newsics.com
ತರುಣ್ ಸುಧೀರ್ ಮತ್ತು ಸೋನಾಲ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಚಾರವನ್ನ ಬ್ಯೂಟಿಫುಲ್ ಆಗಿರೋ ವಿಡಿಯೋ ಮೂಲಕ ತಿಳಿಸುತ್ತಿದ್ದಾರೆ. ತರುಣ್ ಮತ್ತು ಸೋನಾಲ್ ಇಬ್ಬರು ಸಿನಿಮಾ ಇಂಡಸ್ಟ್ರೀಯವರೇ ಆಗಿರೋದ್ರಿಂದ ತಮ್ಮ ಪ್ರೀವೆಡ್ಡಿಂಗ್ ವಿಡಿಯೋವನ್ನ ಥಿಯೇಟರ್ ನಲ್ಲಿಯೇ ಶೂಟ್ ಮಾಡಿದ್ದಾರೆ.
ನವರಂಗ್ ಥಿಯೇಟರ್ ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಾಲ್ ವಿಡಿಯೋ ಮೂಡಿ ಬಂದಿದೆ. ಸಿನಿಮಾಟೋಗ್ರಾಫರ್ ಎ ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್ ನಲ್ಲಿ ವಿವಾಹ ಜರುಗಲಿದೆ.
ಇನ್ನು ಪ್ರೀವೆಡ್ಡಿಂಗ್ ಶೂಟ್ ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದು ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಾಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಗಳಾಗಿ ಜೀವನ ಶುರು ಮಾಡಲಿದ್ದಾರೆ. ಸೋನಲ್ ನನ್ನ ಜೀವನದ ಹೀರೋಯಿನ್ ಅನ್ನೋದನ್ನ ಸ್ವತಃ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರವನ್ನೂ ಅಧಿಕೃತವಾಗಿಯೇ ತಿಳಿಸಿದ್ದಾರೆ.