newsics.com
ಕನ್ನಡ ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೊಡಗು ಮೂಲದ ರೋಷನ್ ಎಂಬುವರನ್ನ ಅನುಶ್ರೀ ಮದುವೆಯಾಗಿದ್ದಾರೆ. ನಾದಬ್ರಹ್ಮ ಹಂಸಲೇಖ, ಶರಣ್, ಸೋನಲ್ ಮಂಥೆರೋ, ವಿಜಯ್ ರಾಘವೇಂದ್ರ ಮುಂತಾದರು ಅನುಶ್ರೀ – ರೋಷನ್ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದರು.
ಅನುಶ್ರೀ ಅವರು ನಟ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ಅಂತ. ಅನುಶ್ರೀ ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅವರನ್ನು ನೆನೆಯುತ್ತಾ ಇರುತ್ತಾರೆ.ಇದೀಗ ಮದುವೆ ಸಮಾರಂಭದಲ್ಲೂ ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಮಂಟಪದಲ್ಲಿ ಹಾಕಿಸಿದ್ದಾರೆ ನಟಿ ಅನುಶ್ರೀ.
ಮಂಟಪದಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರವನ್ನು ಇರಿಸಿ ಆ ಚಿತ್ರವನ್ನು ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದೆ. ಇದೇ ಫೋಟೋ ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. ಜೊತೆಗೆ ನಿರೂಪಕಿ ಅನುಶ್ರಿ ಅವರ ಅಭಿಮಾನಕ್ಕೆ ಫಿದಾ ಆಗುತ್ತಿದ್ದಾರೆ.