newsics.com
ಇತ್ತೀಚಿಗಂತೂ ಜನರು ಗೂಗಲ್ ಮ್ಯಾಪ್ ಗೆ ದಾಸರಾಗಿದ್ದಾರೆ. ಗೂಗಲ್ ಮ್ಯಾಪ್ ನಂಬಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸುತ್ತಾರೆ. ಹೀಗಿರುವಾಗ ಗೂಗಲ್ ಎಲ್ಲಾ ಸಮಯದಲ್ಲೂ ಸರಿಯಾಗಿ ಕೆಲಸ ಮಾಡುತ್ತೆ ಎಂದು ಹೇಳೋಕೆ ಸಾಧ್ಯ ಕೂಡ ಇಲ್ಲ. ಯಾಕಂದರೆ ಇಲ್ಲೊಬ್ಬರು ಗೂಗಲ್ ಮ್ಯಾಪ್ ನಂಬಿ ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ರಾಜಸ್ಥಾನದ ಚಿತ್ತೋರ್ ಗಢದಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ನಂಬಿ ಸೇತುವೆ ಮೇಲೆ ವಾಹನ ಚಲಾಯಿಸಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ., ವಾಹನ ಚಾಲಕ ಗೂಗಲ್ ಮ್ಯಾಪ್ ನಂಬಿ ವಾಹನವನ್ನು ಸೇತುವೆಯ ಮೇಲೆ ಇಳಿಸಿದ್ದು, ಇದರ ಪರಿಣಾಮವಾಗಿ ಕುಟುಂಬದ ನಾಲ್ವರು ಸಾವನ್ನಪ್ಪಿದರೆ, ಅದೃಷ್ಟವಶಾತ್ ಐವರು ಪ್ರಾಣಪಾಯದಿಂದ ಪಾರಾಗಿದ್ದಾರೆ
ಕುಟುಂಬವೊಂದು ಭಿಲ್ವಾರದಿಂದ ಧಾರ್ಮಿಕ ಸ್ಥಳಕ್ಕೆ ತೆರಳಿ ಮನೆಗೆ ವಾಪಾಸ್ ಬರುತ್ತಿರುವಾಗ ಚಾಲಕ ಗೂಗಲ್ ಮ್ಯಾಪ್ ತೋರಿದ ಮಾರ್ಗವನ್ನೇ ಅನುಸರಿಸಿದ್ದು, ಈ ವೇಳೆಯಲ್ಲಿ ಮ್ಯಾಪ್ ನಂಬಿಕೊಂಡು ನಿಷೇಧಿತ ಸೇತುವೆ ಮೇಲೆ ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಹೌದು, ವಾಹನವು ಸೋಮಿ- ಉಪ್ರೇಡಾ ಸೇತುವೆಯ ಮೇಲೆ ವ್ಯಾನ್ ಸಿಲುಕಿಕೊಂಡಿದ್ದು ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿಸಿದರೆ, ಐವರು ವಾಹನದ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದಾರೆ.