newsics.com
ನಮ್ಮ ದೇಹವನ್ನು ಆರೋಗ್ಯವಾಗಿಡಲು ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಇತ್ತೀಚೆಗೆ ಆಹಾರ, ಮಾನಸಿಕ ಒತ್ತಡ, ಖಿನ್ನತೆ, ಇನ್ನಿತರ ತೊಂದರೆಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. . ಅದರಲ್ಲೂ ಡ್ರ್ಯಾಗಪ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳು ದೊರೆಯುತ್ತವೆ.
ಡ್ರ್ಯಾಗಪ್ ಫ್ರೂಟ್ ಗುಲಾಬಿ ಬಣ್ಣದ್ದಾಗಿದ್ದು, ಒಳಗೆ ಬಿಳಿ ತಿರುಳು ಇರುತ್ತದೆ. ಅಲ್ಲದೆ ಈ ಹಣ್ಣಿನಲ್ಲಿ ಕಪ್ಪು ಬೀಜಗಳಿವೆ. ಈ ಹಣ್ಣು ಸೇವಿಸುವುದರಿಂದ ಅನೇಕ ಕಾಯಿಲೆಗಳಿಂದ ದೂರ ಇರಬಹುದು.ಮಳೆಗಾಲದಲ್ಲಿ ಈ ಹಣ್ಣನ್ನು ಸೇವಿಸು ವುದರಿಂದ ಹಲವಾರು ಪ್ರಯೋಜನಗಳಿವೆ . ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ, ಸಲಾಡ್‌ಗಳಿಗೆ ಸೇರಿಸಿ ಅಥವಾ ಸ್ಮೂಥಿಗಳಾಗಿ ಮಿಶ್ರಣ ಮಾಡಿ ಸೇವಿಸಬಹುದು.
ಮಾನ್ಸೂನ್ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾದ ಸೋಂಕನ್ನು ಎದುರಿಸಲು ಸಹಾಯ ಮಾಡುವ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಡ್ರ್ಯಾಗನ್ ಹಣ್ಣು ಹೊಂದಿದೆ.
ಮಳೆಗಾಲದಲ್ಲಿ ವಾತಾವರಣ ತೇವ ಇರುವುದರಿಂದ ಇದು ಕೆಲವೊಮ್ಮೆ ಜೀರ್ಣಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ತೊಂದರೆಯಾಗುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ನಾರಿನ ಅಂಶ ಜಾಸ್ತಿ ಇರುತ್ತದೆ. ಇದು ಜೀರ್ಣಕ್ರಿಯೆಯನ್ನ ಸರಾಗಗೊಳಿಸಿ, ಮಲಬದ್ಧತೆಯನ್ನ ಕಡಿಮೆ ಮಾಡುತ್ತದೆ. ಹೀಗಾಗಿ ಮಳೆಗಾಲದಲ್ಲಿ ಈ ಹಣ್ಣನ್ನ ಆಗಾಗ ತಿನ್ನುತ್ತಿರಿ.
ಡ್ರ್ಯಾಗನ್ ಹಣ್ಣು ರೋಗನಿರೋಧಕ ಶಕ್ತಿಗೆ ಉತ್ತಮವಾಗಿದೆ, ಏಕೆಂದರೆ ಇದು ಹೆಚ್ಚಿನ ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಮಾನ್ಸೂನ್-ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ.
ಡ್ರ್ಯಾಗನ್ ಹಣ್ಣುಗಳಲ್ಲಿ ಕಡಿಮೆ ಪ್ರಮಾಣದ ಗ್ಲುಕೋಸ್ ಇರುತ್ತದೆ ಮತ್ತು ಹೆಚ್ಚಿನ ನಾರಿನ ಅಂಶ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನ ಸಮತೋಲನ ಮಾಡುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಆಗುವ ಬಳಲಿಕೆಯಿಂದಲೂ ಮುಕ್ತಿ ಪಡೆಯಬಹುದು..