Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 2030ರ ವೇಳೆಗೆ ಭಾರತದಲ್ಲಿ AI ನಿಂದ 10.35 ಕೋಟಿ ಉದ್ಯೋಗ ಬದಲಾವಣೆ!
ಪ್ರಮುಖವಿದೇಶ

2030ರ ವೇಳೆಗೆ ಭಾರತದಲ್ಲಿ AI ನಿಂದ 10.35 ಕೋಟಿ ಉದ್ಯೋಗ ಬದಲಾವಣೆ!

Share
5 Min Read
SHARE

newsics.com

ನವದೆಹಲಿ: ಭಾರತದಲ್ಲಿ ಎಐ ಬಳಕೆ ತೀವ್ರಗೊಳ್ಳುತ್ತಿದೆ. ಹಲವು ದಿಗ್ಗಜ ಕಂಪನಿಗಳು ಎಐ ಬಳಕೆಯಿಂದ ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಪ್ರಮುಖ ಕಂಪನಿಗಳು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುತ್ತಿದೆ. ಪರಿಣಾಮಾಕಾರಿಯಾಗ ಎಐ ಬಳಕೆ ಭಾರತದಲ್ಲಿ ಉದ್ಯೋಗ ಸ್ವರೂಪ ಬದಲಿಸುತ್ತಿದೆ ಎಂದು ಸರ್ವೀಸ್‌ನೌ ಅಧ್ಯಯನ ವರದಿ ಹೇಳಿದೆ.

2030ರ ವೇಳೆಗೆ ಭಾರತದಲ್ಲಿ ಎಐನಿಂದ ಬರೋಬ್ಬರಿ 10.35 ಕೋಟಿ ಉದ್ಯೋಗ ಬದಲಾಗಲಿದೆ ಎಂದು ವರದಿ ಹೇಳುತ್ತಿದೆ. ಇಷ್ಟೇ ಅಲ್ಲ 30 ಲಕ್ಷ ಹೊಸ ತಂತ್ರಜ್ಞಾನ ಆಧಾರಿತ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸರ್ವೀಸ್‌ನೌ ವರದಿ ಹೇಳಿದೆ.

10.35 ಕೋಟಿ ಉದ್ಯೋಗದ ಮೇಲೆ ಎಐ ಪ್ರಭುತ್ವ
ಸರ್ವೀಸ್‌ನೌ ಹೊಸ ಸಂಶೋಧನಾ ವರದಿಯ ಪ್ರಕಾರ ಭಾರತದ ಉದ್ಯಮಗಳು ಎಐ ಪರಿಪಕ್ವತೆಯಲ್ಲಿ ಎಪಿಎಸಿ ಮಾರುಕಟ್ಟೆಗಳನ್ನು ಹಿಂದಿಕ್ಕಿದೆ. ಸರ್ವೀಸ್‌ನೌ ಸಂಸ್ಥೆಯು ಪಿಯರ್ಸನ್ ಜೊತೆ ಸೇರಿ ನಡೆಸಿರುವ ಎಐ ಸ್ಕಿಲ್ಸ್ ರಿಸರ್ಚ್ ರಿಪೋರ್ಟ್ 2025ರ ಪ್ರಕಾರ, ಏಜೆಂಟಿಕ್ ಎಐ 2030ರ ವೇಳೆಗೆ ಭಾರತದಲ್ಲಿ 10.35 ಕೋಟಿ ಉದ್ಯೋಗಗಳನ್ನು ಬದಲಿಸುವ ಸಾಧ್ಯತೆ ಇದೆ, ಈ ಮೂಲಕ ಭಾರತವು ವಿಶ್ವದ ಅತಿದೊಡ್ಡ ಕಾರ್ಯ ಪಡೆ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದಿದೆ.
ಭವಿಷ್ಯದ ಉದ್ಯೋಗಕ್ಕೆ ಮಹತ್ವದ ಸೂಚನೆ
ಈ ವರದಿಯು ಭವಿಷ್ಯದ ಉದ್ಯೋಗಕ್ಕೆ ಕೌಶಲ್ಯ ಹಾಗೂ ಪೂರಕ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಮಹತ್ವದ ಸೂಚನೆ ನೀಡುತ್ತಿದೆ.

