Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಬ್ಯೂಟಿ ಪಾರ್ಲರ್ಗೆ ಹೋಗುವವರೇ ಎಚ್ಚರ; ಹೇರ್ಸ್ಟೈಲ್ ವೇಳೆ ಎಡವಟ್ಟಾದರೆ ಭಾರಿ ಅನಾಹುತ
ಆರೋಗ್ಯಪ್ರಮುಖ

ಬ್ಯೂಟಿ ಪಾರ್ಲರ್ಗೆ ಹೋಗುವವರೇ ಎಚ್ಚರ; ಹೇರ್ಸ್ಟೈಲ್ ವೇಳೆ ಎಡವಟ್ಟಾದರೆ ಭಾರಿ ಅನಾಹುತ

Share
2 Min Read
SHARE

newsics.com

ಹೇರ್ ಸ್ಟೈಲ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಲ್ಲಿಯೂ ಈ ಕ್ರೇಜ್ ಹೆಚ್ಚಾಗಿದೆ.

ಅದರಲ್ಲಿಯೂ ಯಾವುದಾದರೂ ಸಿನಿಮಾ ನಟರಂತೆ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಪುರುಷರು ಮುಗಿ ಬೀಳುವುದು ಇದೆ. ಅದರಲ್ಲೂ ಬ್ಯೂಟಿ ವಿಷಯದಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೇಳುವುದೇ ಬೇಡ ಬಿಡಿ. ಇನ್ನು ಬ್ಯೂಟಿ ಪಾರ್ಲರ್ಗಳಲ್ಲಿಯೂ ನೂರೆಂಟು ಬಗೆಗಳ ಸ್ಟೈಲ್ಗಳು ರಾರಾಜಿಸುತ್ತವೆ.

ಅಂದ ಹೆಚ್ಚಿಸಿಕೊಳ್ಳಲು, ಸುಂದರ ಕೇಶ ವಿನ್ಯಾಸದ ಆಸೆಯಿಂದ ಬ್ಯೂಟಿ ಪಾರ್ಲರ್ಗೆ ಹೋಗುವುದು ತಪ್ಪೇನಲ್ಲ. ಆದರೆ ಕೇಶ ವಿನ್ಯಾಸದ ಸಮಯದಲ್ಲಿ ಮಾಡುವ ಸ್ವಲ್ಪ ಎಡವಟ್ಟು, ಬ್ರೈನ್ ಸ್ಟ್ರೋಕ್ಗೆ ಕಾರಣವಾಗಬಹುದು ಎನ್ನುವ ಎಚ್ಚರಿಕೆಯನ್ನು ಸಂಶೋಧಕರು ನೀಡಿದ್ದಾರೆ.
ಇದಕ್ಕೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌ಗೆ ಎನ್ನುತ್ತಾರೆ. ಇದನ್ನು salon stroke or beauty treatment stroke ಎಂದೂ ಕರೆಯುತ್ತಾರೆ. ಇಂಥ ಸಮಸ್ಯೆಗೆ ವಿರಳಾತಿವಿರಳ ಜನರು ಒಳಗಾಗಿದ್ದರೂ, ಎಚ್ಚರಿಕೆಯಿಂದ ಇರುವುದು ಒಳಿತು ಎನ್ನುವುದು ಅವರ ಮಾತು.

ಇದು ಹೆಚ್ಚಾಗಿ ಸಮಸ್ಯೆ ಉಂಟು ಮಾಡುವುದು ಕೇಶ ವಿನ್ಯಾಸಕ್ಕೆಂದು ಕೂದಲು ತೊಳೆಯುವಾಗ ಮಾಡಿಕೊಳ್ಳುವ ಎಡವಟ್ಟಿನಿಂದಾಗಿ. ಕೂದಲು ತೊಳೆಯುವಾಗ ಕುತ್ತಿಗೆಯನ್ನು ಸಿಂಕ್ನಲ್ಲಿ ಇರಿಸಲಾಗುತ್ತದೆ. ಈ ಸಮಯದಲ್ಲಿ ಕುತ್ತಿಗೆಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳದೇ ನರಕ್ಕೆ ಪೆಟ್ಟಾಗುವಂತೆ ಇಟ್ಟುಕೊಳ್ಳುವುದರಿಂದ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ.

