Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 17ರ ಹುಡುಗನ ಜತೆ ಮನೆಯಲ್ಲೇ 30ರ ಆಂಟಿ ಸರಸ! ಇದನ್ನು ನೋಡಿದ ಮಗಳನ್ನೇ ಕೊಂ*ದು‌ ಬಾವಿಗೆಸೆದ ತಾಯಿ!
ದೇಶಪ್ರಮುಖ

17ರ ಹುಡುಗನ ಜತೆ ಮನೆಯಲ್ಲೇ 30ರ ಆಂಟಿ ಸರಸ! ಇದನ್ನು ನೋಡಿದ ಮಗಳನ್ನೇ ಕೊಂ*ದು‌ ಬಾವಿಗೆಸೆದ ತಾಯಿ!

Share
2 Min Read
SHARE

newsics.com

ಉತ್ತರ ಪ್ರದೇಶದ ಹಥ್ರಾಸ್ ಮತ್ತೊಮ್ಮೆ ಸುದ್ದಿಯಾಗಿದೆ. 30 ವರ್ಷದ ಮಹಿಳೆಗೆ 17ರ ಹುಡುಗನ ಜತೆಗೆ ಪ್ರೀತಿ ಶುರುವಾಗಿದೆ. ಇಬ್ಬರೂ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು.

ಗಂಡ, ಗಂಡನ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ತನ್ನ ಲವರ್ 17ರ ಹುಡುಗನನ್ನು ಮನೆಗೆ ಕರೆದಿದ್ದಾಳೆ. ಇವರಿಬ್ಬರು ಆಪ್ತ ಸಮಯ ಕಳೆಯುತ್ತಿರುವಾಗಲೇ 6 ವರ್ಷದ ಮಗಳು ನೋಡಿದ್ದಾಳೆ. ಇವರಿಬ್ಬರೂ ಒಂದೇ ಬೆಡ್‌ನಲ್ಲಿರುವುದನ್ನು ನೋಡಿ ಆಘಾತಗೊಂಡಿದ್ದಾಳೆ. ತಾಯಿಯ ನಡೆಯಿಂದ ಆಕ್ರೋಶಗೊಂಡಿದ್ದಾಳೆ.

30 ವರ್ಷದ ಮಹಿಳೆಯ ಅಕ್ರಮ ಸಂಬಂಧವನ್ನು ತನ್ನ ಸ್ವಂತ ಮಗಳೇ ನೋಡಿದ ಕಾರಣ ಇಡೀ ಕುಟುಂಬ ಇದೀಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಹಥ್ರಾಸ್‌ಗೆ ಮದುವೆಯಾಗಿ ಬಂದ ಈ ಮಹಿಳೆಗೆ 6 ವರ್ಷದ ಮಗಳಿದ್ದಾಳೆ. ಗಂಡ ಉತ್ತಮ ಸಂಪಾದನೆ ಮಾಡುತ್ತಿದ್ದಾನೆ. ಪತ್ನಿ ಹಾಗೂ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಮಗಳು ಎಂದರೆ ಪಂಚಪ್ರಾಣ. ಗಂಡ ತನ್ನ ತಾಯಿ ಜತೆಯಲ್ಲಿ ಕಾರ್ಯಕ್ರಮದ ನಿಮಿತ್ತ ತೆರಳಿದ್ದಾನೆ. ಮನೆಯಲ್ಲಿ ಹೆಂಡತಿ ಹಾಗೂ ಮಗಳು ಇಬ್ಬರೇ ಇದ್ದರು.

17ರ ಹುಡುಗನ ಜತೆ ಈ ಮಹಿಳೆಗೆ ಸಂಬಂಧ ಶುರುವಾಗಿತ್ತು. ಫೋನ್ ಮೂಲಕ ಶುರುವಾದ ಪ್ರೀತಿ ಬಳಿಕ ಕದ್ದು ಮುಚ್ಚಿ ಭೇಟಿಯಾಗುವ ಮಟ್ಟಕ್ಕೆ ಬೆಳೆದಿತ್ತು. ಇತ್ತ ಗಂಡ ಹಾಗೂ ಅತ್ತೆ ಮನೆಯಲ್ಲಿ ಇಲ್ಲದ ವೇಳೆ ತನ್ನ ಲವ್ವರ್‌ನ ಮನೆಗೆ ಕರೆದಿದ್ದಾಳೆ.

ಮಗಳನ್ನು ಸಂಬಂಧಿಕರ ಮನೆಗೆ ಆಟವಾಡಲು ಕಳುಹಿಸಿದ್ದಾಳೆ. ಸಂಜೆಯಾದ ಬಳಿಕ ನಾನೇ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಮಗಳಿಗೆ ಹೇಳಿದ್ದಾಳೆ. ಇತ್ತ ಏನೂ ಅರಿಯದ ಮಗಳನ್ನು ಹತ್ತಿರದ ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದ ಈಕೆ ತನ್ನ ಲವರ್ ಜತೆ ಆಪ್ತ ಸಮಯ ಕಳೆಯಲು ಮುಂದಾಗಿದ್ದಾಳೆ.

