newsics.com
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಲುವೆ ಸುಕೃತಾ ನಾಗ್. ಅಂಜಲಿ ಪಾತ್ರದ ಮೂಲಕನೇ ವೀಕ್ಷಕರು ಇವತ್ತಿಗೂ ಸುಕೃತಾ ಅವ್ರನ್ನ ಗುರುತಿಸೋದು.
ಆದರೆ, ಇದು ಹೆಚ್ಚು ಜನರಿಗೆ ತಿಳಿಯದ ವಿಚಾರ. ಮೆಗಾ ಧಾರಾವಾಹಿ ‘ಕಾದಂಬರಿ’ಯಲ್ಲಿ ಸುಕೃತಾ ನಾಗ್ ಅವರು ಬಾಲ ನಟಿಯಾಗಿ ನಟಿಸಿದ್ದರು. ಇದರೊಂದಿಗೆ ಬರೋಬ್ಬರಿ 25 ಟಿವಿ ಶೋಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ.
ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕನ್ನಿಕ ಪಾತ್ರದಲ್ಲಿ ಅಭಿನಯಿಸ್ತಿದ್ದಾರೆ. ಅಲ್ಲದೇ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಪ್ರವೀಣ್ಗೆ ಮೆಂಟರ್ ಆಗಿದ್ದರು ಸುಕೃತಾ ನಾಗ್. ಇನ್ನೂ, ಮೊನ್ನೆಯಷ್ಟೇ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಮುಕ್ತಾಯ ಕಂಡಿತ್ತು.ಸದ್ಯ ಸುಕೃತಾ ನಾಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಚ್ಚ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶೇರ್ ಮಾಡಿಕೊಂಡ ಫೋಟೋದಲ್ಲಿ ಸುಕೃತಾ ನಾಗ್ ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಅಪ್ಸರೆಯಂತೆ ಮಿಂಚಿದ್ದಾರೆ.ಪ್ರತಿಯೊಂದು ಹೃದಯದಲ್ಲಿಯೂ ಒಬ್ಬ ದೇವತೆ ಇರುತ್ತಾಳೆ ಎಂದು ಬರೆದುಕೊಂಡಿದ್ದಾರೆ.ಸುಕೃತಾ ನಾಗ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
https://www.instagram.com/p/DM2hiX0vyWW/?img_index=1&igsh=d3E3ZG9td3F5NGM2