ಇದು ಪಾರ್ಶ್ವವಾಯು ಲಕ್ಷಣಗಳನ್ನು ಅನುಕರಿಸುವ ಅಪರೂಪದ ಸ್ಥಿತಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ‘ಕೇಶ ವಿನ್ಯಾಸಕರ ಬಳಿಗೆ ಹೋಗಿ ತಲೆಗೆ ಮಸಾಜ್ ಮಾಡಿಸಿಕೊಳ್ಳುವುದು, ಕೂದಲನ್ನು ತೊಳೆದುಕೊಳ್ಳುವುದು ತುಂಬಾ ಸುಂದರ ಅನುಭೂತಿಯನ್ನು ನೀಡುತ್ತದೆ. ಟೆನ್ಷನ್ ಆಗಿರುವ ತಲೆಯನ್ನು ಇದು ರಿಲ್ಯಾಕ್ಸ್ ಮಾಡುತ್ತದೆ, ಇಡೀ ಮೈಗೆ ವಿಶ್ರಾಂತಿ ಸಿಕ್ಕ ಅನುಭವವಾಗುತ್ತದೆ.
ಆದರೆ ಸ್ವಲ್ಪ ಯಾಮಾರಿದ್ರೆ ಇದೇ ಜೀವಕ್ಕೆ ಅಪಾಯ ಆಗುತ್ತದೆ’ ಎನ್ನುತ್ತಾರೆ ಅವರು. ಆದ್ದರಿಂದ ಕೂದಲನ್ನು ತೊಳೆಯುವ ಸಂದರ್ಭದಲ್ಲಿ ಸ್ವಲ್ಪವೇ ನೋವಾದರೂ, ಅಸಹಜ ಎನ್ನಿಸಿದರೂ ಕೂಡಲೇ ಕುತ್ತಿಗೆಯನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದು ಅವರ ಮಾತು.

ಮೊದಲಿಗೆ ಕೇಶ ವಿನ್ಯಾಸಕರು ಬಳಸುವ ಶಾಂಪೂಗಳನ್ನು ಗಮನಿಸಬೇಕು. ಇದು ಕೂಡ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಇದಕ್ಕಿಂತ ಹೆಚ್ಚಾಗಿ ಪಾರ್ಶ್ವವಾಯುವಿಗೆ ಒಳಗಾಗಬಹುದು. ಪಾರ್ಶ್ವವಾಯು ಎಂದರೆ ಮೆದುಳಿಗೆ ರಕ್ತದ ಹರಿವು ಹಠಾತ್ ಕಡಿಮೆಯಾಗುವುದರಿಂದ ಉಂಟಾಗುವ ಮಿದುಳಿನ ದಾಳಿ ಎಂದಿದ್ದಾರೆ.

ಅನೇಕ ಸಲೂನ್‌ಗಳಲ್ಲಿ ಕೂದಲು ತೊಳೆಯಲು ಬಳಸುವ ಬ್ಯಾಕ್‌ವಾಶ್ ಬೇಸಿನ್‌ಗಳಲ್ಲಿ ಕುತ್ತಿಗೆಯನ್ನು ಇರಿಸಿದಾಗ, ನೀವೇನಾದರೂ ವಿಚಿತ್ರ ಕೋನದಲ್ಲಿ ಕುಳಿತುಕೊಂಡರೆ ಕುತ್ತಿಗೆಗೆ ನೋವು, ಗಾಯ ಆಗಬಹುದು. ಇದು ಮಾರಣಾಂತಿಕ ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಕುತ್ತಿಗೆಯ ಅಸಾಮಾನ್ಯ ಸ್ಥಾನ, ಕುತ್ತಿಗೆಯ ತಿರುಗುವಿಕೆ ಅಥವಾ ಹಠಾತ್ ಜರ್ಕಿಂಗ್ ಚಲನೆಗಳು ಮೆದುಳಿನ ಹಿಂಭಾಗ ಮತ್ತು ಕೆಳಭಾಗಕ್ಕೆ ರಕ್ತವನ್ನು ಪೂರೈಸುವ ಪ್ರಮುಖ ರಕ್ತನಾಳಗಳಲ್ಲಿ ಒಂದನ್ನು ತಳ್ಳಬಹುದು.
ಇದು ಸಮಸ್ಯೆಯನ್ನು ತಂದೊಡ್ಡುತ್ತದೆ. ಆ ಸಮಯದಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಅಡಚಣೆ ಉಂಟಾಗುತ್ತದೆ ಅಥವಾ ಮೆದುಳಿನಲ್ಲಿರುವ ಪ್ರಮುಖ ರಕ್ತನಾಳವು ಸಿಡಿಯುವುದರಿಂದ – ಆಮ್ಲಜನಕ, ಗ್ಲೂಕೋಸ್ ಮತ್ತು ಪೋಷಕಾಂಶಗಳ ಇಳಿಕೆಗೆ ಕಾರಣವಾಗುತ್ತದೆ, ಇದು ಮೆದುಳಿನ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಕೊಲ್ಲುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುತ್ತೀರಾ?;ಆರೋಗ್ಯ ತಜ್ಞರು ಹೇಳುವುದೇನು?

TAGGED:be careful! If you make a mistakeit can lead to a major disaster...Those who go to the beauty parlor for a hairstyle
Share This Article
Facebook Twitter Copy Link Print
Previous Article ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುತ್ತೀರಾ?;ಆರೋಗ್ಯ ತಜ್ಞರು ಹೇಳುವುದೇನು?
Next Article ನಟ ಕಿಚ್ಚ ಸುದೀಪ್‌ ಹೊಸ ಹೇರ್‌ ಸ್ಟೈಲ್‌ ವೈರಲ್‌

Popular Posts

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

Rain info ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಗಳಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read

You Might Also Like

ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read
ಪ್ರಮುಖCrimeದೇಶ

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read
ಪ್ರಮುಖCrimeವಿದೇಶ

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read
ಪ್ರಮುಖಕರ್ನಾಟಕ

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?