newsics.com
ಬೆಂಗಳೂರು: ನಮ್ಮದು ನೇಮ್ ಚೇಂಜಿಂಗ್ ಸರ್ಕಾರ, ಗೇಮ್ ಚೇಂಜಿಂಗ್ ಏನೂ ಇಲ್ಲ. ಆದರೆ, ಯಾರ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೂ ಬಿಜೆಪಿಯವರು ಅದರ ಕ್ರೆಡಿಟ್ ಪಡೆಯಲು ಮುಂದಾಗುತ್ತಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಗುತ್ತಿಗೆದಾರರೊಬ್ಬರ ಸಾವಿನ ಬಗ್ಗೆ ಮಾತನಾಡಿದ ಖರ್ಗೆ, ಆ ಪ್ರಕರಣದಲ್ಲಿ ನನ್ನ ಹೆಸರು ಇರದಿದ್ದರೂ ನನ್ನನ್ನು ಅಪರಾಧಿಯಂತೆ ಬಿಜೆಪಿಯವರು ಬಿಂಬಿಸಿದರು. ಆರ್. ಅಶೋಕ್, ಚಲವಾದಿ ನಾರಾಯಣ ಸ್ವಾಮಿ ಮತ್ತು ವಿಜಯೇಂದ್ರ ಅವರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯನ್ನು ‘ರಿಪಬ್ಲಿಕ್ ಆಫ್ ಕಲಬುರಗಿ’ ಎಂದು ಟೀಕಿಸಿದ್ದರು. ಅವರು ಅಧಿಕಾರದಲ್ಲಿದ್ದಾಗ ಕಲಬುರಗಿಯ ರೈತರಿಗಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಆದರೆ ವಿಪಕ್ಷದಲ್ಲಿದ್ದಾಗ ಬಂದು ಟೀಕೆ ಮಾಡಿದರು ಎಂದು ದೂರಿದರು.
ಮೃತ ಬಾಬು ಅವರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಖರ್ಗೆ, ಈ ಘಟನೆಯ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಯೋಜನೆಯ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕೇವಲ 37% ಧನಸಹಾಯ ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನೂ ನಾವೇ ಮಾಡಬೇಕು, ಹಾಗಾದರೆ ಬಿಜೆಪಿಯ ಕೊಡುಗೆ ಏನು? ಎಂದು ಪ್ರಶ್ನಿಸಿದ ಖರ್ಗೆ, ಈ ಯೋಜನೆಯ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕೆಂದು ಬಿಜೆಪಿಯವರು ನೋಡುತ್ತಿದ್ದಾರೆ ಅಲ್ಲದೆ, ಜಲಜೀವನ ಮಿಷನ್‌ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಬಳಕೆಗೆ ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಿಟ್ಟಿ ಪ್ರಚಾರಕ್ಕೆ ಬಿಜೆಪಿಯವರನ್ನು ನೋಡಿ ಕಲಿಯಬೇಕು ಎಂದು ವ್ಯಂಗ್ಯವಾಡಿದರು.
HIV Infected Girl: ಡ್ರಗ್ಸ್ ಚಟಕ್ಕೆ ಬಿದ್ದ ಬಾಲಕಿ ಸಿಕ್ಕ ಸಿಕ್ಕವ್ರ ಜೊತೆ ಸೆಕ್ಸ್! ಮುಂದೆನಾಯ್ತು?
Viral Story: ಪ್ರೀತಿಗೆ ವಯಸ್ಸಿನ ಹಂಗಿಲ್ಲ ನೋಡಿ…. 82 ವರ್ಷದ ಅಜ್ಜಿಯನ್ನು ಮದುವೆಯಾದ 36ರ ಯುವಕ!
Gold Price: ವರ್ಷಕ್ಕೆ 5000 ಕೆಜಿ ಚಿನ್ನ ಉತ್ಪಾದನೆ!; ಗೋಲ್ಡ್ ತಯಾರಿಕೆ ಹೇಗೆ?
Dhanush: ಈ ಎಲ್ಲಾ ನಟಿಯರೊಂದಿಗೆ ಧನುಷ್‌ಗೆ ಲವ್ ಕೆಮಿಸ್ಟ್ರಿ ಇತ್ತಂತೆ!