Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಧರ್ಮಸ್ಥಳ ಪ್ರಕರಣ : 2ನೇ ದಿನವೂ ಸಿಗದ ಯಾವುದೇ ಅಸ್ತಿಪಂಜರ, ಮುಂದುವರೆದ ಶೋಧ
ಕರ್ನಾಟಕಪ್ರಮುಖ

ಧರ್ಮಸ್ಥಳ ಪ್ರಕರಣ : 2ನೇ ದಿನವೂ ಸಿಗದ ಯಾವುದೇ ಅಸ್ತಿಪಂಜರ, ಮುಂದುವರೆದ ಶೋಧ

Share
1 Min Read
SHARE

newsics.com

ದಕ್ಷಿಣಕನ್ನಡ : ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು ಹೂತುಹಾಕಿರುವ ಬಗ್ಗೆ ಅನಾಮಿಕ ವ್ಯಕ್ತಿ ದೂರುಕೊಟ್ಟ ಬಳಿಕ, ಎಸ್‌ಐಟಿ ತಂಡ ತನಿಖೆ ನಡೆಸುತ್ತಿದ್ದು, ಮಂಗಳವಾರ ದೂರುದಾರ ತೋರಿಸಿದ ಜಾಗದಲ್ಲಿ ಅಗೆಯಲು ಆರಂಭ ಮಾಡಿತ್ತು. ಆದರೆ ಮೊದಲ ದಿನ ಆತ ತೋರಿಸಿದ ಜಾಗದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ.
ಇಂದು ಸಹ ಶೋಧ ಕಾರ್ಯ ಮುಂದುವರೆದಿದ್ದು ಯಾವುದೇ ಅಸ್ತಿಪಂಜರ ದೊರೆತಿಲ್ಲ.
ಇಂದು ಎರಡನೇ ಜಾಗದಲ್ಲಿ ಕಾರ್ಯಾಚರಣೆ ಆರಂಭ ಆಗಲಿದೆ. ಇಂದು ಏಕಕಾಲದಲ್ಲಿ 3 ಕಡೆ ಅಗೆಯುವ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ನೇತ್ರಾವತಿ ಸ್ನಾನಘಟ್ಟದ ಪ್ರದೇಶಕ್ಕೆ ಮುಸುಕುದಾರಿಯಾಗಿರುವ ದೂರುದಾರ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ್ದಾನೆ. ಎಸ್‌ಐಟಿ ತಂಡದ ಅಧಿಕಾರಿಗಳೂ ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಆತ ತೋರಿಸಿದ ಜಾಗದಲ್ಲಿ ಗುಂಡಿ ಅಗೆಯಲು ಬೇಕಾದ ಸಲಕರೆಗಳು , ಮಿನಿ ಹಿಟಾಚಿಯು ಬಂದಿದ್ದು, ಆದರೆ ಇಂದು ಕೂಡ ಯಾವುದೇ ಅಸ್ತಿಪಂಜರ ದೊರೆತಿಲ್ಲ.
ಮೊದಲ ಹಂತದಲ್ಲಿ ಸ್ಥಳೀಯ 12 ಪೌರ ಕಾರ್ಮಿಕರ ಸಹಕಾರದಲ್ಲಿ ಅಗೆಯುವ ಕಾರ್ಯ ಆರಂಭ ವಾಯಿತು. ಸುಮಾರು 3 ಗಂಟೆ ಅಗೆದು ಸುಮಾರು 4 ಡಿ ಆಳ, 6 ಅಡಿ ಉದ್ದದ ಹೊಮಡ ತೋಡಿದರೂ ಯಾವುದೇ ಕುರುಹು ಸಿಗಲಿಲ್ಲ. ಕಾರ್ಯಾಚರಣೆಯ ಸ್ಥಳ ನದಿ ಸಮೀಪವಾದ್ದರಿಂದ ನೀರಿನ ಒರತೆ, ಮೇಲೆ ಬೀಳುತ್ತಿದ್ದ ಕಲ್ಲು, ಮಣ್ಣು ಅಡ್ಡಿಯಾಯಿತು. ಮಂಗಳವಾರ ನೇತ್ರಾವತಿ ಸ್ನಾನಘಟ್ಟದ ಬಳಿ ಪುತ್ತೂರು ಎಸಿ ಸಮ್ಮುಖದಲ್ಲಿ 6 ತಾಸಿಗೂ ಹೆಚ್ಚು ಕಾಲ ಅಗೆಯುವ ಕಾರ್ಯ ಮಾಡಲಾಗಿತ್ತು.
ಈ ಪ್ರಕ್ರಿಯೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರೂ ಸಹ ಆಗಮಿಸಿದ್ದರು. ಡಿಐಜಿ ಅನುಚೇತ್, ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸ್ಪಿ ಸೈಮನ್, ಪುತ್ತೂರು ಎಸಿ ಸ್ಟ್ರೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಕಂದಾಯ, ಅರಣ್ಯ, ಎಫ್‌ಎಸ್‌ಎಲ್ ಸೋಕೋ ವಿಭಾಗ, ಆಂತರಿಕ ಭದ್ರತಾ ದಳ , ಪೊಲೀಸ್ ತಂಡ ನಿನ್ನೆ 12 ಗಂಟೆಗೆ ಕಾರ್ಯಾಚರಣೆ ಆರಂಭಿಸಿತ್ತು.

Prajwal Revanna ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಮತ್ತೆ ಮುಂದೂಡಿಕೆ

TAGGED:Dharmasthala burial case: No skeleton found even on the 2nd daysearch continues
Share This Article
Facebook Twitter Copy Link Print
Previous Article Prajwal Revanna ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಮತ್ತೆ ಮುಂದೂಡಿಕೆ
Next Article ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಐತಿಹಾಸಿಕ ತೀರ್ಪು ನೀಡಿದ ಕೋರ್ಟ್

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?