ಭಾರತದ ವಿಶಾಲ ಪ್ರತಿಭಾ ವಲಯವು ಪ್ರಕ್ರಿಯೆ ಆಧರಿತ ಕೆಲಸಗಳಿಂದ ಉದ್ದೇಶ ಪೂರಕ ಆವಿಷ್ಕಾರದ ಕಡೆಗೆ ಬದಲಾವಣೆ ಹೊಂದಲು ಹಾಗೂ ಭವಿಷ್ಯದ ಕೆಲಸಗಳಿಗೆ ಸಿದ್ಧಗೊಳ್ಳಲು ಈಗಿನ ತಲೆಮಾರಿಗೆ ಒಂದು ಮಹತ್ವದ ಸೂಚನೆಯನ್ನು ನೀಡುತ್ತಿದೆ.

ಭಾರತದ ಎಐ ಪಯಣವು ಒಂದು ನಿರ್ಣಾಯಕ ಘಟ್ಟದಲ್ಲಿದೆ. ಏಜೆಂಟಿಕ್ ಎಐ ಶೀಘ್ರದಲ್ಲಿಯೇ ಉದ್ಯೋಗಿಗಳ ವಲಯವನ್ನು ಬದಲಿಸಲಿದ್ದು, ಇದು ಸುಮಾರು 10.35 ಕೋಟಿ ಉದ್ಯೋಗಗಳನ್ನು ಪುನರ್ ರಚಿಸುವ ನಿರೀಕ್ಷೆ ಹೊಂದಲಾಗಿದೆ. 2030ರ ವೇಳೆಗೆ 30 ಲಕ್ಷಕ್ಕೂ ಹೆಚ್ಚು ಹೊಸ ತಂತ್ರಜ್ಞಾನಾಧರಿತ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಸರ್ವೀಸ್‌ನೌ ಡೈರೆಕ್ಟರ್ ಸುಮೀತ್ ಮಾಥುರ್ ಹೇಳಿದ್ದಾರೆ.
ಸರ್ವೀಸ್ ನೌನ ಎಐ ಮೆಚುರಿಟಿ ಇಂಡೆಕ್ಸ್ ಪ್ರಕಾರ ಸ್ಪಷ್ಟ ಎಐ ದೃಷ್ಟಿಕೋನ, ಪ್ಲಾಟ್‌ಫಾರ್ಮ್ ಫಸ್ಟ್ ಚಿಂತನೆ, ಸೂಕ್ತ ಪ್ರತಿಭಾ ಮಿಶ್ರಣ, ಅತ್ಯುತ್ತಮ ಆಡಳಿತ ಮತ್ತು ಏಜೆಂಟಿಕ್ ಎಐ ಅನುಷ್ಠಾನ ಈ ಐದು ವಿಚಾರಗಳಲ್ಲಿ ಮುಂದೆ ಇರುವ ಉದ್ಯಮಗಳು ಈ ಎಐ ಕಾಲಘಟ್ಟದ ವೇಗಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಿವೆ. ಇದರ ಪರಿಣಾಮ ಬಹಳ ಗಮನಾರ್ಹವಾಗಿದ್ದು, ಶೇ. 57ರಷ್ಟು ಉದ್ಯಮಗಳು ಇದರಿಂದ ಅವರ ದಕ್ಷತೆ ಮತ್ತು ಉತ್ಪಾದಕತೆಯಲ್ಲಿ ಸುಧಾರಣೆ ಹೊಂದಿರುವುದಾಗಿ ತಿಳಿಸಿವೆ.
ಪ್ರಸ್ತುತ ಎಐ-ಸಿದ್ಧ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಕಾರ್ಯನಿರ್ವಹಣಾ ಕ್ರಮವನ್ನು ಮರುವಿನ್ಯಾಸಗೊಳಿಸುವ ಮತ್ತು ನಿರಂತರವಾಗಿ ಆವಿಷ್ಕಾರ ಆಧರಿತ ವ್ಯಾಪಾರ ಮಾದರಿಗಳನ್ನು ಮರುಅಳವಡಿಸಿಕೊಳ್ಳುವ ಮೂಲಕ ಭಾರತವು ಜಾಗತಿಕವಾಗಿ ಮುಂಚೂಣಿ ಸಾಧಿಸುವ ಅವಕಾಶವಿದೆ ಎಂದು ಮಾಥುರ್ ಹೇಳಿದ್ದಾರೆ. ಈ ವರದಿಯು ಭಾರತೀಯ ಉದ್ಯಮಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಜಾಗತಿಕ ಸ್ಪರ್ಧೆ ಎದುರಿಸಲು ಧೈರ್ಯವಾಗಿ ಕಾರ್ಯಗತಗೊಳಿಸುವುದು, ಸಂಯೋಜಿತ ತಂತ್ರ, ಮತ್ತು ವಿಶ್ವಾಸ, ಪಾರದರ್ಶಕತೆ ಮತ್ತು ಕೌಶಲ್ಯ ಆಧರಿತ ಮಾನವ- ಎಐ ಸಹಕಾರ ಬೇಕು ಎಂದು ಸಾರಲಾಗಿದೆ ಎಂದಿದ್ದಾರೆ.
