Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > relationship ಈ ಅಭ್ಯಾಸಗಳೇ ಹಾಲು ಜೇನಿನಂತಹ ಸಂಬಂಧ ಹಾಳಾಗಲು ಕಾರಣ
ಪ್ರಮುಖರಿಲೇಷನ್‌ಶಿಪ್

relationship ಈ ಅಭ್ಯಾಸಗಳೇ ಹಾಲು ಜೇನಿನಂತಹ ಸಂಬಂಧ ಹಾಳಾಗಲು ಕಾರಣ

Share
2 Min Read
SHARE

newsics.com

ಪ್ರೇಮ ಸಂಬಂಧವಾಗಿರಬಹುದು ಅಥವಾ ದಾಂಪತ್ಯ ಜೀವನವಾಗಿರಬಹುದು ಈ ಸಂಬಂಧ ನಿಂತಿರುವುದೇ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಆಧಾರದ ಮೇಲೆ. ಹೀಗೆ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವ ಎನ್ನುವುದು ತುಂಬಾನೇ ಮುಖ್ಯ. ಆದರೆ ಕೆಲವೊಮ್ಮೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ.
ಸಂಬಂಧವನ್ನು ಹಾಳು ಮಾಡುವಂತಹ ಅಭ್ಯಾಸಗಳು:
ಸಂಗಾತಿಯನ್ನು ಹಗುರವಾಗಿ ಪರಿಗಣಿಸುವುದು: ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಪ್ರಶಂಸಿಸುವುದು ಮುಖ್ಯ. ನೀವು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ನಿರ್ಲಕ್ಷ್ಯಿಸಲು ಪ್ರಾರಂಭಿಸಿದಾಗ ಅಥವಾ ಯಾವಾಗಲೂ ಅವರನ್ನು ಹಗುರವಾಗಿ ಪರಿಗಣಿಸಿದಾಗ, ಇದು ಖಂಡಿತವಾಗಿಯೂ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುತ್ತದೆ.
ಸಂವಹನದ ಕೊರತೆ: ಸಂವಹದ ಕೊರತೆಯಿಂದಲೂ ಸಂಬಂಧ ಹಾಳಾಗುತ್ತವೆ. ಹೌದು ನೀವು ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳದಿದ್ದರೆ ಅಥವಾ ನಿಮ್ಮ ಸಂಗಾತಿ ತಮ್ಮ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ಈ ಸಂವಹನ ಅಂತರವು ಸಂಬಂಧವನ್ನು ಹಾಳುಮಾಡಬಹುದು. ಅಲ್ಲದೆ ಸಂವಹನದ ಕೊರತೆಯಿಂದ ಸಂಬಂಧದಲ್ಲಿ ಅಪನಂಬಿಕೆಯೂ ಉಂಟಾಗುತ್ತದೆ.
ಸಮಯ ನೀಡದಿರುವುದು: ಇಂದಿನ ಕಾರ್ಯನಿರತ ಜೀವನದಲ್ಲಿ, ಹಲವರು ತಮ್ಮ ಸಂಗಾತಿಗೆ ಸಮಯ ನೀಡಲು ಮರೆತುಬಿಡುತ್ತಾರೆ. ಮತ್ತು ತಮ್ಮಷ್ಟಕ್ಕೆ ಇದ್ದು ಬಿಡುತ್ತಾರೆ. ಇವೆಲ್ಲವೂ ಸಂಬಂಧದಲ್ಲಿ ಅಂತರವನ್ನು ಉಂಟುಮಾಡಬಹುದು. ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಸಂಬಂಧ ಎನ್ನುವಂತಹದ್ದು ಬಲಗೊಳ್ಳುತ್ತದೆ.
ಸಣ್ಣ ವಿಷಯಗಳಿಗೂ ಜಗಳವಾಡುವುದು: ಪ್ರತಿಯೊಂದು ಸಂಬಂಧದಲ್ಲೂ ವಾದಗಳು, ಸಣ್ಣಪುಟ್ಟ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳು ಇರುತ್ತವೆ, ಆದರೆ ಸಣ್ಣ ವಿಷಯಗಳಿಗೆ ಪದೇ ಪದೇ ಅನಗತ್ಯವಾಗಿ ಜಗಳವಾಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು.
