newsics.com
ರಾಜ್ಯದಲ್ಲಿ ಆನ್ ಲೈನ್ ವಂಚನೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಬೇರೆ ರಾಜ್ಯಗಳಲ್ಲಿ ಕುಳಿತುಕೊಂಡು ಅಮಾಯಕರನ್ನು ಫೋನ್ ಕರೆ ಮೂಲಕ ವಂಚನೆ ಮಾಡುವ ಜಾಲ ಸಕ್ರಿಯವಾಗಿದೆ. ಇದನ್ನು ನಿಯಂತ್ರಣ ಮಾಡಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಆನ್‌ಲೈನ್ ಹಾಗೂ ಸೈಬರ್ ವಂಚನೆಯಿಂದ ಅಮಾಯಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬ ಗರ್ಲ್ ಪಡೆಯಲು ಹೋಗಿ 1.4 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಕಾಲ್ ಗರ್ಲ್ ಸೇವೆ ಬೇಕೆಂದು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದ್ದರು. ಆಗ ಅವರಿಗೆ ಇಶಾನಿ ರೆಡ್ಡಿ ಎಂದು ಗುರುತಿಸಿಕೊಂಡಿದ್ದವಳ ಜತೆ ಸಂವಹನ ಏರ್ಪಟ್ಟಿತ್ತು.
ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡ ಇಶಾನಿ, 299 ರೂ. ಪಾವತಿಸುವಂತೆ ಸೂಚಿಸಿದ್ದಳು. ಅದನ್ನು ಪಾವತಿಸಿದ ನಂತರ, ವಿವಿಧ ಸೇವಾ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣವನ್ನು ಟ್ರಾನ್ಸ್ಫರ್ ಮಾಡುವಂತೆ ಪದೇ ಪದೇ ಆಕೆ ಒತ್ತಾಯಿಸಿದ್ದಳು. ಒಟ್ಟಾರೆಯಾಗಿ, 1,49,052 ರೂ.ಗಳನ್ನು ಟೆಕ್ಕಿ ಕಳುಹಿಸಿದ್ದರು.
ಬಳಿಕ, ಮೊತ್ತ ಹೆಚ್ಚಾಗಿದ್ದು, ಸೇವೆ ಬೇಕಾಗಿಲ್ಲ ಎಂದು ಟೆಕ್ಕಿ ಹೇಳಿದ್ದಾರೆ. ಅಲ್ಲದೆ, ಪಾವತಿ ಮಾಡಿದ್ದ ಮೊತ್ತವನ್ನು ರಿಫಂಡ್ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
https://www.newsics.com/2025/08/06/uttarkashi-cloudburst-red-alert-declared-for-these-districts/