ಕೆಲಸದ ಸ್ಥಳದಲ್ಲಿ ಏಜೆಂಟಿಕ್ ಎಐ: 10.35 ಕೋಟಿ ಭಾರತೀಯ ಉದ್ಯೋಗಗಳಲ್ಲಿ ಬದಲಾವಣೆ
*ಎಐ ಸ್ಕಿಲ್ಸ್ ರಿಸರ್ಚ್ ವರದಿಯು ಉದ್ಯೋಗಗಳಲ್ಲಿನ ಬದಲಾವಣೆಯ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಿದೆ, ಅವುಗಳಲ್ಲಿ ಕೆಲವು ಇಲ್ಲಿವೆ:
* ಹೆಚ್ಚು ಆಟೋಮೇಷನ್ ಸಾಧ್ಯವಿರುವ ಕೆಲಸಗಳಾದ ಚೇಂಜ್ ಮ್ಯಾನೇಜರ್‌ ಗಳು ಮತ್ತು ಪೇರೋಲ್ ಕ್ಲರ್ಕ್‌ ಗಳ ಕಾರ್ಯಗಳನ್ನು ಎಐ ಏಜೆಂಟ್‌ ಗಳು ನಿಭಾಯಿಸುವ ಸಾಧ್ಯತೆ ಇದ್ದು, ಎಐ ಏಜೆಂಟ್ ಗಳು ದೈನಂದಿನ ಕಾರ್ಯ ನಿರ್ವಹಿಸಲಿವೆ.
* ಇಂಪ್ಲಿಮೆಂಟೇಶನ್ ಕನ್ಸಲ್ಟೆಂಟ್‌ ಗಳು ಮತ್ತು ಸಿಸ್ಟಮ್ ಅಡ್ಮಿನ್‌ ಗಳಂತಹ ಕೆಲಸಗಳು ಎಐ ಜೊತೆಗಿನ ಸಹಯೋಗದಲ್ಲಿ ಮುನ್ನಡೆಯಲಿವೆ, ಹೊರತು ಇಲ್ಲಿ ಸ್ಪರ್ಧೆ ಇರುವುದಿಲ್ಲ.
ಉತ್ಪಾದನಾ ವಲಯ (8 ಮಿಲಿಯನ್), ರಿಟೇಲ್ (7.6 ಮಿಲಿಯನ್), ಮತ್ತು ಶಿಕ್ಷಣ (2.5 ಮಿಲಿಯನ್) ಕ್ಷೇತ್ರಗಳಿಗೆ ಈ ಬದಲಾವಣೆಯಿಂದ ಅತಿಹೆಚ್ಚು ಪರಿಣಾಮ ಉಂಟಾಗಲಿದೆ. ಈ ಉದ್ಯಮಗಳ ಕಾರ್ಯನಿರ್ವಹಣೆ ಮತ್ತು ಆವಿಷ್ಕಾರ ವಿಚಾರದಲ್ಲಿ ಎಐ ಭಾರಿ ಬದಲಾವಣೆಯನ್ನು ಉಂಟುಮಾಡುತ್ತದೆ.
ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ ಮತ್ತು ಆಕರ್ಷಕ ಡಿಜಿಟಲ್ ಆರ್ಥಿಕತೆ ಹೊಂದಿರುವ ಭಾರತವು ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿ 3 ಮಿಲಿಯನ್ ತಂತ್ರಜ್ಞಾನ ಉದ್ಯೋಗಿಗಳನ್ನು ಹೊಂದಲಿದೆ. ಉದ್ಯಮಗಳು ಎಐ ಕಾನ್ಫಿಗರೇಟರ್‌ ಗಳು (66%), ಎಕ್ಸ್‌ ಪೀರಿಯೆನ್ಸ್ ಡಿಸೈನರ್‌ ಗಳು (57%), ಮತ್ತು ಡೇಟಾ ಸೈಂಟಿಸ್ಟ್‌ ಗಳಂತಹ (65%) ಭವಿಷ್ಯ ಕೇಂದ್ರಿತ ಉದ್ಯೋಗಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.
ಭಾರತೀಯ ಉದ್ಯಮಗಳ ಎಐ ಪರಿಪಕ್ವತೆಯಲ್ಲಿ ಹೆಚ್ಚಳ