17ರ ಹುಡುಗನ ಜತೆ ಕೋಣೆಯಲ್ಲಿ ಆಪ್ತ ಸಮಯದಲ್ಲಿರುವಾಗಲೇ ಇತ್ತ ಸಂಬಂಧಿಕರ ಮನೆಯಿಂದ ಬಾಲಕಿ ಮನೆಗೆ ವಾಪಸ್ಸಾಗಿದ್ದಾಳೆ. ಸಂಬಂಧಿಕರ ಮನೆಯಲ್ಲಿ ಹೆಚ್ಚು ಹೊತ್ತು ಇರಲು ಇಷ್ಟಪಡದ ಬಾಲಕಿ ಮನೆಗೆ ಮರಳಿದ್ದಾಳೆ. ಆದರೆ ಮನೆಯಲ್ಲಿನ ದೃಶ್ಯ ನೋಡಿ ಆಘಾತಗೊಂಡಿದ್ದಾಳೆ. ತನ್ನ ಸ್ವಂತ ತಾಯಿ ಬೇರೊಬ್ಬನ ಜತೆಯಲ್ಲಿ ಹಾಸಿಗೆಯಲ್ಲಿದ್ದಳು. ಇತ್ತ ಆಪ್ತ ಸಮಯದಲ್ಲಿದ್ದ ಈ ಜೋಡಿ ಬಾಲಕಿಯನ್ನು ನೋಡಿದ್ದಾರೆ. ಇತ್ತ ತಂದೆಗೆ ಹೇಳುತ್ತೇನೆ ಎಂದು ಮಗಳು ತಾಯಿಗೆ ಹೇಳಿದ್ದಾಳೆ. ಇಷ್ಟೇ ನೋಡಿ ಈ ಜೋಡಿಗೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿವಾಗಿದೆ.

ಮಗಳನ್ನೇ ಹತ್ಯೆಗೈದ ತಾಯಿ

ತಂದೆಗೆ ಹೇಳುತ್ತೇನೆ ಎಂದು ಫೋನ್ ಕೈಗೆತ್ತಿಕೊಂಡ ಬಾಲಕಿಯ ನಡೆಯಿಂದ ಇವರಿಬ್ಬರೂ ಭಯಗೊಂಡಿದ್ದಾರೆ. ಬಾಲಕಿಯನ್ನು ಹಿಡಿದೆಳೆದ ತಾಯಿ ಗದರಿಸಿದ್ದಾರೆ. ಆದರೆ ಬಾಲಕಿ ಮಾತ್ರ ತಂದೆಗೆ ಹೇಳುತ್ತೇನೆ ಎಂದು ಅಳಲು ಆರಂಭಿಸಿದ್ದಾಳೆ. 17ರ ಹುಡುಗನ ಜತೆ ಸೇರಿ ಸ್ವಂತ ಮಗಳನ್ನೇ ಹತ್ಯೆ ಮಾಡಿದ್ದಾಳೆ. ಬಳಿಕ ಬಾವಿಗೆ ಎಸೆದಿದ್ದಾರೆ.

ಮಗಳು ನಾಪತ್ತೆಯಾಗಿದ್ದಾಳೆ ಎಂದು ಅಂದು ರಾತ್ರಿ ಗಂಡನಿಗೆ ಫೋನ್ ಮಾಡಿದ್ದಾಳೆ. ಓಡೋಡಿ ಬಂದ ಗಂಡ ದೂರು ದಾಖಲಿಸಿದ್ದಾನೆ. ಹುಡುಕಾಟ ನಡೆಸಿದ ಪೊಲೀಸರು ಬಾಲಕಿಯ ಶವ ಪತ್ತೆ ಹಚ್ಚಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಇದು ಕೊಲೆ ಎಂದು ಬಯಲಾಗಿತ್ತು. ಹೀಗಾಗಿ ಪೊಲೀಸರು ಈ ಮಹಿಳೆ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ನಡೆದ ಘಟನೆ ಬಯಲಾಗಿದೆ. ಇದೀಗ ಮಹಿಳೆ ಅರೆಸ್ಟ್ ಆಗಿದ್ದರೆ, ಇತ್ತ ಹುಡುಗನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Relationship ಗ್ರಹಣ ವೇಳೆ ಪ್ರಣಯೋತ್ಸವ ಸಮ್ಮತವೇ? ದೈಹಿಕ ಸಂಪರ್ಕ ಮಾಡಿದರೆ ಏನಾಗತ್ತೆ?

ಸಾಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಉಗುಳಿದ ಅನ್ಯ ಕೋಮಿನ ಬಾಲಕರು: ವಿಡಿಯೋ ವೈರಲ್, ಕ್ಷಮೆ ಯಾಚನೆ ಬಳಿಕ ತಿಳಿಯಾದ ಪರಿಸ್ಥಿತಿ

India wins Asia Cup hockey ಭಾರತಕ್ಕೆ ಏಷ್ಯಾ ಕಪ್ ಹಾಕಿ ಕಿರೀಟ

TAGGED:A 30-year-old aunty was intimate with a 17-year-old boy at home! Seeing thisthe mother killed her own daughter and threw her into a well!
Share This Article
Facebook Twitter Copy Link Print
Previous Article Relationship ಗ್ರಹಣ ವೇಳೆ ಪ್ರಣಯೋತ್ಸವ ಸಮ್ಮತವೇ? ದೈಹಿಕ ಸಂಪರ್ಕ ಮಾಡಿದರೆ ಏನಾಗತ್ತೆ?
Next Article ಮದುವೆಯಲ್ಲಿ ಬೀದಿನಾಯಿಗಳಿಗೆ ಸತ್ಕಾರ! ವೈರಲ್ ವಿಡಿಯೋ ನೋಡಿ

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?