Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಶಾಲೆಯಲ್ಲಿ ದ್ವೇಷ ಮಾಡ್ತಿದ್ದವನೇ ಗಂಡನಾಗಿ ಬಂದ
ವೈರಲ್

ಶಾಲೆಯಲ್ಲಿ ದ್ವೇಷ ಮಾಡ್ತಿದ್ದವನೇ ಗಂಡನಾಗಿ ಬಂದ

Share
2 Min Read
SHARE

newsics.com

ಕಾಲಕ್ಕೆ ತಕ್ಕಂತೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತು, ವಿಚಾರ ಎಲ್ಲವೂ ಬದಲಾಗುತ್ತಿರುತ್ತದೆ. ಮಗುವಾಗಿ ಹುಟ್ಟಿದ ನಾವೂ ಸಹ ಬಾಲ್ಯಾವಸ್ಥೆ, ಪ್ರೌಢವಸ್ಥೆ ಹೀಗೆ ಎಲ್ಲಾ ಕಾಲ ಘಟ್ಟಗಳನ್ನು ದಾಟಿ ಮದುವೆಯೆಂಬ ಬಂಧನದಲ್ಲಿ ಸಂಗಾತಿಯ ಜೊತೆ ಬೆಸೆದುಕೊಂಡು ಮುಂದಿನ ಜೀವನದ ಕಡೆಗೆ ಮುಖ ಮಾಡುತ್ತೇವೆ. ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಅನಿರೀಕ್ಷಿತವಾದ ಬಹು ದೊಡ್ಡ ಬದಲಾವಣೆ.ಮದ್ವೆ ಎಂಬುದು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತೆ ಅನ್ನೋದು ಅನೇಕರ ಮಾತು. ಮದುವೆ ಆಗುವವರಿಗೂ ತಮ್ಮಿಷ್ಟದ ಹಾಗೆ ತಾವು ಬದುಕಿ ಬಾಳುತ್ತಿದ್ದ ಯಾರೇ ಆದರೂ, ಸಂಗಾತಿ ಬಂದ ನಂತರ ಅವರ ಇಷ್ಟದ ಕಡೆಗೂ ಆಸಕ್ತಿ ತೋರ ಬೇಕಾಗುತ್ತದೆ.

ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬರು ತಮ್ಮನ್ನು ಶಾಲೆಯಲ್ಲಿ ಬಹಳ ದ್ವೇಷ ಮಾಡುತ್ತಿದ್ದ ಹುಡುಗನನ್ನೇ ಮದುವೆಯಾಗಿದ್ದು, ಅವರು ಶಾಲಾ ದಿನಗಳಿಂದ ಮದುವೆಯವರೆಗಿನ ತಮ್ಮ ಪಯಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್‌ ಆಗಿದೆ.

ಅಂಚಲ್ ರಾವತ್ ಎಂಬುವರು ತಮ್ಮ ಶಾಲಾ ದಿನಗಳ ಶತ್ರುವೇ ತಮ್ಮ ಜೀವನ ಸಂಗಾತಿಯಾಗಿ ಬಂದ ಬಗ್ಗೆ ಸ್ನೇಹಿತರ ದಿನದಂದು ಬರೆದುಕೊಂಡಿದ್ದಾರೆ. ನಾನು ಹುಡುಗರೊಂದಿಗೆ ಸ್ನೇಹ ಬೆಳೆಸಲು ಇಷ್ಟಪಡದ ಹುಡುಗಿ. ಹೀಗಿರುವಾಗ ಶಾಲಾ ದಿನಗಳಲ್ಲಿ ಒಬ್ಬ ದಡ್ಡನಂತಿದ್ದ, ನಾಚಿಕೆ ಸ್ವಭಾವದ ವ್ಯಕ್ತಿ ನನ್ನೊಂದಿಗೆ ಊಟವನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದ, ಆದರೆ ನಾನು ಆಕಸ್ಮಿಕವಾಗಿ ಅವನ ಪೋಕ್ಮನ್ ಟಿಫಿನ್ ಬಾಕ್ಸ್ ಅನ್ನು ಮುರಿದು ಬಿಟ್ಟೆ . ಆ ದಿನ ನಾನು ಅವನನ್ನು ಬಹುತೇಕ ಅಳುವಂತೆ ಮಾಡಿದೆ ಎಂದೇ ನಾನು ಭಾವಿಸುತ್ತೇನೆ, ಮತ್ತು ಅವನು ಮತ್ತೆಂದಿಗೂ ನನ್ನೊಂದಿಗೆ ಮಾತನಾಡಲಿಲ್ಲ.

ಆದರೆ 15 ವರ್ಷಗಳ ನಂತರ, ಜೀವನ್ ಸಾಥಿಯಲ್ಲಿ ನಾನು ಅದೇ ದಡ್ಡ ವ್ಯಕ್ತಿಯನ್ನು ಕಂಡೆ. ಆತ ನನಗೆ ಮೊದಲ ಬಾರಿಗೆ, ‘ನೀವು ಯಾವಾಗ ನನಗೆ ಹೊಸ ಟಿಫಿನ್ ಬಾಕ್ಸ್ ಖರೀದಿಸಿ ಕೊಡ್ತೀರಾ’ ಎಂದು ಮೆಸೇಜ್ ಮಾಡಿದ್ದ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಅವರು ಹಮಾರಿ ಶಾಲಾ ಸಮಯ ಮೇ ದೋಸ್ತಿ ತೋ ನಹಿ ಹುಯಿ ಪರ್ ಹನ್ ಹಮಾರಿ ಶಾದಿ ಜರುರ್ ಹೋಗಿ . ಸ್ನೇಹ ದಿನದ ಶುಭಾಶಯಗಳು, ಪತಿ ದೇವ್ಎಂದು ಅವರು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಶಾಲಾ ದಿನಗಳಲ್ಲಿ ನಾವು ಸ್ನೇಹಿತರಾಗಿರಲಿಲ್ಲ, ಆದರೆ ನಮ್ಮ ವಿವಾಹವೂ ಖಂಡಿತವಾಗಿ ಆಗಿಯೇ ಹೋಯ್ತು ಸ್ನೇಹಿತರ ದಿನದ ಶುಭಾಶಯಗಳು ಪತಿದೇವ ಎಂದು ಅವರು ಬರೆದಿದ್ದು, ಜೊತೆಗ ತಮ್ಮ ಶಾಲಾದಿನಗಳ ಫೋಟೋದ ಜೊತೆ ತಮ್ಮ ಮದುವೆಯ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ

https://www.newsics.com/2025/08/04/a-friend-used-a-tile-polishing-machine-to-fix-a-crooked-tooth-on-his-friends-side/

TAGGED:#viral #marrige #friend #realtioship #coupl #scholl
Share This Article
Facebook Twitter Copy Link Print
Previous Article Viral ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಿದ ಸ್ನೇಹಿತ – ವೈರಲ್ ವಿಡಿಯೋ ನೋಡಿ
Next Article Tollywood news ತೆಲುಗು ಸಿನಿಮಾಗಳ ಚಿತ್ರೀಕರಣ ದಿಢೀರ್ ಬಂದ್: ಯಾಕೆ? ಏನಾಯ್ತು?

Popular Posts

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

1 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

You Might Also Like

ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ವೈರಲ್

ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Stray dog ​​guards girl ರಸ್ತೆ ಪಕ್ಕ ಮಲಗಿದ್ದ ಬಾಲಕಿಗೆ ಬೀದಿ ನಾಯಿ‌ ಕಾವಲು! ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?