ಎಐ ಮೆಚುರಿಟಿ ಇಂಡೆಕ್ಸ್ ಪ್ರಕಾರ, ಉದ್ಯಮಗಳು ವಾಸ್ತವಿಕ ಎಐ ಬಳಕೆಯತ್ತ ಗಮನ ಹರಿಸುತ್ತಿದ್ದಂತೆ, ಅವರು ಭವಿಷ್ಯದ ಕೇಂದ್ರಿತ ಹುದ್ದೆಗಳಾದ ಎಐ ಕಾನ್ಫಿಗರೇಟರ್‌ಗಳು (66%), ಅನುಭವಿ ವಿನ್ಯಾಸಕಾರರು (57%), ಮತ್ತು ಡೇಟಾ ಸೈಂಟಿಸ್ಟ್‌ ಗಳು (65%) ಇತ್ಯಾದಿ ಹುದ್ದೆಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಉದ್ಯೋಗಿ ಸಮೂಹದ ಗಾತ್ರ ಮತ್ತು ಕೌಶಲ್ಯ ಎರಡೂ ಬೆಳೆಯುತ್ತಿರುವಂತೆ ಉದ್ಯಮದ ಆಕಾಂಕ್ಷೆಗಳು ಕೂಡ ಬೆಳೆಯುತ್ತಾ ಹೋಗುತ್ತಿವೆ. ಭಾರತೀಯ ಸಂಸ್ಥೆಗಳು ಪೈಲಟ್‌ ಗಳು ಮತ್ತು ಪ್ರೂಫ್ ಆಫ್ ಕಾನ್ಸೆಪ್ಟ್‌ ಗಳನ್ನು ಮೀರಿ ಎಐ ಅನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಧೈರ್ಯ ತೋರಿಸುತ್ತಿವೆ ಮತ್ತು ಸಿದ್ಧತೆಯನ್ನು ಮಾಡುತ್ತಿವೆ.
ಈ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ:
* ತಂತ್ರಜ್ಞಾನ ಬಜೆಟ್‌ ನ ಶೇ.13.5ರಷ್ಟನ್ನು ಈಗಾಗಲೇ ಎಐ ಅಳವಡಿಕೆಗೆ ಮೀಸಲಿಡಲಾಗುತ್ತಿದೆ.
* ಶೇ.25ರಷ್ಟು ಭಾರತೀಯ ಉದ್ಯಮಗಳು ಬದಲಾವಣೆ ಹಂತದಲ್ಲಿದ್ದು, ಸಿಂಗಾಪುರ (20%) ಮತ್ತು ಆಸ್ಟ್ರೇಲಿಯಾ (21%) ಮಾರುಕಟ್ಟೆಗಳನ್ನು ಹಿಂದಕ್ಕೆ ಹಾಕಿವೆ.
* ಎಐ ಜೊತೆ ಕಾರ್ಯನಿರ್ವಹಣೆಯನ್ನು ಮರುವಿನ್ಯಾಸಗೊಳಿಸಿದ ಉದ್ಯಮಗಳು ಶೇ.63ರಷ್ಟು ಉತ್ಪಾದಕತೆಯಲ್ಲಿ ಅಭಿವೃದ್ಧಿ ಹೊಂದಿರುವುದಾಗಿ ತಿಳಿಸಿವೆ.
ಎಐ ಅಳವಡಿಕೆಗೆ ಕೌಶಲ್ಯ ಮತ್ತು ಭದ್ರತೆ ಸವಾಲುಗಳು
ಭಾರತದ ಎಐ ಪಯಣವು ಗಮನಾರ್ಹವಾಗಿ ವೇಗವನ್ನು ಪಡೆಯುತ್ತಿದ್ದರೂ ಬಹಳಷ್ಟು ಸವಾಲುಗಳೂ ಇವೆ. ಡೇಟಾ ಭದ್ರತೆಯು ಶೇ.30ರಷ್ಟು ಭಾರತೀಯ ಉದ್ಯಮಗಳಿಗೆ ಪ್ರಮುಖ ಚಿಂತೆಯಾಗಿದೆ. ಜೊತೆಗೆ, ಶೇ.26ರಷ್ಟು ಸಂಸ್ಥೆಗಳಿಗೆ ಭವಿಷ್ಯದ ಅಗತ್ಯ ಕೌಶಲ್ಯಗಳ ಕುರಿತು ಸ್ಪಷ್ಟತೆ ಇಲ್ಲ. ಇದು ಕಾರ್ಯತಂತ್ರದ ದೂರದೃಷ್ಟಿ ಮತ್ತು ಕ್ರಾಸ್-ಫಂಕ್ಷನಲ್ ರೀಸ್ಕಿಲ್ಲಿಂಗ್ ದಾರಿಯನ್ನು ಕಂಡುಕೊಳ್ಳುವ ತುರ್ತು ಅಗತ್ಯವನ್ನು ಸಾರುತ್ತದೆ.
