newsics.com
ತಲೈವ ರಜಿನಿಕಾಂತ್ ನಟನೆಯ ಸಿನಿಮಾ ಕೂಲಿ ರಿಲೀಸ್ ಆಗಿದೆ. ಆಮೀರ್ ಖಾನ್, ನಾಗಾರ್ಜುನ, ಉಪೇಂದ್ರ, ರಚಿತಾ ರಾಮ್, ಸತ್ಯರಾಜ್, ಸೌಬಿನ್ ಸಾಹಿರ್ ರಂತಹ ಘಟಾನುಘಟಿ ತಾರೆಯರು ರಜಿನಿಗೆ ಸಾಥ್ ಕೊಟ್ಟಿದ್ದರು. ಎಲ್ಲಾ ಭಾಷೆಯಿಂದಲೂ ಒಬ್ಬೊಬ್ಬ ಸ್ಟಾರ್ ಇದ್ದಿದ್ರಿಂದ ಈ ಸಿನಿಮಾ ಸಾವಿರ ಕೋಟಿ ಗಳಿಸೋದು ಫಿಕ್ಸ್ ಅಂತ್ಲೇ ಹೇಳಲಾಗಿತ್ತು.
ಚಿತ್ರ ‘ಕೂಲಿ’ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ರೂ. ದಾಟಿದೆ. ಕುಸಿತದ ನಂತರ ಹಬ್ಬದ ಸಂಭ್ರಮವನ್ನು ಕಾಣುತ್ತಿದೆ.
ಎರಡನೇ ವಾರ ನಿಧಾನಗತಿಯಲ್ಲಿದ್ದರೂ ರಜನಿಕಾಂತ್ ಅವರ ಚಿತ್ರ ‘ಕೂಲಿ’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ದಾಟುವಲ್ಲಿ ಯಶಸ್ವಿಯಾಗಿದೆ, ಈ ವರ್ಷ ‘ಛಾವಾ’ ಮತ್ತು ‘ಸೈಯಾರಾ’ ನಂತರ 500 ಕೋಟಿ ಕ್ಲಬ್ ಸೇರಿದ ಮೂರನೇ ಭಾರತೀಯ ಚಿತ್ರವಾಗಿದೆ.
ಕೂಲಿ ಸಿನಿಮಾ ಬಜೆಟ್ 400 ಕೋಟಿ ಅಂತ ಹೇಳಲಾಗುತ್ತಿದೆ. ರಜಿನಿಕಾಂತ್, ಆಮೀರ್ ಖಾನ್, ನಾಗಾರ್ಜುನ, ಉಪೇಂದ್ರ, ರಚಿತಾ ರಾಮ್, ಸತ್ಯಾ ರಾಜ್, ಸೌಹಿನ್ ಸಾಬೀರ್, ಶೃತಿ ಹಾಸನ್ ಹೀಗೆ ದೊಡ್ಡ ತಾರಬಳಗವೇ ಇರೋ ಕೂಲಿ ಸಿನಿಮಾಗೆ ಮೇಕಿಂಗ್ ಗೆ ಖರ್ಚಾಗಿದ್ಕಿಂತ ಸ್ಟಾರ್ ಕಾಸ್ಟ್ ಗೆ ಹಾಕಿರೋ ದುಡ್ಡೇ ದೊಡ್ಡ ಮಟ್ಟದಲ್ಲಿದೆ. ಹೀಗಾಗಿ 400 ಕೋಟಿ ಬಜೆಟ್ ಆಗಿದೆ.