newsics.com
ನವದೆಹಲಿ: ಈ ಬಾರಿ ಒಲಿಂಪಿಕ್ಸ್ ಕೂಟದಲ್ಲಿ ಭಾರತೀಯ ಸೇನೆಯ 24 ಮಂದಿ ಕೂಡ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.
117 ಕ್ರೀಡಾಪಟುಗಳ ಪೈಕಿ 72 ಮಂದಿಗೆ ಇದು ಚೊಚ್ಚಲ ಒಲಿಂಪಿಕ್ಸ್ ಕೂಟವಾಗಿದೆ. ಭಾರತೀಯ ಸೇನೆಯ 24 ಮಂದಿ ಕೂಡೆ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಬಾಕ್ಸರ್ಗಳಾದ ಜಾಸ್ಮಿನ್ ಲಂಬೋರಿಯಾ ಮತ್ತು ಕುಸ್ತಿ ಪಟು ರಿತಿಕಾ ಹೂಡಾ ಈ ಮಹಿಳಾ ಸೇನಾನಿಗಳು. ಅಥ್ಲೆಟಿಕ್ಸ್ನಲ್ಲಿ ಗರಿಷ್ಠ 13 ಮಂದಿ ಸೈನಿಕರಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಓಟಗಾರ ಅವಿನಾಶ್ ಸಾಬ್ಲೆ ಇದರಲ್ಲಿ ಪ್ರಮುಖರು. ಬಾಕ್ಸರ್ ಅಮಿತ್ ಪಂಗಲ್, ಆರ್ಚರ್ ತರುಣ್ದೀಪ್ ರೈ, ಟೆನಿಸ್ ಆಟಗಾರ ಶ್ರೀರಾಮ್ ಬಾಲಾಜಿ ಕೂಡ ಸೈನಿಕರಾಗಿದ್ದಾರೆ.
ಭಾರತ (India’s Schedule At Paris Olympics) ನಾಳೆಯಿಂದ ಒಲಿಂಪಿಕ್ಸ್ ಸ್ಪರ್ಧೆ ಆರಂಭಿಸಲಿದೆ. ನಾಳೆ(ಗುರುವಾರ) ನಡೆಯುವ ಆರ್ಚರಿ(Archery) ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತು ವಿಭಾಗದಲ್ಲಿ ಭಾರತ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur) ಕಣಕ್ಕಿಳಿಯಲಿದ್ದಾರೆ. ಪುರುಷರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಬಿ. ಧೀರಾಜ್(B. Dhiraj), ತರುಣದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಸಂಜೆ 5: 45ಕ್ಕೆ ನಡೆಯಲಿದೆ. ಮಹಿಳೆಯ ಪಂದ್ಯ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.