ಗೌರವ ನೀಡದಿರುವುದು: ನೀವು ನಿಮ್ಮ ಸಂಗಾತಿಯನ್ನು ಗೌರವಿಸದಿದ್ದರೆ, ಸಂಬಂಧವು ಎಂದಿಗೂ ಬಲವಾಗಿರಲು ಸಾಧ್ಯವಿಲ್ಲ. ನೀವು ಅವರ ಆಲೋಚನೆಗಳನ್ನು ಗೌರವಿಸದಿರುವ ಅಥವಾ ಇತರರ ಮುಂದೆ ಅವರನ್ನು ಕೀಳಾಗಿ ನೋಡುವ ಅಭ್ಯಾಸಗಳು ಸಂಗಾತಿಯ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತವೆ ಮತ್ತು ಸಂಬಂಧವನ್ನು ಹಾಳು ಮಾಡುತ್ತದೆ.
ತಪ್ಪುಗಳ ಬಗ್ಗೆಯೇ ಮಾತನಾಡುವುದು: ನೀವು ನಿಮ್ಮ ಸಂಗಾತಿಯ ನ್ಯೂನತೆಗಳು ಮತ್ತು ತಪ್ಪುಗಳ ಬಗ್ಗೆಯೇ ಹೆಚ್ಚು ಮಾತನಾಡಿದಾಗ ಸಂಬಂಧದಲ್ಲಿ ನಕಾರಾತ್ಮಕತೆ ಎನ್ನುವುಂತಹದ್ದು ಸೃಷ್ಟಿಯಾಗುತ್ತದೆ. ಮತ್ತು ನಂತರದಲ್ಲಿ ಇದರಿಂದ ಸುಂದರ ಸಂಬಂಧವೇ ಹಾಳಾಗಿ ಹೋಗುತ್ತದೆ.
ಅತಿಯಾದ ನಿಯಂತ್ರಣ: ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯವಾದ ವಿಷಯ. ಹೀಗಿರುವಾಗ ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸಿದರೆ ಅಥವಾ ನಿಮ್ಮ ಇಚ್ಛೆಗಳನ್ನು ಸಂಗಾತಿಯ ಮೇಲೆ ಹೇರಲು ಪ್ರಾರಂಭಿಸಿ ಅವರನ್ನು ನಿಯಂತ್ರಿಸಲು ಬಯಿಸಿದರೆ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ಯಾವಾಗಲೂ ಟೀಕಿಸುವುದು: ನೀವು ಯಾವಾಗಲೂ ನಿಮ್ಮ ಸಂಗಾತಿಯನ್ನು ಟೀಕಿಸಿದರೆ ಮತ್ತು ಅವರ ಒಳ್ಳೆಯತನವನ್ನು ನಿರ್ಲಕ್ಷಿಸಿದರೆ, ಇದು ಸಂಬಂಧದ ಮಾಧುರ್ಯವನ್ನು ಕೊನೆಗೊಳಿಸಬಹುದು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ ಸಂಬಳ ಎಷ್ಟು?

TAGGED:These habits are the main reason why a relationship like milk and honey is ruined.
Share This Article
Facebook Twitter Copy Link Print
Previous Article ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ ಸಂಬಳ ಎಷ್ಟು?
Next Article LPG ಗ್ಯಾಸ್ ಸಿಲಿಂಡರ್ ಗೂ ಇರುತ್ತೆ `ಎಕ್ಸ್ಪೈರಿ ಡೇಟ್, ಈ ರೀತಿ ಚೆಕ್ ಮಾಡಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ವಿದೇಶಪ್ರಮುಖ

ಜೂನ್ 6ರಂದು ಭಾರತಕ್ಕೆ CJP ಸಂಸ್ಥಾಪಕ ದೀಪ್ಕೆ

2 Min Read
ಪ್ರಮುಖ

ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರಗೊಂಡು ಹಿಂದೂ ಧರ್ಮಕ್ಕೆ ಮತಾಂತರ!

2 Min Read
ಪ್ರಮುಖ

ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ

1 Min Read
ಪ್ರಮುಖದೇಶ

ಮಮತಾ ಬ್ಯಾನರ್ಜಿ ಆಪ್ತ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?