಷಣೆಯ ಜೊತೆಗೆ ತೀವ್ರ ಟೀಕೆಗೂ ಗುರಿಯಾಗಿದೆ. ಒಂದೆಡೆ ರಾಜನು ಇಂತಹ ವೈಭೋಗದ ಜೀವನ ನಡೆಸುತ್ತಿದ್ದರೆ, ಮತ್ತೊಂದೆಡೆ ಎಸ್ವಾಟಿನಿ ದೇಶದ ಸುಮಾರು ಶೇ.60 ಜನಸಂಖ್ಯೆಯು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದೆ. ದೇಶದಲ್ಲಿ ವ್ಯಾಪಕವಾದ ಸಂಕಷ್ಟದ ನಡುವೆಯೂ ರಾಜನ ಅದ್ಧೂರಿ ಖರ್ಚು, ಐಷಾರಾಮಿ ಜೀವನದ ಬಗ್ಗೆ ಆಂತರಿಕವಾಗಿಯೂ ಟೀಕೆಗಳು ಹೆಚ್ಚುತ್ತಿವೆ. ಈ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಹರಿದಾಡುತ್ತಿದ್ದು, “ರಾಜನ ಪರಿವಾರವು ಇಡೀ ಹಳ್ಳಿಯಂತೆ ಕಾಣುತ್ತಿದೆ!” ಎಂದು ಅನೇಕರು ತಮಾಷೆ ಮಾಡಿದ್ದಾರೆ.

ಹೆಣ್ಣು ಮಕ್ಕಳ ತಂದೆಯಾದವನು ಈ ಕೆಲಸಗಳನ್ನು ಎಂದಿಗೂ ಮಾಡಬಾರದು

TAGGED:30 childrenAfrican king arrives in Abu Dhabi with 15 wivesand 100 servants!
Share This Article
Facebook Twitter Copy Link Print
Previous Article ಹೆಣ್ಣು ಮಕ್ಕಳ ತಂದೆಯಾದವನು ಈ ಕೆಲಸಗಳನ್ನು ಎಂದಿಗೂ ಮಾಡಬಾರದು
Next Article Bihar election ಬಿಹಾರ ವಿಧಾನಸಭಾ ಚುನಾವಣೆಗೆ ದಿನ ನಿಗದಿ

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?