ಭಾರತೀಯ ಉದ್ಯಮಗಳು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಾದರೆ ಎಐ ಒದಗಿಸುವ ಫಲಿತಾಂಶಗಳನ್ನು ಪರಿಶೀಲಿಸಲು ಉದ್ಯೋಗಿಗಳನ್ನು ಸಜ್ಜುಗೊಳಿಸುವುದರ ಜೊತೆಗೆ ಆ ಫಲಿತಾಂಶಗಳಿಗೆ ಕಾರಣವಾದ ಪ್ರಕ್ರಿಯೆಗಳು ಮತ್ತು ಡೇಟಾವನ್ನು ಸಕ್ರಿಯವಾಗಿ ಪರಿಶೋಧಿಸುವಂತೆ ಸಜ್ಜುಗೊಳಿಸಬೇಕು. ಎಐ-ಚಾಲಿತ ಸಂಸ್ಥೆಯಾಗಲು ವಿಶ್ವಾಸದಿಂದ ಬೆಳೆಸಲು, ಸ್ವಾಯತ್ತತೆಯನ್ನು ಸಾಧಿಸಲು ಮತ್ತು ಮಾನವ ಸಾಮರ್ಥ್ಯವನ್ನು ಎಲ್ಲಾ ಕೆಲಸಗಳಲ್ಲಿ ಹೆಚ್ಚಿಸಲು ಎಐ ಅನ್ನು ಸಂಯೋಜಿಸುವುದು ಅತ್ಯಗತ್ಯ.
ಉದ್ಯೋಗಿ ಕೇಂದ್ರಿತ ವಿಧಾನದಿಂದ ಎಐ-ಚಾಲಿತ ಆರ್ಥಿಕತೆ ಕಡೆಗೆ ಭಾರತ ಧಾವಿಸುತ್ತಿರುವ ಈ ವೇಳೆಯಲ್ಲಿ ಜವಾಬ್ದಾರಿಯುತ ಆವಿಷ್ಕಾರ ವಿಚಾರದಲ್ಲಿ ಮತ್ತು ತನ್ನ ಪ್ರತಿಭಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸುವ ವಿಚಾರದಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಲು ಭಾರತಕ್ಕೆ ಈಗ ಒಂದು ಐತಿಹಾಸಿಕ ಅವಕಾಶ ಲಭ್ಯವಿದೆ.
ಸರ್ವೀಸ್ ನೌನ ಎಐ ಮೆಚುರಿಟಿ ಇಂಡೆಕ್ಸ್ ಸಂಶೋಧನೆಯ ಕಾರ್ಯವಿಧಾನ:
ಉದ್ಯಮದ ಎಐ ಪರಿಪಕ್ವತೆಯ ಪ್ರಸ್ತುತ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಸರ್ವೀಸ್‌ನೌ ಆಕ್ಸ್ ಫರ್ಡ್ ಎಕಾನಾಮಿಕ್ಸ್ ಜೊತೆಗಿನ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ 4,473 ಹಿರಿಯ ಉದ್ಯಮ ನಾಯಕರ ಸಮೀಕ್ಷೆ ಮಾಡಿದೆ. ಇದರಲ್ಲಿ ಭಾರತದ 511 ಉದ್ಯಮ ನಾಯಕರು ಸೇರಿದ್ದಾರೆ. ಪ್ರಮುಖ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ನಡೆಯಲು ಹೇಗೆ ಎಐ ಅನ್ನು ಅಳವಡಿಸಿಕೊಳ್ಳುತ್ತಿದ್ದಾರೆ ತಿಳಿಯುವ ಪ್ರಯತ್ನ ನಡೆಸಲಾಗಿದೆ.

ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್, 378 ಕೋಟಿ ರೂ. ಮಾಯ

TAGGED:AI to replace 103.5 crore jobs in India by 2030: Study
Share This Article
Facebook Twitter Copy Link Print
Previous Article ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್, 378 ಕೋಟಿ ರೂ. ಮಾಯ
Next Article ಸಚಿವ ಕೆ.ಜೆ.ಜಾರ್ಜ್ ಆಪ್ತರಿಗೆ IT ಅಧಿಕಾರಿಗಳ ಬಿಗ್ ಶಾಕ್

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?