newsics.com
ಕೊಡಗು ಜಿಲ್ಲೆಯ ಹೆಸರನ್ನು ಹಾಳು ಮಾಡುವ ರೀತಿಯ ರೀಲ್ಸ್ ವೀಡಿಯೋವೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೊಡಗಿನಲ್ಲಿ ಡೇಟಿಂಗ್ಗಾಗಿ ಹುಡುಗಿಯರು, ಆಂಟಿಯರು ಸಿಗುತ್ತಾರೆ ಎಂದು ಹೇಳುವ ಈ ವೀಡಿಯೋಗೆ ಈಗ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೋಟ್ಯ 2026 ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಈ ರೀಲ್ಸ್ ಶೇರ್ ಮಾಡಲಾಗಿದೆ. ವೀಡಿಯೋದಲ್ಲಿ ಕೊಡಗು ಜಿಲ್ಲೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಿ, ಡೇಟಿಂಗ್ಗಾಗಿ ಸುಲಭವಾಗಿ ಹುಡುಗಿಯರು ಸಿಗುತ್ತಾರೆ ಎಂಬ ಸಂದೇಶ ಹರಡಲಾಗಿದೆ. ಅಲ್ಲದೆ, ಯಾವುದೇ ಭಯವಿಲ್ಲ, ಎಲ್ಲಾ ಸುರಕ್ಷಿತ ಎಂದೂ ವಾಯ್ಸ್ ಓವರ್ ಸೇರಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.
ಈ ರೀಲ್ಸ್ನಲ್ಲಿ ರಾಜತರಂಗಿಣಿ ಎಂಬ ಹೆಸರಿನಲ್ಲಿ ನೊಂದಾಯಿತ ಸಿಮ್ ಕಾರ್ಡ್ನ ವಾಟ್ಸಾಪ್ ನಂಬರನ್ನೂ ನೀಡಲಾಗಿದೆ.
ಮೂಲತಃ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಆದ ಈ ವೀಡಿಯೋವನ್ನು ನಂತರ ಶೇರ್ಚಾಟ್ ಮೂಲಕ ಹಂಚಲಾಗಿದ್ದು, ಇನ್ನಷ್ಟು ಜನರಿಗೆ ತಲುಪುವಂತೆ ಮಾಡಲಾಗಿದೆ.
ಕೊಡಗಿನ ಬಗ್ಗೆ ಅಪಪ್ರಚಾರ ಮಾಡಿರುವ ಇಂತಹ ಸಾಮಾಜಿಕ ಜಾಲತಾಣ ಖಾತೆಗಳನ್ನು ತಕ್ಷಣವೇ ಪೊಲೀಸರು ಪತ್ತೆಹಚ್ಚಿ, ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗಂಡನ ಜತೆ 15 ದಿನ, ಪ್ರಿಯಕರನ ಜತೆ 15 ದಿನ ಸಂಸಾರ ನಡೆಸಲು ಮಹಿಳೆ ನಿರ್ಧಾರ! ಪಂಚಾಯಿತಿಯಲ್ಲೇ ಘೋಷಣೆ