newsics.com
ಬೆಂಗಳೂರು: ಅತ್ಯಾಚಾರ ಕೇಸ್‌ನಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಕೋರ್ಟ್, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಶಿಕ್ಷೆಯ ಪ್ರಮಾಣ ಕೇಳಿ ಗಳಗಳನೆ ಅತ್ತ ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲೂ ನಿದ್ದೆ ಬರ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲೇ ಪ್ರಜ್ವಲ್ ರೇವಣ್ಣ ಬದುಕಿರುವವರೆಗೂ ಜೀವನ ಕಳೆಯಬೇಕಿದೆ.
ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಇಂದು ಬೆಳಗ್ಗೆ 15528 ಸಂಖ್ಯೆಯ ಸಜಾಬಂಧಿ ನಂಬರ್ ನೀಡಿದ್ದಾರೆ. ಇನ್ನು ರಾತ್ರಿ ವೈದ್ಯರು ಆರೋಗ್ಯ ತಪಾಸಣೆಗೆ ಬಂದಿದ್ದರು, ಆಗ ಪ್ರಜ್ವಲ್, ಕಣ್ಣೀರು ಇಟ್ಟಿದ್ದಾರೆ.
ಪ್ರಜ್ವಲ್ ರೇವಣ್ಣ ನಿನ್ನೆಯಿಂದ ಅಧಿಕೃತವಾಗಿ ಸಜಾಬಂಧಿ ಕೈದಿಯಾಗಿ ಪರಿವರ್ತನೆಗೊಂಡಿದ್ದಾರೆ. ಜೈಲು ಆಧ್ಯಕ್ಷರು ಅವರಿಗೆ ಈ ಸಂಖ್ಯೆ ನೀಡಿದ್ದಾರೆ.ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅತ್ಯಾಚಾರ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, ಇಂದಿನಿಂದ ಅವರ ಸಂಪೂರ್ಣವ ಜೀವನ ಶೈಲಿ ಬದಲಾಗಿದೆ. ಪ್ರಜ್ವಲ್ ಜೈಲು ನಿಯಮ ಪಾಲಿಸಿ ಇಂದಿನಿಂದ ಕಡ್ಡಾಯವಾಗಿ 8 ಗಂಟೆ ಕೆಲಸ ಮಾಡಬೇಕು. ಜೈಲು ಸಿಬ್ಬಂದಿ ಅವರಿಗೆ ಕೈದಿಗಳು ತೊಡುವ ಬಿಳಿ ಬಟ್ಟೆ ಸಹ ನೀಡಿದ್ದಾರೆ.
ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು. ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆಗೆ ಅವಕಾಶ ಇದೆ.
ಜೈಲಿನಲ್ಲಿ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ಜೈಲಿನ ಸಂಬಳ ಪಾವತಿ ಆಗಲಿದೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂಪಾಯಿ ಸಂಬಳ ಸಿಗಲಿದೆ. ಸಾಮಾನ್ಯ ಕೈದಿಯಂತೆ ಪ್ರಜ್ವಲ್ ರೇವಣ್ಣ ಜೀವನ ಸಾಗಿಸಬೇಕಿದೆ.