newsics.com
ಬೆಂಗಳೂರು: ಪ್ರಧಾನಿ ಮೋದಿ ಭಾನುವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಬಳಿಕ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದರು. ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಪ್ರಧಾನಿ ಮೋದಿಯವರ ಜತೆಗೇ ಇದ್ದರು.
ಐಐಐಟಿ ಆಡಿಟೋರಿಯಂನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಇಬ್ಬರೂ ಪ್ರತ್ಯೇಕವಾಗಿ ಪ್ರಧಾನಿ ಮೋದಿ ಅವರಿಗೆ ನೆನಪಿನ ಕಾಣಿಕೆಯನ್ನು ಕೊಟ್ಟರು. ವೇದಿಕೆ ಬಂದ ನಂತರ ಮೊದಲು ಸಿಎಂ ಸಿದ್ದರಾಮಯ್ಯನವರು ಒಂದು ಗಣಪತಿ ಪ್ರತಿಮೆಯನ್ನು ಮೋದಿಯವರಿಗೆ ನೀಡಿ ಕೈಕುಲುಕಿ, ಸ್ವಾಗತ ಕೋರಿದರು. ಅದಾದ ಮೇಲೆ ಡಿ.ಕೆ.ಶಿವಕುಮಾರ್ ಅವರು ಮತ್ತೊಂದು ಬೆಳ್ಳಿ ಲೇಪನವಿರುವ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟರು. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟಿದ್ದು ವಿಶೇಷ.
ಮೆಟ್ರೋ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿಯವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿ ವಿಷಯಗಳನ್ನೂ ವಿವರಿಸುತ್ತಿದ್ದರು. ಮೆಟ್ರೋ ಉದ್ಘಾಟನೆ ಮಾಡುವಾಗ, ಮೆಟ್ರೋ ರೈಲಲ್ಲಿ ಪ್ರಯಾಣ ಮಾಡುವಾಗೆಲ್ಲ ಅವರು ಪ್ರಧಾನಿ ಜತೆಗೇ ಇದ್ದರು. ಮೆಟ್ರೋ ರೈಲಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಕುಳಿತು ಪ್ರಯಾಣ ಮಾಡಿದರೆ, ಬಿಜೆಪಿ ಸಂಸದರೆಲ್ಲ ಎದುರಿನ ಸೀಟ್‌ನಲ್ಲಿ ಕೈಕಟ್ಟಿಕೊಂಡು ಕುಳಿತಿದ್ದರು. ಮೆಟ್ರೋ ರೈಲಲ್ಲಿ ಹೋಗುವಾಗ ಪ್ರಧಾನಿ ಮೋದಿ ಏನೋ ಜೋಕ್ ಮಾಡಿದ್ದಕ್ಕೆ, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಜೋರಾಗಿ ನಕ್ಕರು..
ಐಐಐಟಿ ಆಡಿಟೋರಿಯಂನಲ್ಲಿ ಪ್ರಧಾನಿ ಮೋದಿಯವರ ಪಕ್ಕ ಸಿಎಂ ಸಿದ್ದರಾಮಯ್ಯ ಕುಳಿತಿದ್ದರು. ಆದರೆ ಸಿದ್ದರಾಮಯ್ಯನವರು ಭಾಷಣಕ್ಕೆಂದು ಎದ್ದು ಹೋಗುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಅವರು ಬಂದು ಮೋದಿ ಪಕ್ಕ ಕುಳಿತರು. ಅತ್ತ ಸಿಎಂ ಮಾತಾಡುತ್ತಿದ್ದರೆ, ಇತ್ತ ಡಿ.ಕೆ.ಶಿವಕುಮಾರ್ ಅವರು ಮೋದಿಯವರ ಜತೆ ಬೇರೇನೋ ಡೀಪ್ ಡಿಸ್ಕಸ್ ಮಾಡುತ್ತಿದ್ದರು. ಮೋದಿಯವರು ಕೂಡ ಅದಕ್ಕೆ ಸ್ಪಂದಿಸುತ್ತಿದ್ದರು.
ಬೆಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಡಿ.ಕೆ.ಶಿವಕುಮಾರ್ ಅವರು ಮನವಿ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿರುತ್ತಾರೆ. ಆದರೆ ಮೋದಿ ಕರ್ನಾಟಕಕ್ಕೆ ಬಂದಾಗ ಅಥವಾ ಸಿದ್ದರಾಮಯ್ಯ ದೆಹಲಿಗೆ ಹೋಗಿ ಇಬ್ಬರೂ ಭೇಟಿಯಾದಾಗ ಇವರಿಬ್ಬರ ಮಧ್ಯೆ ಒಂದು ಆತ್ಮೀಯತೆ ಕಾಣುತ್ತದೆ ಎಂಬುದು ಹಲವರ ಅಭಿಪ್ರಾಯ. ಇನ್ನು ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಪ್ರಧಾನಿ ಮೋದಿಯವರನ್ನು ಟೀಕಿಸುವುದು, ಬೈಯುವುದು ವಿರಳ. ಬಿಜೆಪಿ ವಿರುದ್ಧವಷ್ಟೇ ಕಿಡಿಕಾರುತ್ತಾರೆ.
Waterlogging at Yallammadevi temple ಧಾರಾಕಾರ ಮಳೆ: ಯಲ್ಲಮ್ಮದೇವಿ ದೇಗುಲಕ್ಕೆ ಜಲದಿಗ್ಬಂಧನ
Modi inaugurates Yellow Metro ಹಳದಿ ಮೆಟ್ರೋಗೆ ಮೋದಿ ಚಾಲನೆ: ನಾಳೆಯಿಂದ ಸಂಚಾರ ಆರಂಭ