newsics.com
ಭೂಮಿಕಾ ರಮೇಶ್ ಅವರು ಕನ್ನಡ ಕಿರುತೆರೆಯಲ್ಲಿ ಯಶಸ್ವಿಯಾಗಿರುವ ನಟಿ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಅವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಬಾಲ್ಯದಿಂದಲೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಭೂಮಿಕಾ, ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ.
ಇದೀಗ ನಟಿ ಭೂಮಿಕಾ ರಮೇಶ್ ತೆಲುಗು ಸೀರಿಯಲ್ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಇದೀಗ ಹೊಚ್ಚ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸಿಂಪಲ್ ಆಗಿ ಕಪ್ಪು ಬಣ್ಣದ ಸೀರೆಯುಟ್ಟು, ಗುಂಗುರು ಕೂದಲು ಇಳಿಬಿಟ್ಟು ಎಷ್ಟು ಸಿಂಪಲ್ ಆಗಿ ಕಾಣಿಸ್ತಿದ್ದಾರೋ, ಅಷ್ಟೇ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ಭೂಮಿಕಾ.ಭೂಮಿಕಾರ ಸೆಳೆಯುವ ಕಣ್ಣೋಟ, ಚಂದಕ್ಕೆ ಅಭಿಮಾನಿಗಳು ಮನಸೋತಿದಿದ್ದಾರೆ.
ಇತ್ತೀಚೆಗಷ್ಟೇ ನಟಿ ಭೂಮಿಕಾ ರಮೇಶ್ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮದುವೆ ಸಂದರ್ಭದಲ್ಲಿ ರೀ ಎಂಟ್ರಿ ಕೊಟ್ಟಿದ್ದರು. ಸಂಪ್ರದಾಯದಲ್ಲಿ ಸುತ್ತುವರೆದಿದೆ, ನಂಬಿಕೆಯಲ್ಲಿ ಬೇರೂರಿದೆ. ಪ್ರತಿಯೊಂದು ಪ್ರಾರ್ಥನೆಯಲ್ಲಿ ಶಾಂತಿ ಇದೆ ಮತ್ತು ಪ್ರತಿಯೊಂದು ಮಡಿಲಲ್ಲಿ ಅನುಗ್ರಹವಿದೆ ಎಂದು ಬರೆದುಕೊಂಡಿದ್ದಾರೆ.